ಜೀವನದಲ್ಲಿ ಕೃಷ್ಣನ ಆದರ್ಶ ಅಳವಡಿಸಿಕೊಳ್ಳಿ

ಕೆಜಿಎ್​ನ ರೆಡ್ಡಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜಯಂತಿಯನ್ನು ಶಾಸಕಿ ರೂಪಕಲಾ ಉದ್ಘಾಟಿಸಿದರು. ಎಸ್​ಪಿ ಶಿವಾಂಶು ರಜಪೂತ್​, ಯಾದವ ಸಮುದಾಯದ ತಾಲೂಕು ಅಧ್ಯಕ್ಷ ಉಮೇಶ್​, ಪೌರಾಯುಕ್ತ ಶ್ರೀಧರ್​, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸನ್​, ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಧಾ ಕೃಷ್ಣರೆಡ್ಡಿ, ಯಾದವ ಸಮುದಾಯದ ಜಿಲ್ಲಾ ಉಪಾಧ್ಯಕ್ಷೆ ರಾಧಮ್ಮ, ಮುಖಂಡ ಡಾ.ಹರೀಶ್​, ನಿವೃತ್ತ ಶಿಕ್ಷಕ ಗೋವಿಂದರಾಜು, ಜಿಪಂ ಮಾಜಿ ಸದಸ್ಯ ಅ.ಮು.ಲಕ್ಷಿ$್ಮನಾರಾಯಣ್​, ವಕೀಲ ಗುರಸಾಲ ಶ್ರೀನಿವಾಸ್​ ಇದ್ದರು.

Published on
ಕೆಜಿಎಫ್​ :ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮನು ಹೇಳಿರುವಂತೆ ಜೀವನದಲ್ಲಿ ಎಷ್ಟೇ ಸವಾಲುಗಳು ಬಂದರೂ ಧೈರ್ಯ ಕಳೆದುಕೊಳ್ಳಬಾರದು. ಸತ್ಯ, ಧರ್ಮದ ಮಾರ್ಗದಲ್ಲಿ ನಡೆಯಬೇಕು. ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಶಾಸಕಿ ರೂಪಕಲಾ ಹೇಳಿದರು.
ನಗರದ ರೆಡ್ಡಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜಯಂತಿಯಲ್ಲಿ ಮಾತನಾಡಿ, ಮಹಾಭಾರತದ ಯುದ್ಧ ಭೂಮಿಯಲ್ಲಿ ಅರ್ಜುನನು ಗೊಂದಲಕ್ಕೊಳಗಾದಾಗ, ಶ್ರೀ ಕೃಷ್ಣನು ನೀಡಿದ ಮಾರ್ಗದರ್ಶನವೇ ಭಗವದ್ಗೀತೆಯಾಗಿದ್ದು, ಭಗವದ್ಗೀತೆಯಲ್ಲಿನ ಸಾರ ಎಲ್ಲ ಕಾಲಕ್ಕೂ ಅನುಕರಣೀಯವಾಗಿದೆ ಎಂದರು.
ಶ್ರೀಕೃಷ್ಣ ಎಂದರೆ ಕೇವಲ ದೇವರು ಅಥವಾ ಪೌರಾಣಿಕ ವ್ಯಕ್ತಿಯಲ್ಲ. ಅವರು ಜ್ಞಾನ, ಧರ್ಮ, ಪ್ರೀತಿ, ಧೈರ್ಯ, ಕರ್ತವ್ಯ ಮತ್ತು ಜೀವನದ ಮೌಲ್ಯಗಳ ಪ್ರತಿಕ. ಕೃಷ್ಣನ ಜೀವನದಲ್ಲಿ ಸ್ನೇಹಕ್ಕೂ ವಿಶೇಷ ಸ್ಥಾನವಿದೆ. ನಿಜವಾದ ಸ್ನೇಹಕ್ಕೆ ಯಾವುದೇ ಬಡತನ, ಶ್ರೀಮಂತಿಕೆ, ಸ್ಥಾನಮಾನ, ಅಧಿಕಾರ ಅಡ್ಡಿಯಾಗುವುದಿಲ್ಲ ಎಂಬುದನ್ನು ಶ್ರೀಕೃಷ್ಣ ಮತ್ತು ಸುಧಾಮನ ಸ್ನೇಹ ತೋರಿಸುತ್ತದೆ. ಗೌರವಿಸುವ, ಸಹಾಯ ಮಾಡುವ ಮತ್ತು ಸಮಾಜದಲ್ಲಿ ಶಾಂತಿ, ಸೌಹಾರ್ದ ಬೆಳೆಸುವ ಪ್ರೀತಿಯಾಗಿರಬೇಕು ಎಂದರು.
ಜನ್ಮಾಷ್ಟಮಿ ಆಚರಿಸುವ ಸಂದರ್ಭದಲ್ಲಿ ಪೂಜೆ, ಅಲಂಕಾರ, ಉತ್ಸವಗಳಿಗೆ ಸೀಮಿತವಾಗದೆ, ಶ್ರೀ ಕೃಷ್ಣನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡಬೇಕು ಎಂದರು.
ಜಿಲ್ಲಾ ಎಸ್​ಪಿ ಶಿವಾಂಶು ರಜಪೂತ್​ ಮಾತನಾಡಿ, ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕು. ಫಲದ ಬಗ್ಗೆ ಚಿಂತೆ ಮಾಡಬಾರದು ಎಂಬ ಸಂದೇಶವನ್ನು ಕೃಷ್ಣನು ಜಗತ್ತಿಗೆ ನೀಡಿದ್ದಾನೆ. ಶ್ರೀ ಕೃಷ್ಣನ ಸಂದೇಶ ಎಲ್ಲರ ಜೀವನದಲ್ಲಿ ಬೆಳಕಾಗಲಿ. ಸಮಾಜದಲ್ಲಿ ಶಾಂತಿ, ಪ್ರೀತಿ, ಸಹೋದರತ್ವ, ಸೌಹಾರ್ದತೆ ಸದಾ ನೆಲೆಸಲಿ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net