ಕನಕದಾಸರ ಆದರ್ಶ ಮೈಗೂಡಿಸಿಕೊಳ್ಳಿ Jayanthi

ಮುಳಬಾಗಿಲಿನ ಬೂಸಾಲುಕುಂಟೆಯಲ್ಲಿ Jayanthi ಕನಕದಾಸ ಜಯಂತಿ ಆಚರಿಸಲಾಯಿತು.
ಮುಳಬಾಗಿಲಿನ ಬೂಸಾಲುಕುಂಟೆಯಲ್ಲಿ Jayanthi ಕನಕದಾಸ ಜಯಂತಿ ಆಚರಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ಎಚ್​.ಎಂ.ರೇವಣ್ಣ ಸಲಹೆ
ಮುಳಬಾಗಿಲು: ದಾಸ ಶ್ರೇಷ್ಠ ಕನಕದಾಸರು ಭಕ್ತಿ ಪಂಥದ ಮೂಲಕ ಇಡೀ Jayanthi ಸಮಾಜವನ್ನು ಒಂದುಗೂಡಿಸುವ ಪ್ರಯತ್ನ ಮಾಡಿದರು. ಸಮ ಸಮಾಜ ನಿರ್ಮಾಣದ ರೂವಾರಿಯಾಗಿದ್ದರು. ಇಂತಹ ಪುಣ್ಯಪುರುಷರ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಪಂಚ ಗ್ಯಾರಂಟಿ ಗ್ಯಾರಂಟಿ ಸಮಿತಿ ಅಧ್ಯ ಹಾಗೂ ಮಾಜಿ ಸಚಿವ ಎಚ್​.ಎಂ.ರೇವಣ್ಣ ತಿಳಿಸಿದರು.
ನಗರದ ಬೂಸಾಲುಕುಂಟೆಯಲ್ಲಿ ತಾಲೂಕು ಕುರುಬರ ಸಂದಿಂದ ಕನಕ ಸಮುದಾಯ ಭವನದ ಮುಂಭಾಗದಲ್ಲಿ ನಿರ್ಮಿಸಿರುವ ಗಣೇಶ ವಿಗ್ರಹ ಪ್ರತಿಷ್ಠಾಪನೆ ಹಾಗೂ ಕನಕದಾಸರ ಮೂರ್ತಿ ಲೋಕಾರ್ಪಣೆ ಮತ್ತು 538ನೇ ಕನಕದಾಸ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಹಾಲುಮತ ಸಮುದಾಯ ಹಾಲಿನಂತೆ ತಮ್ಮ ಶ್ರೇಷ್ಠತೆ ಉಳಿಸಿಕೊಂಡು ಬರುತ್ತಿದೆ. ನಮ್ಮ ಸಂಸತಿ, ಪರಂಪರೆಯನ್ನು ಮುಂದಿನ ಜನಾಂಗಕ್ಕೆ ಬಳುವಳಿ ನೀಡಬೇಕಾಗಿದೆ ಎಂದರು.
ಮಾಜಿ ಸಚಿವ ವರ್ತೂರು ಪ್ರಕಾಶ್​ ಮಾತನಾಡಿ, ಕುರುಬರು ಯಾವುದೇ ಒಂದು ಪಕ್ಕೆ ಸೀಮಿತವಾಗದೆ ಎಲ್ಲೆದ್ದೀರೋ ಅಲ್ಲಿಯೇ ಇದ್ದು ಪ ಅಧಿಕಾರಕ್ಕೆ ಬಂದಾಗ ಅಧಿಕಾರ ಪಡೆಯಬೇಕು. ಯಾವುದೇ ಒಂದು ಪವನ್ನು ಅವಲಂಬನೆ ಮಾಡಬಾರದು. ಸಮುದಾಯದಿಂದ ಸೂಚನೆ ಬಂದಾಗ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಹೇಳಿದರು.
ಆಂಧ್ರಪ್ರದೇಶ ಸರ್ಕಾರದ ಹಿಂದುಳಿದ ವರ್ಗಗಳ ಇಲಾಖೆ ಸಚಿವೆ ಸವಿತಾ ಮಾತನಾಡಿ, ಕರ್ನಾಟಕದ ಹಾಲು ಮತದ ಹಲವು ಸಂಸತಿಯನ್ನು ಆಂಧ್ರಪ್ರದೇಶದಲ್ಲಿ ಅನುಷ್ಠಾನ ಮಾಡುತ್ತಿದ್ದೇವೆ. ಕನಕ ಮಂದಿರ ನಿರ್ಮಾಣ, ವಿಗ್ರಹ ಪ್ರತಿಷ್ಠಾಪನೆಯನ್ನು ನಮ್ಮ ರಾಜ್ಯದಲ್ಲೂ ಮಾಡುತ್ತಿದ್ದೇವೆ ಎಂದರು.
ತಾಲೂಕಿನ 30 ಗ್ರಾಮ ಪಂಚಾಯಿತಿಗಳಿಂದ ಮತ್ತು ಕುರುಬ ಸಮುದಾಯದಿಂದ ಪಲ್ಲಕ್ಕಿ ಮೆರವಣಿಗೆಗಳು ಆಗಮಿಸಿದ್ದವು.
ಮೈಸೂರಿನ ಕನಕ ಗುರು ಪೀಠದ ಶ್ರೀ ಶಿವಾನಂದಪುರಿ ಸ್ವಾಮೀಜಿ, ಅಂಧ್ರದ ಹಿಂದುಪುರ ಸಂಸದ ಬಿ.ಕೆ.ಪಾರ್ಥಸಾರಥಿ, ತಾಲೂಕು ಒಕ್ಕಲಿಗರ ಸಂದ ಅಧ್ಯ ಆಲಂಗೂರು ಶಿವಣ್ಣ, ತಾಲೂಕು ಬಲಿಜ ಸಂದ ಕಾರ್ಯಾಧ್ಯ ಕಲ್ಲುಪಲ್ಲಿ ಪ್ರಕಾಶ್​, ಕುರಿ ಮಂಡಳಿ ಮಾಜಿ ಅಧ್ಯ ಚನ್ನಾಪುರ ಎನ್​.ವೆಂಕಟೇಶ್​ ಗೌಡ, ಬಿಜೆಪಿ ಜಿಲ್ಲಾ ಒಬಿಸಿ ಮಾಜಿ ಅಧ್ಯ ಕೋಳಿ ನಾಗರಾಜ್​, ಜಿಲ್ಲಾ ಕುರುಬರ ಸಂದ ಅಧ್ಯ ತಂಬಹಳ್ಳಿ ಮುನಿಯಪ್ಪ, ಮುಳಬಾಗಿಲು ತಾಲೂಕು ಅಧ್ಯ ಟಿ.ಸುಬ್ರಹ್ಮಣಿ, ಕಾರ್ಯದರ್ಶಿ ರಮೇಶ್​ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net