

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಗುರುವಾರ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಬರೋಬ್ಬರಿ 35.65 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ.ಬೆಂಗಳೂರು ನಗರದ 3 ಕಡೆ, ಮಂಡ್ಯ, ಮೈಸೂರು, ಗದಗ, ವಿಜಯಪುರ, ಯಾದಗಿರಿ ಸೇರಿ ಒಟ್ಟು 8 ಜಿಲ್ಲೆಗಳ 42 ದಾಳಿ ನಡೆದಿದೆ.
ಹಾಸನ ಮಹಾನಗರ ಪಾಲಿಕೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಎಇಇ) ಎಂ.ಸಿ. ಸತ್ಯನಾರಾಯಣ ಅವರು 4 ಗಂಟೆ ನಿವಾಸದ ಬಾಗಿಲು ತೆರೆಯದೆ ಸತಾಯಿಸಿ, ಕೊನೆಗೆ ಬಾಗಿಲು ತೆಗೆದಿದ್ದಾರೆ.