ಬನ್ನೇರುಟ್ಟ ಜೈವಿಕ ಉದ್ಯಾನವನದ ಆನೆಗಳನ್ನು ಪ್ರಾಣಿ ವಿನಿಮಯ ಯೋಜನೆಯಡಿಜಪಾನ್ಗೆ ಕಳುಹಿಸಿದ ಹಿನ್ನೆಲೆಯಲ್ಲಿ ಅಂಚೆ ಇಲಾಖೆ ಬುಧವಾರ ಲಕೋಟೆಯನ್ನು ಬಿಡುಗಡೆ ಮಾಡಿತು. ಅಂಚೆ ಇಲಾಖೆಯ ಯು. ಸೂರ್ಯ, ಗಜೇಂದ್ರ ಕುಮಾರ್ ಮೀನಾ, ಡಾ. ಪ್ರಶಾಂತ್, ಬನ್ನೇರುಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ಇದ್ದರು.
ಆನೇಕಲ್:ವಿದೇಶಕ್ಕೆ ಆನೆಗಳು ಹಸ್ತಾಂತರ ಆದ ನೆನಪಿಗೆ ಅಂಚೆ ಇಲಾಖೆಯು ವಿಶೇಷ ಲಕೋಟೆ ಬಿಡುಗಡೆ ಮಾಡಿದೆ. ಪ್ರಾಣಿ ವಿನಿಮಯ ಯೋಜನೆಯಡಿ ತಾಲೂಕಿನ ಬನ್ನೇರುಟ್ಟ ಜೈವಿಕ ಉದ್ಯಾನವನದಿಂದ ಜಪಾನಿನ ಹಿಮೇಜಿ ಸೆಂಟ್ರಲ್ ಪಾರ್ಕ್ಗೆ ಆನೆಗಳನ್ನು ಹಸ್ತಾಂತರ ಮಾಡಿದ ನೆನಪಿಗೆ ಬುಧವಾರ ಬನ್ನೇರುಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳು ಲಕೋಟೆಯನ್ನು ಬಿಡುಗಡೆ ಮಾಡಿದರು.
ಜಪಾನಿನ ಜಂಬುಸ್ ಹೆಸರಿನಲ್ಲಿ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಗಿದ್ದು,ಕಳೆದ ಆಗಸ್ಟ್ ನಲ್ಲಿ ಬನ್ನೇರುಟ್ಟದ ನಾಲ್ಕು ಆನೆಗಳಾದ ಸುರೇಶ್, ಗೌರಿ, ಶ್ರುತಿ ಮತ್ತು ತುಳಸಿಯನ್ನು ಅಂತಾರಾಷ್ಟ್ರೀಯ ಪ್ರಾಣಿ ವಿನಿಮಯ ಯೋಜನೆ ಅಡಿಯಲ್ಲಿ ಜಪಾನ್ಗೆ ಕಳುಹಿಸಲಾಗಿತ್ತು. ಪ್ರಾಣಿ ನಿರ್ವಹಣೆಯ ಕ್ಷೇತ್ರದಲ್ಲಿ ಬನ್ನೇರುಟ್ಟದ ಸಾಧನೆ ಪ್ರಮುಖವಾಗಿತ್ತು. ಈ ಹಿನ್ನೆಲೆಯಲ್ಲಿ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಗಿದೆ ಎಂದು ಬನ್ನೇರುಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ.