ಶಿಕ್ಷಣ ಜೀವನ ರೂಪಿಸುವ ಆಯುಧ

Education is a weapon that shapes life.
Education is a weapon that shapes life.
Published on
ಮುಳಬಾಗಿಲು: ಶಿಕ್ಷಣ ಜೀವನ ರೂಪಿಸುವ ಆಯುಧವಾಗಿದ್ದು, ಬಾಲ್ಯದಿಂದಲೇ ಓದಿನತ್ತ ಗಮನಹರಿಸಬೇಕು. ಕೇವಲ ಅಂಕ ಪಡೆದರೆ ಸಾಲದು, ಆಟ-&ಪಾಠ ಎರಡರಲ್ಲೂ ಸಕ್ರಿಯರಾಗಿ ಭಾಗವಹಿಸಿದಾಗ ಉನ್ನತ ವ್ಯಾಸಂಗ-, ಉದ್ಯೋಗ ಪಡೆದು ಜೀವನ ರೂಪಿಸಿಕೊಳ್ಳುವುದರ ಜತೆಗೆ ಇತರರಿಗೂ ಮಾದರಿಯಾಗುತ್ತಿರಿ ಎಂದು ರಾಜ್ಯ ಚುನಾವಣಾ ಆಯೋಗದ ನಿವೃತ್ತ ಆಯುಕ್ತ ಪಿ.ಎನ್​.ಶ್ರೀನಿವಾಸಾಚಾರಿ ಸಲಹೆ ನೀಡಿದರು.
ಬೈರಕೂರು ನೆಹರು ಕನ್ನಡ ಪ್ರೌಢಶಾಲೆಯಲ್ಲಿ ಬುಧವಾರ ಎಂ.ಪವರ್​ ಫೌಂಡೇಷನ್​ ಸಹಯೋಗದಲ್ಲಿ ನಡೆದ ಸಮವಸ್ತ್ರ, ಲೇಖನಿ ಸಾಮಗ್ರಿ ವಿತರಣೆಯಲ್ಲಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ಓದಿನ ಜತೆಗೆ ಪಾಲಕರು, ಶಿಕ್ಷಕರನ್ನು ಗೌರವಿಸುವುದು, ಶ್ರಮವಹಿಸಿ 10ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆಯುವದರ ಜತೆಗೆ ಮುಂದಿನ ಜೀವನದ ಕುರಿತು ಪಾಲಕರು, ಶಿಕ್ಷಕರೊಂದಿಗೆ ಚರ್ಚಿಸಿ ಉನ್ನತ ವ್ಯಾಸಂಗ ಪಡೆಯಲು ಮುಂದಾಗಬೇಕು ಎಂದರು.
ಪ್ರತಿಯೊಬ್ಬರೂ ಜೀವನ ರೂಪಿಸಿಕೊಳ್ಳಬೇಕಾದರೆ ಶಿಕ್ಷಣ ಬಹಳ ಮುಖ್ಯ. ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದರೆ ಜೀವನ ರೂಪಿಸಿಕೊಳ್ಳಬಹುದು. ಗ್ರಾಮೀಣ ಬಡ ಮಕ್ಕಳಿಗೆ ಆರ್ಥಿಕವಾಗಿ ಸಂಘ&ಸಂಸ್ಥೆಗಳು ಸಹಾಯ ಮಾಡುವುದರಿಂದ ಪಾಲಕರ ಮೇಲೆ ಹೊರೆ ಕಡಿಮೆಯಾಗಲಿದ್ದು, ಬಡವರಿಗೆ ಅನುಕೂಲವಾಗುತ್ತದೆ ಎಂದರು.
ಬೈರಕೂರು ನೆಹರು ಕನ್ನಡ ಪ್ರೌಢಶಾಲಾ ಅಧ್ಯಕ್ಷ ಪಿ.ಎಂ.ಸೂರ್ಯನಾರಾಯಣ ಗೌಡ ಮಾತನಾಡಿ, ಹಳ್ಳಿಗಳಿಂದ ಆಗಮಿಸುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಿಂದೆ ದಾನಿಗಳ ನೆರವಿನಿಂದ ವಿದ್ಯಾಸಂಸ್ಥೆ ಸ್ಥಾಪನೆ ಮಾಡಿದ್ದಾರೆ. ಹಳೇ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಗೆ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಸಾರಿಗೆ ಸೇರಿದಂತೆ ಹಲವು ಸೌಲಭ್ಯಗಳು ಇದ್ದರೂ, ಶಾಲೆಗೆ ಕೃಷಿಕರು, ಬಡವರ ಮಕ್ಕಳು ಬರುತ್ತಿದ್ದು, ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರ ನೀಡಲಾಗುತ್ತಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net