ಅಪಘಾತಕ್ಕೆ ವೃದ್ಧ ಬಲಿ

Elderly man killed in accident
Elderly man killed in accident
Published on

ಚಿಂತಾಮಣಿ: ಚೊಕ್ಕರೆಡ್ಡಿಹಳ್ಳಿ ಸಮೀಪ ಸೋಮವಾರ ಸಂಜೆ 2 ಬೈಕ್​ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ವೃದ್ಧ ಸ್ಥಳದಲ್ಲೇ ಮೃತಪಟ್ಟಿದ್ದು, ಯುವಕ ಗಂಭೀರ ಗಾಯಗೊಂಡಿದ್ದಾನೆ.

ಚೊಕ್ಕರೆಡ್ಡಿಹಳ್ಳಿ ನಿವಾಸಿ ನಾಗರಾಜ್​ (65) ಮೃತ. ಅಂಬಾಜಿದುರ್ಗ ಹೋಬಳಿಯ ಉಲ್ಲಪ್ಪನಹಳ್ಳಿ ನಿವಾಸಿ ಜಗದೀಶ್​ (22) ಗಾಯಗೊಂಡಿದ್ದು, ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಂತಾಮಣಿ ಗ್ರಾಮಾಂತರ ಸ್ಥಳ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net