ಕುಟುಂಬಗಳಲ್ಲಿ ಭರವಸೆಯ ನಗು ಮೂಡಿಸಲು ಶ್ರಮ

ಕಲಬುರಗಿಯ ಜಿಮ್ಸ್​ ಆಸ್ಪತ್ರೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಉಚಿತ ಸಮಗ್ರ ಸೀಳು ತುಟಿ ಹಾಗೂ ಸೀಳು ಅಂಗುಳ ಶಸಚಿಕಿತ್ಸಾ ಶಿಬಿರವನ್ನು ಡಾ.ಶಿವಕುಮಾರ್​ ಸಿ.ಆರ್​. ಉದ್ಘಾಟಿಸಿದರು. ಕಾರ್ನಾಡ್​ ಡೆನ್ನಿಸ್​, ಪ್ರಶಾಂತಕುಮಾರ, ಡಾ.ರಾಮಕುಮಾರ್​ ವೆಂಕಟೇಶ್ವರನ್​, ಡಾ.ಉಮೇಶ ಎಸ್​.ಆರ್​., ಡಾ.ರೇವಣಸಿದ್ದಪ್ಪ ಭೋಸಗಿ, ಡಾ.ಜಗದೀಶ್​ ಎಂ.ಬಿ ಇತರರಿದ್ದರು.
ಕಲಬುರಗಿಯ ಜಿಮ್ಸ್​ ಆಸ್ಪತ್ರೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಉಚಿತ ಸಮಗ್ರ ಸೀಳು ತುಟಿ ಹಾಗೂ ಸೀಳು ಅಂಗುಳ ಶಸಚಿಕಿತ್ಸಾ ಶಿಬಿರವನ್ನು ಡಾ.ಶಿವಕುಮಾರ್​ ಸಿ.ಆರ್​. ಉದ್ಘಾಟಿಸಿದರು. ಕಾರ್ನಾಡ್​ ಡೆನ್ನಿಸ್​, ಪ್ರಶಾಂತಕುಮಾರ, ಡಾ.ರಾಮಕುಮಾರ್​ ವೆಂಕಟೇಶ್ವರನ್​, ಡಾ.ಉಮೇಶ ಎಸ್​.ಆರ್​., ಡಾ.ರೇವಣಸಿದ್ದಪ್ಪ ಭೋಸಗಿ, ಡಾ.ಜಗದೀಶ್​ ಎಂ.ಬಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಿಷನ್​ ಸ್ಮೈಲ್​ ಸಿಇಒ ಕಾರ್ನಾಡ್​ ಡೆನ್ನಿಸ್​ ಹೇಳಿಕೆ
  • ಜಿಮ್ಸ್​ನಲ್ಲಿ ಸೀಳುತುಟಿ ಉಚಿತ ಶಸಚಿಕಿತ್ಸಾ ಶಿಬಿರ
ಕಲಬುರಗಿ: ಮಿಷನ್​ ಸ್ಮೈಲ್​ ಉಚಿತ ಸೇವಾ ಶಿಬಿರಕ್ಕಾಗಿ ದೇಶದ ವಿವಿಧ ಭಾಗಗಳಿಂದ ನುರಿತ ವೈದ್ಯಕಿಯ ತಂಡ ಆಗಮಿಸಿದ್ದು, ಮುಂದಿನ ದಿನಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಮಕ್ಕಳ ಸೀಳುತುಟಿ ಸಮಸ್ಯೆ ನಿವಾರಿಸಿ, ಕುಟುಂಬಗಳಲ್ಲಿ ಹೊಸ ಭರವಸೆಯ ನಗು ಮೂಡಲಿದೆ ಎಂದು ಮಿಷನ್​ ಸ್ಮೈಲ್​ ಸಿಇಒ ಕಾರ್ನಾಡ್​ ಡೆನ್ನಿಸ್​ ಹೇಳಿದರು.
ವೈದ್ಯಕಿಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್​) ಸೂಪರ್​ ಸ್ಪೇಷಾಲಿಟಿ ಆಸ್ಪತ್ರೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಉಚಿತ ಸಮಗ್ರ ಸೀಳು ತುಟಿ ಹಾಗೂ ಸೀಳು ಅಂಗುಳಿ ಶಸಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಮಿಷನ್​ ಸ್ಮೆಲ್​ ಒಂದು ನೋಂದಾಯಿತ ವೈದ್ಯಕಿಯ ದತ್ತಿ ಸಂಸ್ಥೆಯಾಗಿದ್ದು, 2003ರಿಂದ ಸೀಳುತುಟಿ, ಸೀಳು ಅಂಗುಳಿ ಹಾಗೂ ಇತರೆ ಉಚಿತ ಶಸಚಿಕಿತ್ಸೆ ನೀಡುತ್ತಾ ಬರುತ್ತಿದೆ ಎಂದರು.
ಮುತ್ತೂಟ್​ ಪಾಪಚನ್​ ಗ್ರೂಪ್​ ಮುಖ್ಯಸ್ಥ ಪ್ರಶಾಂತಕುಮಾರ ಮಾತನಾಡಿ, ಮುತ್ತೂಟ್​ ಸಮೂಹ ಸಂಸ್ಥೆ ಬ್ಯಾಂಕಿಂಗ್​ ವ್ಯವಹಾರದ ಜತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ತಲುಪಿಸುತ್ತಿದೆ. ಈ ಮುತೂಟ್​ ಮತ್ತು ಮಿಷನ್​ ಸ್ಮೈಲ್​ ಸಹಭಾಗಿತ್ವದಲ್ಲಿ ಈವರೆಗೆ ಒಟ್ಟು 3,747 ಉಚಿತ ಶಸಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಗಿದೆ. ಈ ಆರ್ಥಿಕ ವರ್ಷದಲ್ಲಿ ಇದು 2ನೇ ಶಿಬಿರವಾಗಿದ್ದು ದೇಶದ ವಿವಿಧ ರಾಜ್ಯಗಳಲ್ಲಿ ಇನ್ನೂ 6 ಶಿಬಿರ ನಡೆಸುವ ಯೋಜನೆ ಹೊಂದಲಾಗಿದೆ ಎಂದು ಹೇಳಿದರು.
ಈ ಸಿಎಸ್​ಆರ್​ ಚಟುವಟಿಕೆಗಳಿಗೆ ಮುತೂಟ್​ ಫಿನ್ಕಾರ್ಪ್​ ಲಿಮಿಟೆಡ್​ (ಚಿನ್ನದ ಸಾಲ), ಮೈಕ್ರೋ ಫೈನಾನ್ಸ್​, ಹೌಸಿಂಗ್​ ಫೈನಾನ್ಸ್​, ಮುತ್ತೂಟ್​ ಕ್ಯಾಪಿಟಲ್​ ಸರ್ವಿಸಸ್​ (ವಾಹನ ಸಾಲ), ರಿಸ್ಕ್​ ಇನ್ಶೂರೆನ್ಸ್​, ಎಕ್ಸಿಮ್​ ಮತ್ತು ಮುತೂಟ್​ ಚಿಟ್ಸ್​ ಸೇರಿ ಒಟ್ಟು 7 ಹಣಕಾಸು ಸಂಸ್ಥೆಗಳು ಬೆಂಬಲ ನೀಡುತ್ತಿವೆ. ಎಲ್ಲ ಶಾಖಾ ಸದಸ್ಯರ ಈ ಶ್ರಮ ಮತ್ತು ಸೇವೆ ನಿಜಕ್ಕೂ ಅಭಿನಂದನೀಯ ಎಂದು ಶ್ಲಾಘಿಸಿದರು.
ಜಿಮ್ಸ್​ನ ವೈದ್ಯಕಿಯ ಅಧೀಕ್ಷಕ ಡಾ.ಶಿವಕುಮಾರ್​ ಸಿ.ಆರ್​. ಮಾತಾನಾಡಿ, ನೋಂದಾಯಿಸಿಕೊಂಡಿರುವ 50 ರಿಂದ 80 ಮಕ್ಕಳಿಗೆ ನಮ್ಮ ಆಸ್ಪತ್ರೆಯಲ್ಲೇ ಸುರತ ಮತ್ತು ಗುಣಮಟ್ಟದ ಚಿಕಿತ್ಸೆ ನೀಡಲಾಗುವುದು. ಇದು ವೈದ್ಯರ ಸೇವಾ ಮನೋಭಾವದಿಂದ ಮಾಡುತ್ತಿರುವ ಕಾರ್ಯ ಎಂದರು.
ಹಿರಿಯ ಅರಿವಳಿಕೆ ತ ಡಾ.ರಾಮಕುಮಾರ್​ ವೆಂಕಟೇಶ್ವರನ್​, ಜಿಮ್ಸ್​ ನಿರ್ದೇಶಕ ಡಾ.ಉಮೇಶ ಎಸ್​.ಆರ್​., ಮಕ್ಕಳ ವಿಭಾಗದ ಉಪ ವೈದ್ಯಕಿಯ ಅಧೀಕ್ಷಕ ಡಾ.ರೇವಣಸಿದ್ದಪ್ಪ ಭೋಸಗಿ, ಅರಿವಳಿಕೆ (ಅನಸ್ಥಿಷಿಯಾಲಜಿ) ವಿಭಾಗದ ಉಪ ವೈದ್ಯಕಿಯ ಅಧೀಕ್ಷಕ ಡಾ.ಜಗದೀಶ್​ ಎಂ.ಬಿ ಇತರರಿದ್ದರು.
"

ಈವರೆಗೆ ಒಟ್ಟು 77,000ಕ್ಕೂ ಹೆಚ್ಚು ಮಕ್ಕಳ ತಪಾಸಣೆ ನಡೆಸಲಾಗಿದ್ದು, 52,500ಕ್ಕೂ ಹೆಚ್ಚು ಮಕ್ಕಳಿಗೆ ಯಶಸ್ವಿ ಶಸಚಿಕಿತ್ಸೆ ಮಾಡಲಾಗಿದೆ. ಸಂಸ್ಥೆಯ ನಿಸ್ವಾರ್ಥ ಸೇವೆ ಹಾಗೂ ಸತ್ಕರ್ಮದ ಫಲವಾಗಿ, ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ಮತ್ತು ಹೊಸ ಜೀವನ ಲಭಿಸುವಂತಾಗಲಿದೆ.

— > ಕಾರ್ನಾಡ್​ ಡೆನ್ನಿಸ್​, ಸಿಇಒ, ಮಿಷನ್​ ಸ್ಮೈಲ್​


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net