ಬೀಜ ಮತ್ತು ರಸಗೊಬ್ಬರದ ಕೊರತೆ ನೀಗಿಡುವಂತೆ ಆಗ್ರಹಿಸಿ ಗುರುಮಠಕಲ್ ಎಪಿಎಂಸಿ ಆವಣದಲ್ಲಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್ಗೆ ಮನವಿಪತ್ರ ಸಲ್ಲಿಸಿದರು. ಶರಣಗೌಡ, ಸಿದ್ದಪ್ಪ, ರಾಜು, ರಾಮುಲು, ಶರಣಪ್ಪ, ಅಂಜಪ್ಪ, ಭೀಮಶಪ್ಪ, ಮಾಣಿಕಪ್ಪ, ನಾರಾಯಣ, ಚಂದ್ರಪ್ಪ, ಅನಂತಮ್ಮ, ಅನಮಮ್ಮ, ಶಂಕ್ರಮ್ಮ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಜಿಲ್ಲಾಧ್ಯಕ್ಷ ಶರಣಗೌಡ ಒತ್ತಾಯ
ಎಐಕೆಕೆಎಂಎಸ್ನಿಂದ ಎಪಿಎಂಸಿ ಎದುರು ಪ್ರತಿಭಟನೆ
ಗುರುಮಠಕಲ್: ಮುಂಗಾರು ಆರಂಭವಾಗಿದ್ದರೂ ರೈತರಿಗೆ ಸಕಾಲಕ್ಕೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಿಗದೆ ಪರದಾಡುವಂತಾಗಿದೆ. ಬೀಜ&ಗೊಬ್ಬರದ ಕೊರತೆ ನೀಗಿಸಿ ಮತ್ತು ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಟನೆ (ಎಐಕೆಕೆಎಂಎಸ್) ಜಿಲ್ಲಾ ಅಧ್ಯಕ್ಷ ಶರಣಗೌಡ ಆಗ್ರಹಿಸಿದರು.
ಪಟ್ಟಣದ ಎಪಿಎಂಸಿ ಆವರಣದ ಎದುರು ಬೀಜ&ಗೊಬ್ಬರದ ಕೊರತೆಯನ್ನು ನೀಗಿಸಿ ಮತ್ತು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಸರ್ಕಾರಗಳು ಭರವಸೆ ನೀಡಿದರೂ ಸಹ ಸಕಾಲಕ್ಕೆ ರೈತರಿಗೆ ಬೀಜ ಮತ್ತು ರಸಗೊಬ್ಬರದ ತೀವ್ರ ಅಭಾವ ಜಿಲ್ಲೆಯ ರೈತರಿಗೆ ಕಾಡಲಾರಂಭಿಸಿದೆ. ಕಳೆದ ಕೆಲ ದಿನಗಳಿಂದ ಹಗಲು ರಾತ್ರಿ ಸರತಿಗಾಗಿ ಕಾದು ರೈತರು ಬೇಸತ್ತು ಹೋಗಿದ್ದಾರೆ. ಕೃಷಿಯನ್ನು ಪ್ರೋತ್ಸಹಿಸಿ ರೈತರಿಗೆ ಅಗತ್ಯವಾದಷ್ಟು ರಸಗೊಬ್ಬರ ಮತ್ತು ಉತ್ತಮ ಗುಣಮಟ್ಟದ ಬೀಜ ನೀಡುವುದು ಸರ್ಕಾರದ ಆದ್ಯಕರ್ತವ್ಯವಾಗಬೇಕು ಎಂದರು.
ಕೃಷಿ ಇಲಾಖೆ ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಇಲ್ಲ ಎಂದು ಕಾಗದದ ಮೇಲೆ ಹೇಳಿಕೆ ನೀಡದೆ. ಅಗತ್ಯಕ್ಕೆ ತಕ್ಕಂತೆ ಡಿಎಪಿ ಗೊಬ್ಬರವನ್ನು ರೈತರ ಕೈಗಳಿಗೆ ಸಿಗುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ. ಗೊಬ್ಬರದ ಕೊರತೆಯಿಂದ ರೈತರು ಬೆಳಗ್ಗೆಯಿಂದಲೇ ತಮ್ಮ ಪಾದರಕ್ಷೆಯನ್ನು ಸಾಲಿನಲ್ಲಿಟ್ಟು ಗಂಟೆಗಟ್ಟಲೆ ಬಿಸಿಲಿನಲ್ಲಿ ಕಾಯಬೇಕಾದ ದು@ಸ್ಥಿತಿಗೆ ತಳ್ಳುವುದು ಸರಿಯಲ್ಲ ಎಂದರು.
ಸರ್ಕಾರಿ ಕೇಂದ್ರಗಳಲ್ಲಿನ ಈ ಕೊರತೆ ಬಂಡವಾಳ ಮಾಡಿಕೊಂಡಿರುವ ಕೆಲ ಖಾಸಗಿ ಕೃಷಿ ಪರಿಕರ ಮಾರಾಟಗಾರರು ಕೃತಕ ಅಭಾವ ಸೃಷ್ಟಿಸಿ, ನಿಗದಿತ ದರಕ್ಕಿಂತ ದುಪ್ಪಟ್ಟು ಬೆಲೆಗೆ ಗೊಬ್ಬರ ಮಾರುತ್ತಿದ್ದಾರೆ. ಇದರ ಜತೆಗೆ, ಗೊಬ್ಬರ ಬೇಕಿದ್ದರೆ ಅದರೊಂದಿಗೆ ಬೇಡದ ಕೀಟನಾಶಕ ಹಾಗೂ ಪೋಷಕಾಂಶಗಳ ಕಿಟ್ ಖರೀದಿಸಬೇಕೆಂಬ ಲಿಂಕ್ ಬಿಸಿನೆಸ್ ದಂಧೆ ರಾಜಾರೋಷವಾಗಿ ನಡೆಯುತ್ತಿದೆ ಎಂದು ದೂರಿದರು.
ಈ ವೇಳೆ ತಾಲೂಕು ಅಧ್ಯಕ್ಷ ಸಿದ್ದಪ್ಪ, ರಾಜು, ರಾಮುಲು, ಶರಣಪ್ಪ, ಅಂಜಪ್ಪ, ಭೀಮಶಪ್ಪ, ಮಾಣಿಕಪ್ಪ, ನಾರಾಯಣ, ಚಂದ್ರಪ್ಪ, ಅನಂತಮ್ಮ, ಅನಮಮ್ಮ, ಶಂಕ್ರಮ್ಮ, ಉಶಮ್ಮ, ದಸ್ತಮ್ಮ, ಚನ್ನಮ್ಮ ಇತರರಿದ್ದರು. ಈ ಕುರಿತು ಮುಖ್ಯಮಂತ್ರಿಗೆ ಬರೆದ ಮನವಿಪತ್ರವನ್ನು ತಹಸೀಲ್ದಾರ್ಗೆ ಸಲ್ಲಿಸಿದರು.