ನಂತರ ನೀಲಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಎನ್ಆರ್ಎಲ್ಎಂ ಸಂಜೀವಿನಿ ಘಟಕಕ್ಕೆ ಭೇಟಿ ನೀಡಿ, ಕಾವೇರಿ ಸಂಜೀವಿನಿ ಒಕ್ಕೂಟದ ಸದಸ್ಯರೊಂದಿಗೆ ಚರ್ಚೆ ನಡೆಸಿದರು. ಇರಕಸಂದ್ರ ಕಾಲನಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಿರುವ ಶಾಲಾ ಭೋಜನಾಲಯವನ್ನು ಪರಿಶೀಲಿಸಿ, ನಂತರ ಕುರಂಕೋಟೆ ಗ್ರಾಪಂ ವ್ಯಾಪ್ತಿಯ ದಾಸಾಲುಕುಂಟೆ ಗ್ರಾಮದಲ್ಲಿ ಶ್ರೀ ಭುವನೇಶ್ವರಿ ಸ್ತ್ರೀಶಕ್ತಿ ಸ್ವಸಹಾಯ ಸಂಘದಿಂದ ನಡೆಸಲಾಗುತ್ತಿರುವ ಸೀರೆ ಕೈಮಗ್ಗ ಘಟಕಕ್ಕೆ ಭೇಟಿ ನೀಡಿ, ಉತ್ಪಾದನಾ ಚಟುವಟಿಕೆಗಳ ಕುರಿತು ಸದಸ್ಯರೊಂದಿಗೆ ಸಂವಾದ ನಡೆಸಿದರು.