ಆಸಕ್ತರಿಗಷ್ಟೇ ಒಲಿಯಲಿದೆ ವಿದ್ಯೆ Education

ಆಸಕ್ತರಿಗಷ್ಟೇ ಒಲಿಯಲಿದೆ ವಿದ್ಯೆ Education
ಆಸಕ್ತರಿಗಷ್ಟೇ ಒಲಿಯಲಿದೆ ವಿದ್ಯೆ Education
Published on
ಪಾತಪಾಳ್ಯ: ಓದಿನಲ್ಲಿ ಶ್ರದ್ಧೆ, ಆಸಕ್ತಿ ಇರುವವರಿಗೆ ವಿದ್ಯೆ ಸುಲಭವಾಗಿ ಒಲಿಯುತ್ತದೆ ಎಂದು ಶಿಕ್ಷಕಿ ಕೆ.ಉಷಾರಾಣಿ ತಿಳಿಸಿದರು.Education
ಬಾಗೇಪಲ್ಲಿ ತಾಲೂಕಿನ ನಾರೇಮದ್ದೇಪಲ್ಲಿ ಶ್ರೀ ವಿನಾಯಕ ಪ್ರೌಢಶಾಲೆಯಲ್ಲಿ ಶನಿವಾರ ಹೆಚ್ಚು ಅಂಕ ಪಡೆದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಮಕ್ಕಳ ಜೀವನ ಶೈಲಿ ಬದಲಾಯಿಸುವ ಚಾತುರ್ಯ ಶಿಕ್ಷಕರಲ್ಲಿದೆ. ವಿದ್ಯಾರ್ಥಿಗಳು ತಪು$್ಪ ಮಾಡಿದಾಗ ಮೃದುವಾಗಿ ತಿದ್ದಿ ಹೇಳಿದರೆ ಮತ್ತೆ ಎಂದಿಗೂ ತಪು$್ಪ ಮಾಡುವುದಿಲ್ಲ. ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಿದರೆ ಅವರು ಕಾಣಿಕೆ ನೀಡುತ್ತಾರೆ ಎಂದರು.
ಶಿಕ್ಷಕಿ ಮುನಿರತ್ನಮ್ಮ ಮಾತನಾಡಿ, ತಂದೆ&ತಾಯಿಯರು ಮಕ್ಕಳಿಗೆ ಸಂಸ್ಕಾರ ಕಲಿಸಿಕೊಟ್ಟರೆ ಅವರು ಕೆಟ್ಟ ದಾರಿ ತುಳಿಯುವುದಿಲ್ಲ. ಸಂಸ್ಕಾರಯುತ ಮನುಷ್ಯ ಬದುಕಿನುದ್ದಕ್ಕೂ ಸಾಧನೆ ಹಾದಿಯಲ್ಲಿ ಮುನ್ನಡೆಯುತ್ತಾನೆ. ಸಂಸ್ಕಾರವು ಜೀವನದ ಮೌಲ್ಯ ಎತ್ತಿಹಿಡಿಯುತ್ತದೆ ಎಂದರು.
ಶಿಕ್ಷಕ ಎನ್​.ಈಶ್ವರಾಚಾರಿ ಮಾತನಾಡಿ, ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ವಿದ್ಯಾರ್ಥಿಗಳು ರೂಪುಗೊಳ್ಳಬೇಕು. ಇದಕ್ಕೆ ಪಾಲಕರ, ಶಿಕ್ಷಕರ ಕಾಳಜಿ ಅಗತ್ಯ ಎಂದರು.ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಭಾಗ್ಯಮ್ಮ, ಎ.ಸ್ವಾತಿಯನ್ನು ಸನ್ಮಾನಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net