ಪ್ರಗತಿಗೆ ಶಿಕ್ಷಣವೇ ಮೂಲ ಅಸ್ತ್ರ

 ಬಸವಕಲ್ಯಾಣದ ಖೂಬಾ ಕಾಲನಿಯಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಡಾ.ಬಾಬಾಸಾಹೇಬ ಅಂಬೇಡ್ಕರ್​ ಅವರ 135ನೇ ಜಯಂತ್ಯುತ್ಸವದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಭೀಮಶಾ ಫುಲೆ, ಸೂರ್ಯಕಾಂತ ಗಾಯಕವಾಡ, ಕಾಶಿನಾಥ ಕಾಟೆ, ಅಂಕುಶ ಮೈಸೆ, ರೋಹಿದಾಸ ಮಾಲೆ, ತುಕರಾಮ ಕಾಂಬಳೆ ಇತರರಿದ್ದರು.
ಬಸವಕಲ್ಯಾಣದ ಖೂಬಾ ಕಾಲನಿಯಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಡಾ.ಬಾಬಾಸಾಹೇಬ ಅಂಬೇಡ್ಕರ್​ ಅವರ 135ನೇ ಜಯಂತ್ಯುತ್ಸವದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಭೀಮಶಾ ಫುಲೆ, ಸೂರ್ಯಕಾಂತ ಗಾಯಕವಾಡ, ಕಾಶಿನಾಥ ಕಾಟೆ, ಅಂಕುಶ ಮೈಸೆ, ರೋಹಿದಾಸ ಮಾಲೆ, ತುಕರಾಮ ಕಾಂಬಳೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅನಿಸಿಕೆ
  • ಕಲ್ಯಾಣದಲ್ಲಿ ಡಾ.ಅಂಬೇಡ್ಕರ್​ ಜಯಂತ್ಯುತ್ಸವ
 ಬಸವಕಲ್ಯಾಣ: ಪ್ರಗತಿಗೆ ಶಿಕ್ಷಣವೇ ಮೂಲ ಅಸವಾಗಿದ್ದು, ಶ್ರಮ ವಹಿಸಿ ಅಭ್ಯಾಸ ಮಾಡಿ ಜೀವನದಲ್ಲಿ ಉನ್ನತ ಸ್ಥಾನಮಾನ ಪಡೆಯಬೇಕು ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿದರು. 
ನಗರದ ಅನುಭವ ಮಂಟಪ ರಸ್ತೆಯ ಖೂಬಾ ಕಾಲನಿಯಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಸಂವಿಧಾನ ಶಿಲ್ಪಿ,  ಡಾ.ಬಾಬಾಸಾಹೇಬ ಅಂಬೇಡ್ಕರ್​ ಅವರ 135ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದಲ್ಲಿ ಶ್ರೇಷ್ಠವಾದ ಸಂವಿಧಾನವನ್ನು ಡಾ.ಅಂಬೇಡ್ಕರ್​ ನೀಡಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್​ ಅವರು ತೋರಿದ ದಾರಿಯಲ್ಲಿ ಎಲ್ಲರೂ ನಡೆಯಬೇಕಿದೆ ಎಂದರು.
ಮಹಾರಾಷ್ಟ್ರದ ಕರಾಳಿ ಬುದ್ಧ ವಿಹಾರದ ಪೂಜ್ಯ ಭಂತೆ ಸುಮಂಗಲ ಮಹಾಥೆರೋ, ಕಿಲ್ಲಾರಿ ಬುದ್ಧ ವಿಹಾರದ ಪೂಜ್ಯ ಭಂತೆ ಧಮ್ಮಸಾರ ಥೇರೋ ಸಾನ್ನಿಧ್ಯ, ಪೂಜ್ಯ ರವೀಂದ್ರ ಗುರುಜಿ ಸಮ್ಮುಖ ವಹಿಸಿದ್ದರು. ಸಿದ್ಧಾರ್ಥ ಚಾರಿಟೇಬಲ್​ ಟ್ರಸ್ಟ್​ ಅಧ್ಯಕ್ಷ ಭೀಮಶಾ ಫುಲೆ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಸೂರ್ಯಕಾಂತ ಗಾಯಕವಾಡ ಪ್ರಾಸ್ತಾವಿಕ ಮಾತನಾಡಿ, ನಿರೂಪಣೆ ಮಾಡಿದರು. ಶಿಕ್ಷಕ ಚಂದ್ರಕಾಂತ ಕಿವಡೆ ಸ್ವಾಗತಿಸಿದರು. ರೋಹಿದಾಸ ಮಾಲೆ ವಂದಿಸಿದರು.
ದೀನ್​ ಧಾಮ ಶಾಲೆ ಅಧ್ಯಕ್ಷ ದಿಲೀಪ ಡಾಂಗೆ, ಪ್ರಮುಖರಾದ ಸಂಜುಕುಮಾರ ಗಾಯಕವಾಡ, ರಾಹುಲ ದಲಾಲೆ, ಪಿಂಟು ಕಾಂಬಳೆ. ಇಸ್ಮಾಯಿಲ್​ ಬೆಳಕೋಣಿ, ಧನರಾಜ ರಾಜೋಳೆ, ಸ್ವಾಗತ ಸಮಿತಿಯ ಕಾಶಿನಾಥ ಕಾಟೆ, ಅಂಕುಶ ಮೈಸೆ, ತುಕಾರಾಮ ಕಾಂಬಳೆ, ಮಚಿಂದ್ರ ಕದಂ, ರಾಜಕುಮಾರ ತುತಾರೆ, ಅಂಬಾರಾಯ ಭಾಸ್ಕರ್​, ಪ್ರಶಾಂತ ಸೇರಿಕಾರ, ಅನಿಲ ಕಾಂಬಳೆ, ದತ್ತಾತ್ರಿ ಗೋಳಾ, ವಿಜಯಕುಮಾರ ನಾಟೇಕರ್​, ಜೈಯದತ್ತ ನಿಂಬರ್ಗಿ, ಸೋಪಾನ್​ ಲಾಖೆ, ಧನರಾಜ ಡಾಂಗೆ, ರಾಜೇಂದ್ರ ಗರುಡಕರ್​ ಇದ್ದರು. ನಂತರ ನಡೆದ ವೈಭವದ ಮೆರವಣಿಗೆಗೆ ಮಾಜಿ ಎಂಎಲ್ಸಿ ವಿಜಯಸಿಂಗ್​ ಚಾಲನೆ ನೀಡಿದರು. ಹುಲಸೂರು ತಹಸೀಲ್ದಾರ್​ ಶಿವಾನಂದ ಮೇತ್ರೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net