ಬಾಲ್ಯವಿವಾಹ ನಿಮೂರ್ಲನೆಗೆ ಶಿಕ್ಷಣ ಅಗತ್ಯ / VIJAYAPUR

ವಿಜಯಪುರದ ಪುರಸಭೆಯಲ್ಲಿ ಬಾಲ್ಯ ವಿವಾಹ ನಿಷೇಧದ ಕುರಿತು ಕರಪತ್ರ ಬಿಡುಗಡೆ ಮಾಡಲಾಯಿತು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, ಪುರಸಭೆ ಸಿಬ್ಬಂದಿ ಲಿಂಗಣ್ಣ, ಪೂರ್ಣಿಮಾ, ಹೇಮಾವತಿ, ಜನಾರ್ದನ, ವೆಂಕಟರತ್ನಮ್ಮ, ಶಾರದಮ್ಮ ಇದ್ದರು.
ವಿಜಯಪುರದ ಪುರಸಭೆಯಲ್ಲಿ ಬಾಲ್ಯ ವಿವಾಹ ನಿಷೇಧದ ಕುರಿತು ಕರಪತ್ರ ಬಿಡುಗಡೆ ಮಾಡಲಾಯಿತು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, ಪುರಸಭೆ ಸಿಬ್ಬಂದಿ ಲಿಂಗಣ್ಣ, ಪೂರ್ಣಿಮಾ, ಹೇಮಾವತಿ, ಜನಾರ್ದನ, ವೆಂಕಟರತ್ನಮ್ಮ, ಶಾರದಮ್ಮ ಇದ್ದರು.
Published on
ವಿಜಯಪುರ : ಬಾಲ್ಯ ವಿವಾಹ ಪದ್ಧತಿ ನಿಮೂರ್ಲನೆ ಮಾಡುವಲ್ಲಿ ಸಮುದಾಯದ ಪಾತ್ರ ಪ್ರಮುಖ. ಬಾಲ್ಯ ವಿವಾಹ ಸಾಮಾಜಿಕ ಪಿಡುಗುಗಳಲ್ಲಿ ಒಂದಾಗಿದ್ದು, ಕುಟುಂಬ, ಸಮಾಜದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ ಎಂದು ಪುರಸಭೆ ಆರೋಗ್ಯ ನಿರೀಕ್ಷಕಿ ಲಾವಣ್ಯಾ ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಬೆಂಗಳೂರು ಗ್ರಾಮಾಂತರ ಜಿಲ್ಲೆ ವತಿಯಿಂದ ಪುರಸಭೆಯಲ್ಲಿ ಆಯೋಜಿಸಿದ್ದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಪ್ರಾಪ್ತ ವಯಸ್ಸಿನಲ್ಲಿ ವಿವಾಹ, ಚಿಕ್ಕ ವಯಸ್ಸಿನಲ್ಲಿ ಗರ್ಭಧರಿಸುವುದರಿಂದ ಹೆಣ್ಣು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ರಕ್ತಹಿನತೆ, ನಿಶಕ್ತಿ ಉಂಟಾಗಿ ಗರ್ಭಪಾತವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಅಲ್ಲದೇ ಬಾಲ್ಯವಿವಾಹದಿಂದ ಅಂಗವೈಕಲ್ಯ, ಬುದ್ಧಿಮಾಂಧ್ಯ ಹಾಗೂ ರಕ್ತಹಿನವುಳ್ಳ ಮಗು ಹುಟ್ಟುತ್ತದೆ. ಇದರಿಂದ ಹೆಣ್ಣಿನ ದೈಹಿಕ ಸಾಮರ್ಥ್ಯ ಕುಂಠಿತವಾಗುತ್ತದೆ. ಶಿಶುಮರಣ, ತಾಯಿ ಮರಣ ಹೆಚ್ಚಾಗುತ್ತದೆ. ಈ ಅನಿಷ್ಟ ಪದ್ಧತಿ ಜಾರಿಯಲ್ಲಿರಲು ಲಿಂಗ ತಾರತಮ್ಯ, ಬಡತನ, ಆರ್ಥಿಕ ಪರಿಸ್ಥಿತಿ, ಮೂಢನಂಬಿಕೆ ಹಾಗೂ ಅನಕ್ಷರತೆಯೇ ಕಾರಣ. ಆದ್ದರಿಂದ ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರೊಂದಿಗೆ ಸಾಮಾಜಿಕ ಪಿಡುಗುಗಳಿಂದ ಉಂಟಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ಹೇಳಿದರು.
18 ವರ್ಷದೊಳಗಿನ ಮಕ್ಕಳಿಗೆ ಮದುವೆ ಮಾಡಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ -2006 ಹಾಗೂ ಬಾಲ್ಯ (ಕರ್ನಾಟಕ ತಿದ್ದುಪಡಿ) ಅಧಿನಿಯಮ 2016ರಡಿ ಶಿಕ್ಷೆಯಾಗಲಿದೆ. ಆದ್ದರಿಂದ ಮಕ್ಕಳಿಗೆ ಕನಿಷ್ಠ ಪದವಿಯವರೆಗೆ ವಿದ್ಯಾಭ್ಯಾಸ ನೀಡಿ ಎಂದು ಅರಿವು ಮೂಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net