ಸಾಂಸ್ಕೃತಿಕ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ಅಗತ್ಯ

ಬಸವಕಲ್ಯಾಣದ  ದಿವ್ಯಜಿವನ ಚಾರಿಟೇಬಲ್​ ಟ್ರಸ್ಟ್​ನ ಶರಣ ಭಾರತ ಸಂಶೋಧನೆ ಮತ್ತು ತರಬೇತಿ ಕೇಂದ್ರ ಮತ್ತು ಕಲಬುರಗಿ ಸಿಯುಕೆ ಮಧ್ಯೆ ಮಂಗಳವಾರ ಒಡಂಬಡಿಕೆ ನಡೆದು, ಕುಲಸಚಿವ ಪ್ರೊ.ಆರ್​.ಆರ್​.ಬಿರಾದಾರ್​ ಮತ್ತು ಡಾ.ಬಾಬಾಸಾಹೇಬ ಗಡ್ಡೆ ಒಪ್ಪಂದ ಪತ್ರ ವಿನಿಮಯ ಮಾಡಿಕೊಂಡರು. ಪ್ರೊ.ಬಟ್ಟು ಸತ್ಯನಾರಾಯಣ, ಡಾ.ಜಗದೀಶ ಬಿರೇದಾರ, ಡಾ.ನಿತಿನ್​ ಬಿ, ಪ್ರೊ.ವಿಕ್ರಮ ವಿಸಾಜಿ, ಪ್ರೊ.ಪಾಂಡುರಂಗ ಪತ್ತಿ, ಡಾ.ಗಣಪತಿ ಸಿನ್ನೂರ್​ ಇತರರಿದ್ದರು.
ಬಸವಕಲ್ಯಾಣದ ದಿವ್ಯಜಿವನ ಚಾರಿಟೇಬಲ್​ ಟ್ರಸ್ಟ್​ನ ಶರಣ ಭಾರತ ಸಂಶೋಧನೆ ಮತ್ತು ತರಬೇತಿ ಕೇಂದ್ರ ಮತ್ತು ಕಲಬುರಗಿ ಸಿಯುಕೆ ಮಧ್ಯೆ ಮಂಗಳವಾರ ಒಡಂಬಡಿಕೆ ನಡೆದು, ಕುಲಸಚಿವ ಪ್ರೊ.ಆರ್​.ಆರ್​.ಬಿರಾದಾರ್​ ಮತ್ತು ಡಾ.ಬಾಬಾಸಾಹೇಬ ಗಡ್ಡೆ ಒಪ್ಪಂದ ಪತ್ರ ವಿನಿಮಯ ಮಾಡಿಕೊಂಡರು. ಪ್ರೊ.ಬಟ್ಟು ಸತ್ಯನಾರಾಯಣ, ಡಾ.ಜಗದೀಶ ಬಿರೇದಾರ, ಡಾ.ನಿತಿನ್​ ಬಿ, ಪ್ರೊ.ವಿಕ್ರಮ ವಿಸಾಜಿ, ಪ್ರೊ.ಪಾಂಡುರಂಗ ಪತ್ತಿ, ಡಾ.ಗಣಪತಿ ಸಿನ್ನೂರ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕುಲಪತಿ ಪ್ರೊ.ಸತ್ಯನಾರಾಯಣ ಹೇಳಿಕೆ
  • ಶರಣ ಭಾರತ ಸಂಶೋಧನೆ, ತರಬೇತಿ ಕೇಂದ್ರದೊಂದಿಗೆ ಸಿಯುಕೆ ಒಡಂಬಡಿಕೆ
ಕಲಬುರಗಿ: ಬಸವಕಲ್ಯಾಣವು ಜಾಗತಿಕ ಪ್ರವಾಸೋದ್ಯಮ ಮತ್ತು ಸಾಂಸತಿಕ ಕೇಂದ್ರವಾಗಿದ್ದು, ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಅಭಿವೃದ್ಧಿಪಡಿಸಬೇಕು ಮತ್ತು ಪ್ರಚುರಪಡಿಸಬೇಕು. ಜತೆಗೆ ಸಾಂಸತಿಕ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ಅಗತ್ಯ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.
ಬಸವಕಲ್ಯಾಣದ ದಿವ್ಯಜಿವನ ಚಾರಿಟೇಬಲ್​ ಟ್ರಸ್ಟ್​ನ ಶರಣ ಭಾರತ ಸಂಶೋಧನೆ ಮತ್ತು ತರಬೇತಿ ಕೇಂದ್ರ ಮತ್ತು ಸಿಯುಕೆ ನಡುವಿನ ಶೈಕ್ಷಣಿಕ ಮತ್ತು ಸಂಶೋಧನಾ ಒಪ್ಪಂದಕ್ಕೆ ಮಂಗಳವಾರ ಸಹಿ ಹಾಕಿದ ನಂತರ ಮಾತನಾಡಿದರು.
ಬಸವೇಶ್ವರ ಶರಣ ತತ್ವಶಾಸ ಮತ್ತು ಸಂಸತಿ ಪುನರುಜ್ಜೀವನಗೊಳಿಸಲು ರಾಜ್ಯ ಸರ್ಕಾರವು ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಿಸಲು ಸುಮಾರು 800 ಕೋಟಿ ರೂ. ಖರ್ಚು ಮಾಡುತ್ತಿದೆ. ಪ್ರಧಾನಿ ಯಾವಾಗಲೂ ಭಾರತ ಪ್ರಜಾಪ್ರಭುತ್ವದ ತಾಯಿ ಮತ್ತು ಅನುಭವ ಮಂಟಪ ವಿಶ್ವದ ಮೊದಲ ಸಂಸತ್ತು ಎಂದು ಹೇಳುತ್ತಾರೆ. ಇದು ಅತ್ಯಂತ ಸಂಭಾವ್ಯ ಪರಂಪರೆ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮ ಕೇಂದ್ರವಾಗಿರುವುದರಿಂದ, ನಾವು ನಗರದ ಸಾಂಸತಿಕ ಪ್ರವಾಸೋದ್ಯಮದ ಅಭಿವೃದ್ಧಿಗೆ ಕೆಲಸ ಮಾಡಬೇಕು. ಇದು ಜಗತ್ತಿನಾದ್ಯಂತ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸ್ಥಳಿಯ ಆರ್ಥಿಕತೆಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಈ ಒಪ್ಪಂದದ ಮೂಲಕ ನಮ್ಮ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ವಾಂಸರು ಶರಣ ಭಾರತ ಸಂಶೋಧನೆ ಮತ್ತು ತರಬೇತಿ ಕೇಂದ್ರದೊಂದಿಗೆ ಕೂಡಿ ಕೆಲಸ ಮಾಡಲಿದ್ದು, ಬಸವಕಲ್ಯಾಣದ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ವಿವಿಧ ಚಟುವಟಿಕೆ ಕೈಗೊಳ್ಳುತ್ತಾರೆ. ಪ್ರವಾಸೋದ್ಯಮದ ಜತೆಗೆ ನಿರ್ವಹಣೆ, ಇತಿಹಾಸ, ಮನೋವಿಜ್ಞಾನ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಂತಹ ಇತರ ಸಂಬಂಧಿತ ವಿಭಾಗಗಳು ಸಂಬಂಧಿತ ೇತ್ರಗಳಲ್ಲಿ ಕೆಲಸ ಮಾಡಲಿವೆ ಎಂದು ಹೇಳಿದರು.

ಸಿಯುಕೆಗೆ ಅಭಿನಂದನೆ

ಶರಣ ಭಾರತ ಸಂಶೋಧನಾ ಮತ್ತು ತರಬೇತಿ ಕೇಂದ್ರದ ಅಧ್ಯಕ್ಷ ಡಾ.ಬಾಬಾಸಾಹೇಬ ಗಡ್ಡೆ ಮಾತನಾಡಿ, ಸಿಯುಕೆದೊಂದಿಗೆ ಕೆಲಸ ಮಾಡಲು ಅವಕಾಶ ನೀಡಿದ್ದು ಸಂತಸ ತಂದಿದೆ. ಅದಕ್ಕಾಗಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರನ್ನು ಅಭಿನಂದಿಸಲಾಗುವುದು. ಶರಣ ಭಾರತ ಸಂಶೋಧನಾ ಮತ್ತು ತರಬೇತಿ ಕೇಂದ್ರವು ಬಸವ ತತ್ವಶಾಸ, ಸಾಮಾಜಿಕ ಇತಿಹಾಸ, ಜಾನಪದ ಕಲೆ, ಕಾಯಕ ಆಧಾರಿತ ಜೀವನೋಪಾಯ ಪರಂಪರೆ, ಸಾಂಸ್ಕೃತಿಕ ಪ್ರವಾಸೋದ್ಯಮ ಸಂಶೋಧನೆ ಮತ್ತು ತಳಮಟ್ಟದ ಸಮುದಾಯ ತರಬೇತಿ ೇತ್ರಗಳಲ್ಲಿ ಕಾರ್ಯನಿರ್ವಹಿಸುವ ಸಮರ್ಪಿತ ಸಂಸ್ಥೆಯಾಗಿದೆ. ಈ ಒಪ್ಪಂದದ ಮೂಲಕ ಎರಡೂ ಸಂಸ್ಥೆಗಳು ಜಂಟಿಯಾಗಿ ಬಸವ ತತ್ವಶಾಸ, ಇತಿಹಾಸ, ಜಾನಪದ ಸಂಸ್ಕೃತಿ ಮತ್ತು ಸಾಮಾಜಿಕ&ಆರ್ಥಿಕ ಕಾಯಕ ಮಾದರಿಗಳ ಕುರಿತು ಮುಂದುವರಿದ ಸಂಶೋಧನೆ ಮತ್ತು ಪ್ರಕಟಣೆಗಳು, ಜಂಟಿ ತರಬೇತಿ, ಕಾರ್ಯಾಗಾರ, ಪರಂಪರೆ ದಾಖಲೀಕರಣ, ಸಮೀೆ ಮತ್ತು ೇತ್ರ ಸಂಶೋಧನೆ, ಶರಣ ಭಾರತ ಬಸವಕಲ್ಯಾಣದಲ್ಲಿ ಪ್ರಾದೇಶಿಕ ಅಧ್ಯಯನ ಕೇಂದ್ರದ ಸ್ಥಾಪಿಸಲಿದೆ, ಭಾರತೀಯ ತಳಮಟ್ಟದ ಜೀವನೋಪಾಯ ಶ್ರೇಷ್ಠತೆ ಗೌರವಿಸಲು ಮತ್ತು ಸಂಗ್ರಹಿಸಲು ಕಾಯಕ ರಾಷ್ಟ್ರೀಯ ಕೌಶಲ ಪ್ರಶಸ್ತಿ ಜಂಟಿಯಾಗಿ ನೀಡುವುದು ಮತ್ತು ಕಲ್ಯಾಣ&ಕರ್ನಾಟಕ ಪ್ರದೇಶದಲ್ಲಿ ಸಹಯೋಗದ ಸಾಂಸತಿಕ ಪ್ರವಾಸೋದ್ಯಮ ಅಧ್ಯಯನ ಮಾಡಲಾಗುವುದು ಎಂದು ಹೇಳಿದರು.
ಕುಲಸಚಿವ ಪ್ರೊ.ಆರ್​.ಆರ್​.ಬಿರಾದಾರ್​ ಮಾತನಾಡಿ, ವಿಕಸಿತ ಭಾರತ ಸಾಧಿಸಲು ಬಸವೇಶ್ವರರು ಪ್ರಸ್ತಾಪಿಸಿದ ಮತ್ತು ಪಾಲಿಸಿದ ತತ್ವಗಳಾದ ಸಮಾನತೆ, ಭ್ರಾತೃತ್ವ, ನೀತಿಶಾಸ, ನೈತಿಕತೆ, ಶ್ರಮದ ನತೆ, ಮಹಿಳೆಯರನ್ನು ಗೌರವದಿಂದ ಕಾಣುವುದು ಬಹಳ ಮುಖ್ಯ ಎಂದರು.
ಇದಕ್ಕೂ ಮುನ್ನ ಕುಲಸಚಿವ ಪ್ರೊ.ಬಿರಾದಾರ ಮತ್ತು ಡಾ.ಬಾಬಾಸಾಹೇಬ ಗಡ್ಡೆ ಒಪ್ಪಂದ ವಿನಿಮಯ ಮಾಡಿಕೊಂಡರು. ಕಾರ್ಯಕ್ರಮದ ಸಂಯೋಜಕ ಡಾ.ಜಗದೀಶ ಬಿರೇದಾರ ಸ್ವಾಗತಿಸಿದರು, ಡಾ.ನಿತಿನ್​ ಬಿ ನಿರೂಪಿಸಿ, ವಂದಿಸಿದರು. ಪ್ರೊ.ವಿಕ್ರಮ ವಿಸಾಜಿ, ಪ್ರೊ.ಪಾಂಡುರಂಗ ಪತ್ತಿ, ಬಸವ ಪೀಠದ ಸಂಯೋಜಕ ಡಾ.ಗಣಪತಿ ಸಿನ್ನೂರ, ಡಾ.ಮಹೇಂದ್ರ, ಡಾ.ಗೌತಮ, ಡಾ.ರವಿ ಕಂಗೈ, ಡಾ. ಸಾರಡೆ, ಡಾ.ರೇಷ್ಮಾ ನದಾಫ್​, ಅಕ್ಕಮಹಾದೇವಿ ಗಡ್ಡೆ ಮತ್ತು ಪ್ರವಾಸೋದ್ಯಮ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
"

ಈ ಒಪ್ಪಂದವು ವಿದ್ಯಾರ್ಥಿಗಳಲ್ಲಿ ಕೌಶಲ ಬೆಳೆಸಲು ನೆರವಾಗಲಿದೆ. ಗ್ರಾಮೀಣ ಕೌಶಲ ಅಭಿವೃದ್ಧಿಪಡಿಸುವ ಸಂಶೋಧನೆಯು ಈ ಪ್ರದೇಶದ ಅಭಿವೃದ್ಧಿಗೆ ನೆರವಾಗಲಿದೆ. ಒಪ್ಪಂದದಲ್ಲಿ ಉಲ್ಲೇಖಿಸಲಾದ ಉದ್ದೇಶ ಸಾಧಿಸಲು ಎರಡೂ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಲಿವೆ.

ಪ್ರೊ.ಆರ್​.ಆರ್​.ಬಿರಾದಾರ್​,

ಕುಲಸಚಿವ, ಸಿಯುಕೆ ಕಲಬುರಗಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net