ಜಪಾನ್​ಗೆ ಆನೆ ರವಾನೆ, ಅಂಚೆ ಲಕೋಟೆ ಬಿಡುಗಡೆ | Elephant

ಬನ್ನೇರುಟ್ಟ ಜೈವಿಕ ಉದ್ಯಾನವನದ ಆನೆಗಳನ್ನು ಪ್ರಾಣಿ ವಿನಿಮಯ ಯೋಜನೆಯಡಿಜಪಾನ್​ಗೆ ಕಳುಹಿಸಿದ ಹಿನ್ನೆಲೆಯಲ್ಲಿ ಅಂಚೆ ಇಲಾಖೆ ಬುಧವಾರ ಲಕೋಟೆಯನ್ನು ಬಿಡುಗಡೆ ಮಾಡಿತು.  ಅಂಚೆ ಇಲಾಖೆಯ ಯು. ಸೂರ್ಯ, ಗಜೇಂದ್ರ ಕುಮಾರ್​ ಮೀನಾ, ಡಾ. ಪ್ರಶಾಂತ್​, ಬನ್ನೇರುಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್​ ಇದ್ದರು.

Published on
ಆನೇಕಲ್:​ ವಿದೇಶಕ್ಕೆ ಆನೆಗಳು ಹಸ್ತಾಂತರ ಆದ ನೆನಪಿಗೆ ಅಂಚೆ ಇಲಾಖೆಯು ವಿಶೇಷ ಲಕೋಟೆ ಬಿಡುಗಡೆ ಮಾಡಿದೆ. ಪ್ರಾಣಿ ವಿನಿಮಯ ಯೋಜನೆಯಡಿ ತಾಲೂಕಿನ ಬನ್ನೇರುಟ್ಟ ಜೈವಿಕ ಉದ್ಯಾನವನದಿಂದ ಜಪಾನಿನ ಹಿಮೇಜಿ ಸೆಂಟ್ರಲ್​ ಪಾರ್ಕ್​ಗೆ ಆನೆಗಳನ್ನು ಹಸ್ತಾಂತರ ಮಾಡಿದ ನೆನಪಿಗೆ ಬುಧವಾರ ಬನ್ನೇರುಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳು ಲಕೋಟೆಯನ್ನು ಬಿಡುಗಡೆ ಮಾಡಿದರು.
ಜಪಾನಿನ ಜಂಬುಸ್​ ಹೆಸರಿನಲ್ಲಿ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಗಿದ್ದು,ಕಳೆದ ಆಗಸ್ಟ್​ ನಲ್ಲಿ ಬನ್ನೇರುಟ್ಟದ ನಾಲ್ಕು ಆನೆಗಳಾದ ಸುರೇಶ್, ಗೌರಿ, ಶ್ರುತಿ ಮತ್ತು ತುಳಸಿಯನ್ನು ಅಂತಾರಾಷ್ಟ್ರೀಯ ಪ್ರಾಣಿ ವಿನಿಮಯ ಯೋಜನೆ ಅಡಿಯಲ್ಲಿ ಜಪಾನ್​ಗೆ ಕಳುಹಿಸಲಾಗಿತ್ತು. ಪ್ರಾಣಿ ನಿರ್ವಹಣೆಯ ಕ್ಷೇತ್ರದಲ್ಲಿ ಬನ್ನೇರುಟ್ಟದ ಸಾಧನೆ ಪ್ರಮುಖವಾಗಿತ್ತು. ಈ ಹಿನ್ನೆಲೆಯಲ್ಲಿ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಗಿದೆ ಎಂದು ಬನ್ನೇರುಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net