ವಾಲಿದ ವಿದ್ಯುತ್ ಕಂಬ : ಆತಂಕ

ವಾಲಿದ ವಿದ್ಯುತ್ ಕಂಬ
ವಾಲಿದ ವಿದ್ಯುತ್ ಕಂಬ
Published on

ಪ್ರಮುಖ ಮುಖ್ಯಾಂಶಗಳು

  • ವಾಲಿದ ವಿದ್ಯುತ್ ಕಂಬ
  • ಹುಕ್ಕೇರಿ ತಾಲೂಕಿನ ಗೋಟೂರ ಗ್ರಾಮದಲ್ಲಿ ಘಟನೆ
  • ವಿದ್ಯುತ್ ಕಂಬ ದುರಸ್ತಿಗೆ ಒತ್ತಾಯ
ವಾಲಿದ ವಿದ್ಯುತ್ ಕಂಬ
| ಆತಂಕದಲ್ಲಿ ಗೋಟೂರ ಗ್ರಾಮಸ್ಥರು| ಕಂಬ ದುರಸ್ತಿಗೆ ಒತ್ತಾಯ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ
ಹುಕ್ಕೇರಿ ತಾಲೂಕಿನ ಗೋಟೂರ ಗ್ರಾಮದ ವಾರ್ಡ್ ನಂ.4ರ ಕಮತೆ ತೋಟದ ಬಳಿ ವಿದ್ಯುತ್ ಕಂಬವೊಂದು ವಾಲಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
ಗ್ರಾಮದ ಕಮತೆ ,ಬೇಪಾರಿ ಸೇರಿ ಇಪತ್ತಕ್ಕೂ ಅಧಿಕ ಕುಟುಂಬಗಳು ಇದೆ ವಿದ್ಯುತ್ ಕಂಬದ ಸುತ್ತ ವಾಸಿಸುತ್ತಾರೆ.ಮುಂಗಾರು ಮಳೆಯ ವೇಳೆ ವಿದ್ಯುತ್ ಕಂಬ ವಾಲಿದೆ,ಜತೆಗೆ ವಿದ್ಯುತ್ ತಂತಿಗಳು ಸಹ ಜೋತು ಬಿದ್ದಿವೆ .ಪರಿಣಾಮ ಪ್ರದೇಶದ ಜನರು ವಿದ್ಯುತ್ ಕಂಬದ ಭಯದಡಿಯಲ್ಲಿ ಕಾಲ ಕಳೆಯುತ್ತಿದ್ದಾರೆ.
ವಿದ್ಯುತ್ ಕಂಬ ವಾಲಿರುವುದರ ಕುರಿತು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ,ಸದಸ್ಯರು ಹಲವು ಬಾರಿ ಕೆಇಬಿ ಅಧಿಕಾರಿಗಳು,ಗ್ರಾಮದ ಲೈನ್ ಮ್ಯಾನ್ ಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.ಇದು ಅಧಿಕಾರಿಗಳು ಬೇಜವಾಬ್ದಾರಿಯಾಗಿದ್ದು,ಕೂಡಲೇ ಕಂಬ ದುರಸ್ತಿ ಮಾಡುವಂತೆ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ರವೀಂದ್ರ ಮಾಸೇವಾಡಿ ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net