ಯಳಂದೂರು ವಕೀಲರ ಸಂಘಕ್ಕೆ ಆಯ್ಕೆ

ಯಳಂದೂರು ತಾಲೂಕಿನ ವಕೀಲರ ಸಂಘದ ನೂತನ ಜಂಟಿ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾದ ವಕೀಲರಾದ ಗೌಡಹಳ್ಳಿ ಮಹೇಶ್ ಅವರನ್ನು ಸನ್ಮಾನಿಸಲಾಯಿತು. ಜೈಶಂಕರ್, ಮುತ್ತುರಾಜು, ಜಿ.ಎನ್.ಸಂಪತ್ ಇತರರು ಇದ್ದರು.
ಯಳಂದೂರು ತಾಲೂಕಿನ ವಕೀಲರ ಸಂಘದ ನೂತನ ಜಂಟಿ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾದ ವಕೀಲರಾದ ಗೌಡಹಳ್ಳಿ ಮಹೇಶ್ ಅವರನ್ನು ಸನ್ಮಾನಿಸಲಾಯಿತು. ಜೈಶಂಕರ್, ಮುತ್ತುರಾಜು, ಜಿ.ಎನ್.ಸಂಪತ್ ಇತರರು ಇದ್ದರು.
Published on
ಯಳಂದೂರು: ತಾಲೂಕು ವಕೀಲರ ಸಂಘದ ನೂತನ ಜಂಟಿ ಕಾರ್ಯದರ್ಶಿಯಾಗಿ ವಕೀಲರಾದ ಗೌಡಹಳ್ಳಿ ಮಹೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಟ್ಟಣದಲ್ಲಿ ಇತ್ತೀಚೆಗೆ ನ್ಯಾಯಾಲಯ ಆವರಣದಲ್ಲಿರುವ ವಕೀಲರ ಸಂಘದ ಕಚೇರಿಯಲ್ಲಿ ಅಧ್ಯಕ್ಷ ಜೈಶಂಕರ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ವಕೀಲ ಗೌಡಹಳ್ಳಿ ಮಹೇಶ್ ಅವರನ್ನು ಸಂಘದ ಜಂಟಿ ಕಾರ್ಯದರ್ಶಿಯನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಅಧ್ಯಕ್ಷರಾದ ಜೈಶಂಕರ್ ಅವರು ಸೂಚಿಸಿದರೆ ಹಿರಿಯ ವಕೀಲ ಬಸವಟ್ಟಿ ಮಹದೇವಸ್ವಾಮಿ ಅನುಮೋದಿಸಿದರು. ಸರ್ವಸದಸ್ಯರು ಒಪ್ಪಿಗೆ ಸೂಚಿಸಿದರು.

ಬಳಿಕ ಸಂಘದ ಸದಸ್ಯರು ನೂತನ ಜಂಟಿ ಕಾರ್ಯದರ್ಶಿ ಗೌಡಹಳ್ಳಿ ಮಹೇಶ್ ಅವರನ್ನು ಅಭಿನಂದಿಸಿದರು. ಈ ವೇಳೆ ಉಪಾಧ್ಯಕ್ಷರಾದ ಬೂದಿತಿಟ್ಟು ಮುತ್ತುರಾಜು, ಕಾರ್ಯದರ್ಶಿ ಜಿ.ಎನ್.ಸಂಪತ್, ಖಜಾಂಚಿ ರಂಜಿತಾ, ವಕೀಲರಾದ ಬಿ.ಎಂ.ಮಹದೇವಸ್ವಾಮಿ, ಸಿ.ನಾಗರಾಜು, ಅಂಬಳೆ ಸಿದ್ದರಾಜು, ಕೃಷ್ಣ, ಶಶಿಧರ್, ರಾಜಣ್ಣ, ರವೀಶ್, ಸಿ.ಮಹದೇವಸ್ವಾಮಿ, ಹೊನ್ನೂರು ನಾಗರಾಜು, ಕಾಂತರಾಜು, ಅಶ್ವಿನ್ ಕುಮಾರ್, ಕುಮಾರಸ್ವಾಮಿ, ಶ್ರೀನಿವಾಸಮೂರ್ತಿ, ಚಂದನಾ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net