ಹಳ್ಳಿ ಮಕ್ಕಳ ಪ್ರತಿಭೆ ಗುರುತಿಸುವ ಕೆಲಸವಾಗಲಿ

 ಕಿಕ್ಕೇರಿಯಲ್ಲಿ ನಾಟ್ಯ ಸ್ಕೂಲ್ ಆಫ್ ಡಾನ್ಸ್ ವತಿಯಿಂದ ಈಚೆಗೆ ನೃತ್ಯ ಪ್ರದರ್ಶನ ಕಾರ್ಯಕ್ರಮ ಜರುಗಿತು. ಬಿ.ಪ್ರಕಾಶ್, ಕೆ.ವಿ.ಅರುಣ್ ಕುಮಾರ್, ಮಹೇಶ್ ಮತ್ತಿತರರು ಇದ್ದರು.
ಕಿಕ್ಕೇರಿಯಲ್ಲಿ ನಾಟ್ಯ ಸ್ಕೂಲ್ ಆಫ್ ಡಾನ್ಸ್ ವತಿಯಿಂದ ಈಚೆಗೆ ನೃತ್ಯ ಪ್ರದರ್ಶನ ಕಾರ್ಯಕ್ರಮ ಜರುಗಿತು. ಬಿ.ಪ್ರಕಾಶ್, ಕೆ.ವಿ.ಅರುಣ್ ಕುಮಾರ್, ಮಹೇಶ್ ಮತ್ತಿತರರು ಇದ್ದರು.
Published on

ಕಿಕ್ಕೇರಿ:

ಪಾಶ್ಚಾತ್ಯ ಸಂಸ್ಕೃತಿಯಿಂದ ಸಂಸ್ಕೃತಿ, ಸಂಸ್ಕಾರ ನಶಿಸುತ್ತಿದೆ ಎಂದು ಮಾಜಿ ಶಾಸಕ ಬಿ. ಪ್ರಕಾಶ್ ಅಭಿಪ್ರಾಯಪಟ್ಟರು.


ಇಲ್ಲಿನ ನಾಟ್ಯ ಸ್ಕೂಲ್ ಆಫ್ ಡಾನ್ಸ್ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಸಂಸ್ಕೃತಿ ಸೌರಭ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ದೇಶಿ ಸಂಸ್ಕೃತಿ, ಕಲೆ ಮರೆಯಾಗುವ ಮುನ್ನ ಮಕ್ಕಳಲ್ಲಿ ಅವುಗಳ ಬೀಜ ಬಿತ್ತಿ ಸಂರಕ್ಷಣೆ ಮಾಡಬೇಕಿದೆ ಎಂದರು.


ಗ್ರಾಪಂ ಮಾಜಿ ಅಧ್ಯಕ್ಷ ಕೆ.ವಿ.ಅರುಣ್ ಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಲ್ಲಿನ ಸುಪ್ತ ಪ್ರತಿಭೆ ಹೆಕ್ಕಿ ತೆಗೆಯುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ದೇಸಿ ಕಲೆ ಉಳಿಸಲು ಮತ್ತಷ್ಟು ವಿನೂತನ ಪ್ರಯತ್ನಗಳು ಸಾಗಲಿ. ಕಲೆಗಾಗಿ ಉದ್ಯೋಗ ಬಿಟ್ಟು, ಬದುಕು ಮೀಸಲಿಟ್ಟು ಹಳ್ಳಿಗಾಡಿನ ಮಕ್ಕಳಿಗೆ ಸಂಸ್ಕೃತಿ, ಕಲೆಯನ್ನು ಪರಿಚಯಿಸುತ್ತಿರುವ ಪಣೀಶ್ ಅವರ ಕಾರ್ಯಕ್ಕೆ ಎಲ್ಲರ ಸಹಕಾರವಿರಲಿ ಎಂದು ಮನವಿ ಮಾಡಿದರು.


ಮಲ್ಲಿಕಾರ್ಜುನ ಟ್ರಸ್ಟ್ ಅಭಿಮಾನಿ ಬಳಗದ ಅಧ್ಯಕ್ಷ ಗಂಜಿಗೆರೆ ಮಹೇಶ್ ಮಾತನಾಡಿ, ನಗರ ಪ್ರದೇಶದ ಮಕ್ಕಳಿಗೆ ಸರಿಸಾಟಿಯಾಗಿ ಪ್ರತಿಭೆ ಪ್ರದರ್ಶಿಸುತ್ತಿರುವ ಗ್ರಾಮೀಣ ಮಕ್ಕಳ ಸುಪ್ತ ಪ್ರತಿಭೆ ಗುರುತಿಸುವ ಕೆಲಸ ಹೆಚ್ಚಾಗಿ ನಡೆಯಬೇಕಿದೆ ಎಂದರು. ಇದೇ ವೇಳೆ ಮಕ್ಕಳಿಂದ ಆಕರ್ಷಕ ನೃತ್ಯ ಕಾರ್ಯಕ್ರಮ ನಡೆಯಿತು. ಸತೀಶ್, ಕುಂದೂರು ಮಂಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net