ಮುಳಬಾಗಿಲು: ಮನುಷ್ಯನು ಹುಟ್ಟುತ್ತ ವಿಶ್ವಮಾನವನಾಗಿ, ಬೆಳೆಯುತ್ತಾ ಅಲ್ಪ ಮಾನವನಾಗುತ್ತಾನೆ. ಅದನ್ನು ಹೋಗಲಾಡಿಸಿ ಮತ್ತೆ ವಿಶ್ವಮಾನವನಾಗಿ ಪರಿವರ್ತನೆ ಆಗಬೇಕಾದರೆ ಅವನಿಗೆ ಉತ್ತಮ ಶಿಕ್ಷಣ ಸಿಗಬೇಕು ಎಂದು ತಾಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ಎಂ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದರು. Education
ತಾಲೂಕಿನ ನಂಗಲಿ ಗ್ರಾಮದ ಶ್ರೀ ವರಸಿದ್ಧಿ ವಿನಾಯಕ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪರೀಾ ಪ್ರವೇಶ ಪತ್ರ ವಿತರಿಸಿ ಮಾತನಾಡಿದರು.
ವಿದ್ಯಾಸಂಸ್ಥೆ ಅಧ್ಯಕ್ಷ, ವಕೀಲ ಎನ್.ಎಸ್.ಶೇಷಾದ್ರಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಗಮನದಲ್ಲಿಟ್ಟುಕೊಂಡು ಶಿಕ್ಷಣ ನೀಡಲಾಗುತ್ತಿದೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 500 ಅಂಕಗಳಿಗಿಂತ ಮೇಲ್ಪಟ್ಟು ಫಲಿತಾಂಶ ಪಡೆದ ಎಲ್ಲ ವಿದ್ಯಾರ್ಥಿಗಳಿಗೂ ಆಡಳಿತ ಮಂಡಳಿಯಿಂದ 5 ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದರು.
ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯ ನಿವೃತ್ತ ಮುಖ್ಯಶಿಕ್ಷಕ ಜಿ.ಎ.ಮಧುಸೂದನ್, ಕಾರ್ಯದರ್ಶಿ ಕೆ.ಎಂ.ಸುಬ್ರಹ್ಮಣಿ, ಉಪಾಧ್ಯಕ್ಷ ರಘುರಾಮರೆಡ್ಡಿ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಶಾರದಮ್ಮ, ಉಪನ್ಯಾಸಕರಾದ ಮಾಧವ ರೆಡ್ಡಿ, ಕೇಶವ, ಗೌತಮ್, ಪವಿತ್ರಾ, ಶೃತಿ ಇದ್ದರು.