ಜಾನಪದ ಕಲಾವಿದರನ್ನು ಪ್ರೋತ್ಸಾಹಿಸಿ

Encourage folk artists
Encourage folk artists
Published on
ಗೌರಿಬಿದನೂರು: ಆಧುನಿಕರಣದ ಭರಾಟೆಯಲ್ಲಿ ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಪೂರ್ವಜರು ಬಿಟ್ಟ ಹೋದ ಸಂಸತಿ, ಕಲೆಗಳನ್ನು ಮರೆಯಬಾರದು ಎಂದು ಶಿಕ್ಷಕ ಬಾಲಪ್ಪ ತಿಳಿಸಿದರು.
ತಾಲೂಕಿನ ನರಸಾಪುರದಲ್ಲಿ ಗ್ರಾಮೀಣ ಯುವ ಕಲಾ ಸಂಘ ಗೊಟ್ಲಗುಂಟೆ, ಆದರ್ಶ ಮಹಿಳಾ ಸಾಮಾಜಿಕ ಸಾಂಸತಿಕ ಸಂಸ್ಥೆ, ಬೆಂಗಳೂರು ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದಲ್ಲಿ ನೆಲಮೂಲ ಕಲೆಗಳ ಪುನರುತ್ಥಾನ, ಜನಪದ ಅರಿವಿನ ಯಾನ, ಜನಪದ ಕಲೆಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಾನಪದ ಸಾಂಸತಿಕ ಸಂಪತ್ತಾಗಿದ್ದು, ಮುಂದಿನ ಪೀಳಿಗೆ ಮುಂದುವರೆಸಿಕೊಂಡು ಹೋಗಲು ಆಸಕ್ತಿ ಬೆಳೆಸಬೇಕು. ಕಲೆ, ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಬೇಕು.ಯಾರಿಗೆ ಸಂಸತಿಯ ಅರಿವು ಮತ್ತು ಅನುಸರಿಸುತ್ತಾರೊ ಅಂತವರಿಗೆ ಸಂಸ್ಕಾರವಿರುತ್ತದೆ. ಅಮೂಲ್ಯವಾದ ಕಲೆಯನ್ನು ಗ್ರಾಮೀಣ ಯುವ ಕಲಾ ಸಂಘ ಯುವಜನರಿಗೆ ಕಲಿಸಿ, ಮುಂದುವರಿಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಆದರ್ಶ ಮಹಿಳಾ ಸಾಮಾಜಿಕ ಸಾಂಸತಿಕ ಸಂಸ್ಥೆ ಅಧ್ಯೆ ರೋಜಮ್ಮ ಮಾತನಾಡಿ, ಸಾಮಾಜಿಕ ಜಾಲತಾಣಗಳ ಅಬ್ಬರದ ನಡುವೆ ಜನಪದ ಕಲೆಗೆ ಕುತ್ತು ಬಂದಿದೆ. ಜಾನಪದ ಕಲಾವಿದರು ಹಲವಾರು ಸಂಕಷ್ಟಗಳ ನಡುವೆ ಗ್ರಾಮೀಣ ಕಲೆ ಉಳಿಸುತ್ತಿದ್ದಾರೆ ಎಂದರು.
ಗ್ರಾಮೀಣ ಯುವ ಕಲಾ ಸಂಘದ ಅಧ್ಯಕ್ಷ ಗೊಟ್ಲಗುಂಟೆ ವೆಂಕಟರಮಣಪ್ಪ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಯುವ ಜನಾಂಗ ಪಾಶ್ಚಾತ್ಯ ಸಂಗೀತಕ್ಕೆ ಮಾರು ಹೋಗಿ ಗ್ರಾಮೀಣ ಸೊಗಡು ಹೊಂದಿರುವ ಬದುಕಿನ ಚಿತ್ರಣ ಪರಿಚಯಿಸುವ ಜಾನಪದ ಕಲೆಗಳಿಂದ ದೂರ ಸರಿಯುತ್ತಿರುವುದು ವಿಷಾದನೀಯ ಎಂದರು.
ದೊಡ್ಡ ಅವಲಪ್ಪ, ಕೆ.ಶಾಂತರಾಜು, ಕಲಾವಿದರಾದ ಮುದ್ದುಕೃಷ್ಣ, ಶಮೀರಾ, ಗಂಗಮ್ಮ, ಬಾಲಕೃಷ್ಣ, ನರಸಿಂಹಮೂರ್ತಿ, ವೆಂಕಟಸ್ವಾಮಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net