ಶಿಕ್ಷಣ ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಗಲಿ

ಸಂಕೋನಟ್ಟಿ ಗ್ರಾಮದ ಕೃಷ್ಣಾ ರೈತ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಲಕ್ಷ್ಮಣ ಸವದಿ, ಡಾ.ಮಹಾಂತಪ್ರಭು ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಶರಣಯ್ಯ ಭಂಡಾರಿಮಠ ಇತರರಿದ್ದರು.
ಸಂಕೋನಟ್ಟಿ ಗ್ರಾಮದ ಕೃಷ್ಣಾ ರೈತ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಲಕ್ಷ್ಮಣ ಸವದಿ, ಡಾ.ಮಹಾಂತಪ್ರಭು ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಶರಣಯ್ಯ ಭಂಡಾರಿಮಠ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಅಥಣಿ ಗ್ರಾಮೀಣ
ಶಿಕ್ಷಣದ ಜತೆಗೆ ಸಂಸ್ಕಾರ ಮುಖ್ಯ, ಶಿಕ್ಷಣ ಅಂಕಗಳಿಗೆ ಸೀಮಿತವಾಗದೆ ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಗಬೇಕು. ಆಧುನಿಕ ಯುಗದಲ್ಲಿ ಕನ್ನಡದೊಂದಿಗೆ ಇಂಗ್ಲಿಷ್ ಭಾಷೆ ಕಲಿಯಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ಕೃಷ್ಣಾ ರೈತ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಅದ್ಭುತ ಪ್ರತಿಭೆಯಿದೆ. ಅದನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವನ್ನು ಶಿಕ್ಷಕರು ಹಾಗೂ ಉಪನ್ಯಾಸಕರು ಮಾಡುತ್ತಿರುವುದು ಶ್ಲಾಘನೀಯ. ತಾಲೂಕಿನ ಸವದಿ ಗ್ರಾಮದ ಬಸವರಾಜ ಕಾಗವಾಡ ಐಎ್ಎಸ್‌ನಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಗಳಿಸಿ ನಮಗೆಲ್ಲ ಹೆಮ್ಮೆ ಎನಿಸಿದ್ದಾರೆ. ಅಲ್ಪಸಂಖ್ಯಾತರರು ಹಿಂದುಳಿಯಲು ಶಿಕ್ಷಣದ ಕೊರತೆಯೇ ಪ್ರಮುಖ ಕಾರಣವಾಗಿದ್ದು. ಪ್ರತಿಯೊಬ್ಬರು ಶಿಕ್ಷಣದ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಶೇಗುಣಸಿ ಡಾ.ಮಹಾಂತಪ್ರಭು ಸ್ವಾಮೀಜಿ ಮಾತನಾಡಿ, ಶಿಕ್ಷಣ ಕೇವಲ ಅಕ್ಷರ ಜ್ಞಾನವಲ್ಲ. ಅದು ಜೀವನದಲ್ಲಿ ಜ್ಞಾನ, ಕೌಶಲ ಮತ್ತು ನೈತಿಕತೆ ಬೆಳೆಸುವ ನಿರಂತರ ಪ್ರಕ್ರಿಯೆ. ಅಥಣಿ ಶಿವಯೋಗಿಗಳ ಪುಣ್ಯಭೂಮಿ ಪ್ರತಿಭಾವಂತರ ನಾಡು. ನೀವೆಲ್ಲರೂ ತಾಯ್ನಡಿನಲ್ಲಿ ಇದ್ದು. ಬಡವರ ಋಣ ತೀರಿಸಬೇಕು. ಹೆತ್ತವರ ಸೇವೆ, ಆರೈಕೆ ಮಾಡಬೇಕು ಎಂದರು.
ವಿಜಯಪುರ ಎಸ್‌ಡಿಎ ಅಕಾಡೆಮಿಯ ಶರಣಯ್ಯ ಭಂಡಾರಿಮಠ ಮಾತನಾಡಿ, ವಿದ್ಯಾರ್ಥಿಗಳು ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಬೇಕು. ಸ್ಪರ್ಧಾತ್ಮಕ ಹಾಗೂ ಎಐ ಯುಗದಲ್ಲಿ ಹೆಚ್ಚು ಜ್ಞಾನ ಸಂಪಾದಿಸಬೇಕು. ಜೀವನವೇ ಶಿಕ್ಷಣವಾಗಿದ್ದು. ಕಲಿಯುವಿಕೆ ನಿರಂತರ ಪ್ರಕ್ರಿಯೆಯಾಗಿದೆ. ಅಥಣಿ ಕ್ಷೇತ್ರದ 100 ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಉನ್ನತ ಅಧಿಕಾರಿಗಳನ್ನಾಗಿಸುವ ಜವಾಬ್ದಾರಿ ಹೊತ್ತುಕೊಳ್ಳುವದಾಗಿ ತಿಳಿಸಿದರು.
ಗಚ್ಚಿನಮಠದ ಶಿವಬಸವ ಸ್ವಾಮೀಜಿ ಆಶೀರ್ವಚನ ನೀಡಿದರು. ಯುವ ಮುಖಂಡ ಚಿದಾನಂದ ಸವದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ಸಿದ್ಧಾರೂಢ ಸವದಿ, ಶ್ರೀಶೈಲ ನಾರಗೊಂಡ, ಸಿದರಾಯ ಯಲಡಗಿ, ಆನಂದ ದೇಶಪಾಂಡೆ, ಅಮೋಘಸಿದ್ಧ ಖೊಬ್ರಿ, ಶ್ರೀಶೈಲ ನಾಯಿಕ, ಬಿಇಒ ಮಲ್ಲಪ್ಪ ಮುಂಜೆ, ಮಹಾದೇವ ಬಿಳಿಕುರಿ, ಶಾಂತಿನಾಥ ಸಂದೇಶ್ವರ ಇತರರಿದ್ದರು.
***.
ಶಿಕ್ಷಣ ಪಡೆದು ವಿದ್ಯಾವಂತರಾದರೆ ಸಾಲದು. ಸಂಸ್ಕಾರವಂತರಾಗಬೇಕು. ಮಾನವೀಯ ಮೌಲ್ಯಗಳಿಲ್ಲದ ವ್ಯಕ್ತಿ ಎಷ್ಟೇ ದೊಡ್ಡವನಾದರೂ ನಿಷ್ಪ್ರಯೋಜಕ. ತಂದೆ, ತಾಯಿ, ಗುರು ಹಾಗೂ ಸಮಾಜದ ಋಣ ತೀರಿಸಲು ಸಾಧ್ಯವಿಲ್ಲ.
ಲಕ್ಷ್ಮಣ ಸವದಿ ಶಾಸಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net