ಹಗರಿಬೊಮ್ಮನಹಳ್ಳಿ ಜೆಸ್ಕಾಂ ಇಲಾಖೆಯ ಆವರಣದಲ್ಲಿ ಗ್ರಾಹಕರ ವಿದ್ಯುತ್ ಬಾಕಿ ವಸೂಲಿ ಆಂದೋಲನಕ್ಕೆ ಜೆಸ್ಕಾಂ ಎಇಇ ನಾಗರಾಜ ಕುರೆಕುಪ್ಪ ಶುಕ್ರವಾರ ಚಾಲನೆ ನೀಡಿದರು. ಜೆಸ್ಕಾಂ ಶಾಖಾಧಿಕಾರಿ ಚಂದ್ರಮೋಹನ, ವಿದ್ಯುತ್ ನೌಕರರ ಸಂಘದ ತಾಲೂಕು ಅಧ್ಯಕ್ಷ ನಂದೀಶ, ಇಲಾಖೆಯ ಪ್ರಮುಖರಾದ ಬಸವರಾಜ, ಎಚ್.ವಿರೂಪಾಕ್ಷಪ್ಪ, ಪ್ರಹ್ಲಾದ್, ಮಹೇಂದ್ರ, ಕೊಟಿಗಿ ಶಶಿಧರ ಇದ್ದರು.
ಹಗರಿಬೊಮ್ಮನಹಳ್ಳಿ:ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಗ್ರಾಹಕರಿಂದ ಬಾಕಿ ವಸೂಲಿ ಮಾಡಲು ಜೆಸ್ಕಾಂ ವಿಶೇಷ ಕಂದಾಯ ವಸೂಲಾತಿ ತಂಡಗಳನ್ನು ರಚಿಸಿದ್ದು, ಬಿಲ್ ಪಾವತಿಸದವರ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ತಾಲೂಕು ಕಾರ್ಯ ಮತ್ತು ಪಾಲನಾ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ನಾಗರಾಜ ಕುರೆಕುಪ್ಪ ತಿಳಿಸಿದರು.
ಪಟ್ಟಣದಲ್ಲಿ ಶುಕ್ರವಾರ ವಿಶೇಷ ವಸೂಲಾತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಹಕರು ತಕ್ಷಣವೇ ತಮ್ಮ ಬಾಕಿ ಬಿಲ್‌ಗಳನ್ನು ಜೆಸ್ಕಾಂ ಅಧಿಕೃತ ವೆಬ್‌ಸೈಟ್, ಫೋನ್‌ಪೇ, ಗೂಗಲ್ ಪೇ, ಪೇಟಿಎಂ ಸೇರಿದಂತೆ ವಿವಿಧ ಆನ್‌ಲೈನ್ ವೇದಿಕೆಗಳ ಮೂಲಕ ಹಾಗೂ ಜೆಸ್ಕಾಂ ನಗದು ಕೌಂಟರ್‌ಗಳಲ್ಲಿ ಹಣ ಪಾವತಿಸಬಹುದು.
ಬಿಲ್ ಪಾವತಿಸದ ಗ್ರಾಹಕರಿಗೆ ಯಾವುದೇ ಮುನ್ಸೂಚನೆ ನೀಡದೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದರು.
ಜೆಸ್ಕಾಂ ಶಾಖಾಧಿಕಾರಿ ಚಂದ್ರಮೋಹನ, ವಿದ್ಯುತ್ ನೌಕರರ ಸಂಘದ ತಾಲೂಕು ಅಧ್ಯಕ್ಷ ನಂದೀಶ, ಇಲಾಖೆಯ ಪ್ರಮುಖರಾದ ಬಸವರಾಜ, ಎಚ್.ವಿರೂಪಾಕ್ಷಪ್ಪ ಇದ್ದರು.