ಕೊರಟಗೆರೆ : ಪ್ರತಿ ಮಗುವು ತನ್ನದೇ ಆದ ಪ್ರತಿಭೆ ಹೊಂದಿರುತ್ತಾರೆ. ಇದನ್ನು ಗುರುತಿಸಿ ಪ್ರೋತ್ಸಾಹಿಸುವ ಜವಾಬ್ದಾರಿ ಶಿಕ್ಷಕರು ಮತ್ತು ಪಾಲಕರ ಮೇಲಿದೆ ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ತಿಳಿಸಿದರು.
ತಾಲೂಕು ಚೆನ್ನರಾಯನದುರ್ಗ ಹೋಬಳಿಯ ಗೊಂದಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ವಾರ್ಷಿಕೋತ್ಸವದಲ್ಲಿ ವಾತನಾಡಿ, ಶಾಲೆ ಕೇವಲ ಪಾಠ ಹೇಳಿಕೊಡುವ ಸ್ಥಳವಲ್ಲ, ಇದು ಮಕ್ಕಳ ಭವಿಷ್ಯ ರೂಪುಗೊಳ್ಳುವ ಪವಿತ್ರ ವೇದಿಕೆ. ಸಂಸ್ಕಾರವಿಲ್ಲದ ಶಿಕ್ಷಣ ಅಪೂರ್ಣ, ಮಕ್ಕಳಿಗೆ ವಿದ್ಯೆಯ ಜತೆ ಉತ್ತಮ ಸಂಸ್ಕಾರ ಒದಗಿಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಫೈರೋಜಾ ಬೇಗಂ ವಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗಾಗಿ ಸೃಜನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಉತ್ತಮ ವಿಚಾರ ಎಂದರು.
ಮುಖಂಡರಾದ ರಂಗರಾಜು, ರಾಮಚಂದ್ರಪ್ಪ, ಎಸ್‌ಡಿಎಂಸಿ ವಾಜಿ ಅಧ್ಯಕ್ಷ ಯೋಗೇಶ್, ಶಿಕ್ಷಕರಾದ ಅರಸಪ್ಪ, ಜೆ.ಎಲ್.ರಾಧಮ್ಮ, ಕವಿತಾ ಇದ್ದರು.