ವಿಜಯಪುರ : ಭರತನಾಟ್ಯ, ಸಂಗೀತ ಮತ್ತು ಸಾಹಿತ್ಯ ಕಲೆಗಳಲ್ಲಿ ಮಕ್ಕಳು ಆಸಕ್ತಿಯಿಂದ ಕಲಿತುಕೆೊಂಡರೆ ಭವಿಷ್ಯ ಉಜ್ವಲವಾಗಲಿದೆ ಎಂದು ಬಿಎಲ್‌ಡಿಇ ಕಾಲೇಜಿನ ಪ್ರೊ. ರಂಜಿತಾ ಕೆ.ಆರ್. ಮಲ್ಲಣ್ಣ ಹೇಳಿದರು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಾಟಕ ಅಕಾಡೆಮಿ ವಿಜಯಪುರ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರಥಮ ಪಲ್ಲವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚುತ್ತಿದೆ. ಅಂತಹದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳನ್ನು ಇಂತಹ ಭರತನಾಟ್ಯ, ಕಲೆ, ಸಾಹಿತ್ಯ, ಸಂಗೀತ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದರ ಜತೆಗೆ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಶರಣು ಸಬರದ ಮಾತನಾಡಿ, ಪಾಲಕರು ತಮ್ಮ ಮಕ್ಕಳ ಚಲನವಲನಗಳ ಮೇಲೆ ನಿಗಾ ಇರಿಸುವುದರ ಜತೆಗೆ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಪ್ರೇರೆಪಿಸಬೇಕು ಎಂದರು.
ನಂತರ ನಡೆದ ಕಾರ್ಯಕ್ರಮದಲ್ಲಿ ಆಯೋಜಕಿ ಲಕ್ಷ್ಮಿ ತೆರದಾಳಮಠ, ವಿದುಷಿ ಸುಭಿದಾ ದೇಶಪಾಂಡೆ, ನಾಗಶ್ರೀ ಕುಲಕರ್ಣಿ, ವಿಜಯಲಕ್ಷ್ಮಿ ಪಟೇಲ, ರವಿ ಕೊಣ್ಣೂರ. ಆನಂದ ಇಂಗಳೇಶ್ವರ, ರಾಹುಲ್ ಜಿ., ರಕ್ಷಾ ಮುಚ್ಚಂಡಿ, ರೇಷ್ಮೆ ಜಿ., ಗೌರಿ ಜೋಶಿ ಭರತನಾಟ್ಯ ಪ್ರದರ್ಶಿಸಿದರು.