ಗ್ರಾಮೀಣ ಕಲೆ, ಕಲಾವಿದರನ್ನು ಪ್ರೋತ್ಸಾಹಿಸಿ / SULIBELE

ಸೂಲಿಬೆಲೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜೇನುಗೂಡು ಟ್ರಸ್ಟ್​ನಿಂದ ಹಮ್ಮಿಕೊಂಡಿದ್ದ ಸಂಗೀತೋತ್ಸವದಲ್ಲಿ ವಿಜೇತರಿಗೆ ಟ್ರಸ್ಟ್​ ಉಪಾಧ್ಯಕ್ಷ ಚೌಡೇಗೌಡ ಪ್ರಮಾಣ ಪತ್ರ ವಿತರಿಸಿದರು. ಪ್ರಾಂಶುಪಾಲ ವೆಂಕಟೇಶ್​, ತರಬಹಳ್ಳಿ ಹರೀಶ್​, ಸೈಯದ್​ ಮೆಹಬೂಬ್​ ಇತರರು ಇದ್ದರು.
ಸೂಲಿಬೆಲೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜೇನುಗೂಡು ಟ್ರಸ್ಟ್​ನಿಂದ ಹಮ್ಮಿಕೊಂಡಿದ್ದ ಸಂಗೀತೋತ್ಸವದಲ್ಲಿ ವಿಜೇತರಿಗೆ ಟ್ರಸ್ಟ್​ ಉಪಾಧ್ಯಕ್ಷ ಚೌಡೇಗೌಡ ಪ್ರಮಾಣ ಪತ್ರ ವಿತರಿಸಿದರು. ಪ್ರಾಂಶುಪಾಲ ವೆಂಕಟೇಶ್​, ತರಬಹಳ್ಳಿ ಹರೀಶ್​, ಸೈಯದ್​ ಮೆಹಬೂಬ್​ ಇತರರು ಇದ್ದರು.
Published on
ಸೂಲಿಬೆಲೆ : ಗ್ರಾಮೀಣ ಭಾಗದ ಅನೇಕ ಕಲೆಗಳಿಗೆ ಸೂಕ್ತ ವೇದಿಕೆ ಕಲ್ಪಿಸದಿದ್ದರೆ ಅವು ಕಣ್ಮರೆಯಾಗುತ್ತವೆ. ಹಾಗಾಗಿ ಸಂಘ&ಸಂಸ್ಥೆಗಳ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಿ ವೇದಿಕೆ ನೀಡಿದರೆ ನಮ್ಮ ಸಾಂಪ್ರದಾಯಿಕ ಕಲೆಗಳನ್ನು ಉಳಿಸಬಹುದು ಎಂದು ರಂಗಕಲಾವಿದ ಡಿ.ಲಕ್ಷಿ$್ಮನಾರಾಯಣ್​ ಹೇಳಿದರು.
ಸೂಲಿಬೆಲೆ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಬಚ್ಚೇಗೌಡ ಸಭಾ ಭವನದಲ್ಲಿ ಜೇನುಗೂಡು ಗ್ರಾಮೀಣಾಭಿವೃದ್ಧಿ ಮತ್ತು ಸಾಂಸತಿಕ ಟ್ರಸ್ಟ್​ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಗೀತೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಭಾಗದ ಕಲೆಗಳನ್ನು ಉಳಿಸಿ ಬೆಳೆಸುವ ಹಾಗೂ ಕಲೆಗಾರರನ್ನು ಪ್ರೋತ್ಸಾಯಿಸುವ ನಿಟ್ಟಿನಲ್ಲಿ ಟ್ರಸ್ಟ್​ ಹೆಚ್ಚು ಕ್ರಿಯಾಶೀಲವಾಗಿದೆ ಎಂದರು.
ಮುರಾರ್ಜಿ ದೇಸಾಯಿ ವಸತಿ ಶಾಲೆಪ್ರಾಂಶುಪಾಲ ವೆಂಕಟೇಶ್​ ಮಾತನಾಡಿ, ದೃಶ್ಯ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಕೃಪೆಯಿಂದ ಯುವ ಸಮುದಾಯ ಕಲೆಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಗ್ರಾಮೀಣ ಭಾಗದ ಕಲೆಗಳನ್ನು ಯುವ ಸಮುದಾಯ ಉಳಿಸುವ ಕೆಲಸ ಮಾಡಬೇಕು ಎಂದರು.
ಜೇನುಗೂಡು ಟ್ರಸ್ಟ್​ ಉಪಾಧ್ಯಕ್ಷ ಚೌಡೇಗೌಡ ಮಾತನಾಡಿ ನಮ್ಮ ಟ್ರಸ್ಟ್​ವತಿಯಿಂದ ಸಾಂಸತಿಕ ಕಾರ್ಯಕ್ರಮಗಳಲ್ಲದೇ ಆರೋಗ್ಯ, ನೇತ್ರ ತಪಾಸಣೆ ಶಿಬಿರಗಳು, ರಕ್ತದಾನ ಶಿಬಿರಗಳು ಹಾಗೂ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲಾಗಿದೆ ಎಂದರು. ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಎಂ.ಪ್ರಶಾಂತ್​, ಬೆಟ್ಟಹಳ್ಳಿ ಗೋಪಿನಾಥ್​ ಮಾತನಾಡಿದರು.
ನಿಶಾ ಮತ್ತು ತಂಡದಿಂದ ಭರತನಾಟ್ಯ, ಸಮರ್ಥ ಮತ್ತು ತಂಡದಿಂದ ಜಾನಪದ ನೃತ್ಯ, ಅರುಣ್​ ಕುಮಾರ್​ ತಂಡದಿಂದ ಜಾನಪದ ಗೀತೆ, ಮುನಿಕೃಷ್ಣ ತಂಡದಿಂದ ಸುಗಮಸಂಗೀತ, ತನುಶ್ರೀ ತಂಡದಿಂದ ಭರತನಾಟ್ಯ, ಚಿನ್ಮಿತ ತಂಡದಿಂದ ಸಮೂಹ ನೃತ್ಯ, ಸಂತೋಷ ತಂಡದಿಂದ ಜಾನಪದ ಗೀತೆ, ಸ್ಟುಡಿಯೋ ಆನಂದ್​ ತಂಡದವರು ರಂಗಗೀತೆಗಳನ್ನು ಪ್ರಸ್ತುತ ಪಡಿಸಿದರು. ಕಲಾವಿದರಿಗೆ ಪ್ರಮಾಣ ಪತ್ರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಜೇನುಗೂಡು ಟ್ರಸ್ಟ್​ನ ಸಂಘಟನಾ ಕಾರ್ಯದರ್ಶಿ ವಸಂತಕುಮಾರ್​, ನಿರ್ದೇಶಕ ಸೈಯದ್​ ಮೆಹಬೂಬ್​, ತರಬಹಳ್ಳಿ ಹರೀಶ್​, ಅತ್ತಿಬೆಲೆ ಮಂಜುನಾಥ್​, ನಯಾಜ್​ ಖಾನ್​, ಜಿಯಾವುಲ್ಲಾ, ಕಲಾವಿದೆ ತನುಶ್ರೀ, ವಸತಿ ಶಾಲೆಶಿಕ್ಷಕರಾದ ರುತ್​ ಜೆಸೆಂತಾ, ರಕ್ಷಿತಾ, ಗಂಗಾಧರ್​ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net