ಮೃತಳ ಗಂಡ ರಾಧಾಕೃಷ್ಣಪ್ಪ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ನಮ್ಮ ಪುತ್ರ ಪುರುಷೋತ್ತಮ್ 10 ತಿಂಗಳ ಹಿಂದೆ ಕೋಲಾರ ತಾಲೂಕಿನ ಮೂಡಲಚಿಂತಹಳ್ಳಿಯ ಯುವತಿಯನ್ನು ಪ್ರೀತಿಸಿ ಕರೆದುಕೊಂಡು ಹೋಗಿದ್ದ. ಈ ವಿಚಾರವಾಗಿ ರಾಜಿ ಮಾಡಿ ಯುವತಿಯನ್ನು ಪಾಲಕರ ಜತೆಯಲ್ಲಿ ಕಳುಹಿಸಿದ್ದೆವು. ಆದರೆ, ಪುನ ಇಬ್ಬರು ಪರಾರಿಯಾಗಿದ್ದು, ಈ ವಿಚಾರವಾಗಿ ಯುವತಿ ಅಣ್ಣಂದಿರು ಆಗಾಗ ಮನೆಯ ಬಳಿ ಬಂದು ಗಲಾಟೆ ಮಾಡುತ್ತಿದ್ದರು.