_1786555216364.webp?w=480&auto=format%2Ccompress&fit=max)
_1786555216364.webp?w=480&auto=format%2Ccompress&fit=max)
ಹುಣಸೂರು:
ವಿಬಿ ಜಿ ರಾಮ್‌ಜೀ ಯೋಜನೆಯ ಮೂಲಕ ನಿಮ್ಮೂರಿನಲ್ಲೇ ಉದ್ಯೋಗದೊಂದಿಗೆ ವಾರ್ಷಿಕ 47 ಸಾವಿರ ರೂ.ಗಳ ಆದಾಯ ಗಳಿಸಬಹುದಾಗಿದೆ ಎಂದು ಮೂಕನಹಳ್ಳಿ ಗ್ರಾಮ ಪಂಚಾಯಿತಿಯ ಪಿಡಿಒ ಶ್ರೀಶೈಲಾ ತಿಳಿಸಿದರು.
ಗ್ರಾ.ಪಂ.ವ್ಯಾಪ್ತಿಯಲ್ಲಿ ಆಯೋಜಿಸಿದ್ದ ರೋಜ್ಗಾರ್ ದಿವಸ್ ಆಚರಣೆ ಮತ್ತು ಜು.1ರಿಂದ ಆರಂಭಗೊಂಡಿರುವ ವಿಬಿ ಜಿ ರಾಮ್ ಜೀ ಯೋಜನೆಯ ಪ್ರಚಾರಕ್ಕಾಗಿ ಮನೆಮನೆಗಳಿಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತನಾಡಿದರು.
ನರೇಗಾ ಯೋಜನೆಯ ಮುಂದುವರಿದ ಭಾಗವಾಗಿ ವಿಬಿ ಜಿ ರಾಮ್‌ಜೀ ಯೋಜನೆ ಜಾರಿಗೊಂಡಿದೆ. ಈ ಹಿಂದೆ ನರೇಗಾ ಯೋಜನೆಯಡಿ ಇದ್ದ 100 ದಿನಗಳ ಮಾನವ ದಿನಗಳನ್ನು 125ದಿನಗಳಿಗೆ ಹೆಚ್ಚಿಸಲಾಗಿದೆ. ಅಲ್ಲದೆ ಕೂಲಿ ಮೊತ್ತ ಒಂದು ದಿನಕ್ಕೆ ರೂ.370 ಇದ್ದದ್ದು,ಇದೀಗ 382 ರೂ.ಗಳಾಗಿದೆ. ನಿಮ್ಮೂರಿನಲ್ಲೇ ನಿಮಗೆ ಉದ್ಯೋಗಾವಕಾಶ ದೊರೆಯಲಿದ್ದು, ಆ ಮೂಲಕ ಗ್ರಾಮದ ಸಾಮುದಾಯಿಕ ಕಾಮಗಾರಿಯಲ್ಲಿ ಪಾಲ್ಗೊಂಡ ಸಮಾಧಾನವೂ ನಿಮಗೆ ಸಿಗಲಿದೆ. ಮನೆ ಬಾಗಿಲಿನಲ್ಲಿ ಉದ್ಯೋಗ ದೊರೆತು ವಾರ್ಷಿಕ 47,750 ರೂ.ಗಳ ಮೊತ್ತದೊಂದಿಗೆ ಆರ್ಥಿಕ ಸಬಲೀಕರಣ ಪಡೆಯಬಹುದಾಗಿದೆ. ಆಸಕ್ತರು ನಮೂನೆ 6ರಲ್ಲಿ ಬೇಡಿಕೆ ಸಲ್ಲಿಸಬಹುದಾಗಿದೆ ಎಂದರು.
ಈ ವೇಳೆ ತಾಲೂಕು ಐಇಸಿ ಸಂಯೋಜಕಿ ಪುಷ್ಪಾವತಿ, ಕಾರ್ಯದರ್ಶಿ ಸ್ವಾಮಿ, ಕರವಸೂಲಿಗಾರ ಲೋಕೇಶ್ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಮತ್ತು ಗ್ರಾಮಸ್ಥರು ಹಾಜರಿದ್ದರು.