

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಅಖಿಲ ಭಾರತವೀರಶೈವ ಲಿಂಗಾಯತ ಮಹಾಸಭೆಯ 2024ರಚುನಾವಣೆ ಸಮಯದಲ್ಲಿ ತಾಂತ್ರಿಕಕಾರಣಗಳಿಂದ ಮುಂದೂಡಲ್ಪಟ್ಟತಾಲ್ಲೂಕು,ಮಹಾನಗರ ಪಾಲಿಕೆ,ಜಿಲ್ಲಾ,ರಾಜ್ಯ ಅರ್ಹಘಟಕಗಳಿಗೆ ಮತ್ತು ವಿವಿಧ ಕಾರಣಗಳಿಂದತೆರವಾಗಿರುವ ಘಟಕಗಳ ಅಧ್ಯಕ್ಷಸ್ಥಾನಕ್ಕೆ ಚುನಾವಣೆ ದಿನಾಂಕಘೋಷಣೆಯಾಗಿದೆ.
ಮಹಾಸಭೆಯಚುನಾವಣಾ ಕೈಪಿಡಿ-2024ರಂತೆಉಳಿದ ಅವಧಿಗೆ ಚುನಾವಣೆ ನಡೆಸಲುಡಿ.04 ರಂದುನಡೆದ ಮಹಾಸಭಾ ಕಾರ್ಯಕಾರಿ ಸಮಿತಿಸಭೆಯಲ್ಲಿ ನಿರ್ಣಯಿಸಲಾಗಿದ್ದು,ಡಿ.31ರೊಳಗೆ ಸದಸ್ಯರಾಗುವವರು ಈ ಚುನಾವಣೆಯಲ್ಲಿಸ್ಪರ್ಧಿಸಲು ಮತ್ತು ಮತಚಲಾಯಿಸಲುಅರ್ಹತೆ ಪಡೆಯುತ್ತಾರೆ.ಆದ್ದರಿಂದಚುನಾವಣೆ ನಡೆಯದಿರುವ ಘಟಕಗಳವ್ಯಾಪ್ತಿಯಲ್ಲಿರುವ ಸಮಾಜ ಬಾಂಧವರುಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದುಮಹಾಸಭೆಯ ಕಾರ್ಯದರ್ಶಿ ಎಚ್.ಎಂ.ರೇಣುಕಪ್ರಸನ್ನ ಕೋರಿದ್ದಾರೆ.
ಸದಸ್ಯರಾಗಲುಕೊನೆಯ ದಿನಾಂಕ ಡಿ.31,ಅಂತಿಮ ಮತದಾರರಪಟ್ಟಿ ಪ್ರಕಟಿಸುವ ದಿನಾಂಕ ಜ.15,ನಾಮಪತ್ರ ಸಲ್ಲಿಕೆಆರಂಭ ಜ.23, ನಾಮಪತ್ರಸಲ್ಲಿಕೆಗೆ ಕೊನೆಯ ದಿನಾಂಕ ಜ.29,ನಾಮಪತ್ರ ಪರಿಶೀಲನೆಜ.30, ನಾಮಪತ್ರಹಿಂಪಡೆಯಲು ಕೊನೆಯ ದಿನಾಂಕ ಫೆ.2,ಮತದಾನ ನಡೆಸುವದಿನಾಂಕ ಫೆ.15ಬೆಳಗ್ಗೆ 8.00ರಿಂದ ಸಂಜೆ 4.00ಗಂಟೆಯವರೆಗೆ.ಅದೇ ದಿನ ಮತಗಳಎಣಿಕೆ ಕಾರ್ಯ ನಡೆಯಲಿದೆ ಎಂದುಮಹಾಸಭೆಯ ಪ್ರಕಟಣೆಯಲ್ಲಿತಿಳಿಸಲಾಗಿದೆ.