ಮಕ್ಕಳ ಭವಿಷ್ಯಕ್ಕೆ ಶಿಕ್ಷಣವೇ ಭದ್ರ ಬುನಾದಿ

ಸರಗೂರು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ನಿವೃತ್ತ ನೌಕರರ ಸಂಘದ ವತಿಯಿಂದ ಮಕ್ಕಳಿಗೆ ನೋಟ್ ಬುಕ್ ವಿತರಿಸಲಾಯಿತು. ಶಂಭುಮೂರ್ತಿ, ರಾಮಲಿಂಗಪ್ಪ, ಸಣ್ಣಸ್ವಾಮಿ, ನಿಂಗರಾಜು ಇತರರು ಇದ್ದರು.
ಸರಗೂರು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ನಿವೃತ್ತ ನೌಕರರ ಸಂಘದ ವತಿಯಿಂದ ಮಕ್ಕಳಿಗೆ ನೋಟ್ ಬುಕ್ ವಿತರಿಸಲಾಯಿತು. ಶಂಭುಮೂರ್ತಿ, ರಾಮಲಿಂಗಪ್ಪ, ಸಣ್ಣಸ್ವಾಮಿ, ನಿಂಗರಾಜು ಇತರರು ಇದ್ದರು.
Published on

ಸರಗೂರು: ಶಿಕ್ಷಣವೇಮಕ್ಕಳ ಭವಿಷ್ಯವನ್ನು ರೂಪಿಸುವಶಕ್ತಿಯಾಗಿದ್ದು, ವಿದ್ಯಾರ್ಥಿಗಳುಶ್ರದ್ಧೆಯಿಂದ ವಿದ್ಯಾಭ್ಯಾಸಮಾಡಿ ಉತ್ತಮ ನಾಗರಿಕರಾಗಿ ಬೆಳೆಯಬೇಕುಎಂದು ನಿವೃತ್ತ ನೌಕರರ ಸಂಘದಅಧ್ಯಕ್ಷ ಶಂಭುಮೂರ್ತಿ ಹೇಳಿದರು.


ಪಟ್ಟಣದಸರ್ಕಾರಿ ಹಿರಿಯ ಪ್ರಾಥಮಿಕಬಾಲಕಿಯರ ಶಾಲೆಯಲ್ಲಿ ಸೋಮವಾರನಿವೃತ್ತ ನೌಕರರ ಸಂಘ ಆಯೋಜಿಸಿದ್ದವಿದ್ಯಾರ್ಥಿನಿಯರಿಗೆ ಉಚಿತನೋಟ್‌ಬುಕ್ ವಿತರಣೆ ಕಾರ್ಯಕ್ರಮದಲ್ಲಿಮಾತನಾಡಿದರು
.

ಶಿಕ್ಷಣವುಮಕ್ಕಳ ಜೀವನದ ಭದ್ರ ಬುನಾದಿಯಾಗಿದ್ದು,ಪ್ರತಿಯೊಬ್ಬ ವಿದ್ಯಾರ್ಥಿನಿಯೂಶಿಸ್ತು, ಪರಿಶ್ರಮಹಾಗೂ ಉತ್ತಮ ಸಂಸ್ಕಾರದೊಂದಿಗೆವಿದ್ಯಾಭ್ಯಾಸ ಮಾಡಿ ಉಜ್ವಲ ಭವಿಷ್ಯರೂಪಿಸಿಕೊಳ್ಳಬೇಕು ಎಂದು ಸಲಹೆನೀಡಿದರು.

ಎಸ್‌ಡಿಎಂಸಿಅಧ್ಯಕ್ಷ ಎಸ್
.ಡಿ.ಸಣ್ಣಸ್ವಾಮಿಮಾತನಾಡಿ, ಇಂತಹಸಮಾಜಮುಖಿ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿಶಿಕ್ಷಣದ ಬಗ್ಗೆ ಆಸಕ್ತಿಹೆಚ್ಚಿಸುತ್ತವೆ. ಸರಗೂರಿನಲ್ಲಿಕೆಪಿಎಸ್ ಶಾಲೆ ಆರಂಭಿಸುವ ಸಂಬಂಧಪ್ರಸ್ತಾವನೆ ನಡೆಯುತ್ತಿದ್ದು,ಬೇರೆಡೆ ಆರಂಭಿಸುವ ಬದಲುಸರ್ಕಾರಿ ಹಿರಿಯ ಪ್ರಾಥಮಿಕಬಾಲಕಿಯರ ಶಾಲೆಯಲ್ಲಿಯೇ ಕೆಪಿಎಸ್ಶಾಲೆ ಆರಂಭಿಸಿದರೆ ಸುತ್ತಮುತ್ತಲಿನಗ್ರಾಮಗಳ ಮಕ್ಕಳಿಗೆ ಹೆಚ್ಚಿನಅನುಕೂಲವಾಗಲಿದೆ. ಈಕುರಿತು ಸಂಸದರು ಹಾಗೂ ಶಾಸಕ ಅನಿಲ್ಚಿಕ್ಕಮಾದು ಅವರು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ನಿವೃತ್ತನೌಕರರ ಸಂಘದ ಉಪಾಧ್ಯಕ್ಷ ರಾಮಲಿಂಗಪ್ಪಮಾತನಾಡಿ
, ವಿದ್ಯಾರ್ಥಿಗಳಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದಪ್ರತಿವರ್ಷ ಸಮಾಜಮುಖಿ ಕಾರ್ಯಕ್ರಮಗಳನ್ನುಹಮ್ಮಿಕೊಳ್ಳಲಾಗುತ್ತಿದ್ದು,ಶಿಕ್ಷಣದ ಬೆಳವಣಿಗೆಗೆಪ್ರತಿಯೊಬ್ಬರೂ ಕೈಜೋಡಿಸಬೇಕುಎಂದು ತಿಳಿಸಿದರು.

ಮುಖ್ಯಶಿಕ್ಷಕಎಚ್
.ಎನ್. ನಿಂಗರಾಜುಮಾತನಾಡಿ, ವಿದ್ಯಾರ್ಥಿಗಳಶೈಕ್ಷಣಿಕ ಪ್ರಗತಿಗೆ ನೆರವಾಗುವಂತಹಕಾರ್ಯಕ್ರಮ ಹಮ್ಮಿಕೊಂಡ ನಿವೃತ್ತಿನೌಕರರ ಸಂಘದ ಕಾರ್ಯ ಮಾದರಿಯಾಗಿದೆಎಂದರು. ಬಳಿಕವಿದ್ಯಾರ್ಥಿನಿಯರಿಗೆ ಉಚಿತವಾಗಿನೋಟ್‌ಬುಕ್‌ಗಳನ್ನು ವಿತರಿಸಲಾಯಿತು.ಇಸಿಒ ನಂಜರಾಜು ಬಿ.ಎಂ.,ನಿವೃತ್ತ ನೌಕರರ ಸಂಘದಪದಾಧಿಕಾರಿಗಳಾದ ವಿಶ್ವೇಂದ್ರ,ಲಿಂಗಾಚಾರ್, ರಾಮಲಿಂಗಪ್ಪ,ಮಹದೇವಪ್ಪ, ಎಸ್‌ಡಿಎಂಸಿಉಪಾಧ್ಯಕ್ಷ ಎಂ.ಶಿವರುದ್ರ,ಶಿಕ್ಷಕರಾದ ಸವಿತಾ,ಎಸ್.ಕಲ್ಪನಾ,ಶ್ವೇತಾ, ಪುಷ್ಪಾ,ರಾಜಮ್ಮ, ಪ್ರತಾಪ್,ಐಶ್ವರ್ಯಾ, ಆಶಾಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net