ಶಿಕ್ಷಣ ಇಲಾಖೆ: ಮೊಬೈಲ್ ಆಧಾರಿತ ಹಾಜರಾತಿಗೆ ನೋಂದಾಯಿಸದಿದ್ದರೆ ವೇತನ ಕಟ್

ಮೊಬೈಲ್ ಆಧಾರಿತ ಹಾಜರಾತಿಗೆ ನೋಂದಾಯಿಸದಿದ್ದರೆ ವೇತನ ಕಟ್
ಮೊಬೈಲ್ ಆಧಾರಿತ ಹಾಜರಾತಿಗೆ ನೋಂದಾಯಿಸದಿದ್ದರೆ ವೇತನ ಕಟ್
Published on

ಪ್ರಮುಖ ಮುಖ್ಯಾಂಶಗಳು

  • ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಎಲ್ಲ ಸಿಬ್ಬಂದಿಯು ನೋಂದಣಿ ಮಾಡಿಕೊಳ್ಳುವಂತೆ ಸೂಚನೆ
  • ಒಂದು ವೇಳೆ ನೋಂದಣಿ ಮಾಡಿಕೊಳ್ಳದ ಅಧಿಕಾರಿ, ಸಿಬ್ಬಂದಿ ವೇತನವನ್ನು ಸ್ಥಗಿತಗೊಳಿಸುವ ಜತೆಗೆ ಶಿಸ್ತುಕ್ರಮ
  • ಹೊಸ ಹಾಜರಾತಿ ವ್ಯವಸ್ಥೆಯನ್ನು ಅನುಷ್ಠಾನ ಮಾಡಿರುವ ಬಗ್ಗೆಯೂ ವರದಿ ಮಾಡುವಂತೆ ಇಲಾಖೆ ಆಯುಕ್ತರು ಆದೇಶ
ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಕೂಡಲೇ ಎಲ್ಲ ಸಿಬ್ಬಂದಿಯು ನೋಂದಣಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ನೋಂದಣಿ ಮಾಡಿಕೊಳ್ಳದ ಅಧಿಕಾರಿ, ಸಿಬ್ಬಂದಿ ವೇತನವನ್ನು ಸ್ಥಗಿತಗೊಳಿಸುವ ಜತೆಗೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ನೀಡಲಾಗಿದೆ.
ಇಲಾಖೆ ವ್ಯಾಪ್ತಿಯ ಕಚೇರಿಗಳು, ಉಪ ನಿರ್ದೇಶಕರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಅಧೀನ ಕಚೇರಿಗಳಲ್ಲಿಯೂ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಹಾಗೆಯೇ ಹೊಸ ಹಾಜರಾತಿ ವ್ಯವಸ್ಥೆಯನ್ನು ಅನುಷ್ಠಾನ ಮಾಡಿರುವ ಬಗ್ಗೆಯೂ ವರದಿ ಮಾಡುವಂತೆ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ರಾಜ್ಯ ಸರ್ಕಾರವು ಎಲ್ಲ ಇಲಾಖೆಗಳ ಸಿಬ್ಬಂದಿ ಹಾಜರಾತಿಗಾಗಿ ಕರ್ನಾಟಕ ಆಧುನಿಕ ಹಾಜರಾತಿ ನಿರ್ವಹಣಾ ವ್ಯವಸ್ಥೆಯು (ಕೆಎಎಂಎಸ್) ಅಭಿವೃದ್ಧಿಪಡಿಸಿದೆ, ಕಚೇರಿ ಹಾಜರಾತಿ ವ್ಯವಸ್ಥೆಯನ್ನು ಈ ಮುಖಾಂತರ ನಿರ್ವಹಣೆ ಮಾಡುವುದರಿಂದ ಎಲ್ಲ ಸರ್ಕಾರಿ ಕಚೇರಿಗಳಿಗೂ ಏಕರೂಪದ ಹಾಜರಾತಿ ನಿರ್ವಹಣಾ ವ್ಯವಸ್ಥೆಯು ಅಳವಡಿಕೆಯಾಗಲಿದೆ.
ಆದ್ದರಿಂದ ಈಗಾಗಲೇ ಆಯುಕ್ತರ ಕಚೇರಿ ವಾಟ್ಸ್‌ಆೃಪ್ ಗ್ರೂಪ್ ರಚಿಸಲಾಗಿದ್ದು, ಕೆಎಎಂಎಸ್ ವ್ಯವಸ್ಥೆಗೆ ಕಡ್ಡಾಯವಾಗಿ ಪ್ರತಿ ಸಿಬ್ಬಂದಿಯು ನೋಂದಣಿ ಮಾಡಿಕೊಂಡು ಹಾಜರಾತಿ ನಿರ್ವಹಣೆಗೆ ಕೈಜೋಡಿಸುವಂತೆ ತಿಳಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net