ಅತಿಥಿ ಶಿಕ್ಷಕರ ನೇಮಕಕ್ಕೆ ಶಿಕ್ಷಣ ಇಲಾಖೆ ಆದೇಶ

ಸರ್ಕಾರಿ ಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕಕ್ಕೆ ಶಿಕ್ಷಣ ಇಲಾಖೆ ಆದೇಶ
ಸರ್ಕಾರಿ ಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕಕ್ಕೆ ಶಿಕ್ಷಣ ಇಲಾಖೆ ಆದೇಶ
Published on

ಪ್ರಮುಖ ಮುಖ್ಯಾಂಶಗಳು

  • ಅತಿಥಿ ಶಿಕ್ಷಕರ ನೇಮಕಕ್ಕೆ ಶಿಕ್ಷಣ ಇಲಾಖೆ ಆದೇಶ
  • ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಅತಿಥಿ ಶಿಕ್ಷಕರ ನೇಮಕ
  • ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ

ಬೆಂಗಳೂರು:ಜೂನ್ ಒಂದಕ್ಕೆಶೈಕ್ಷಣಿಕ ವರ್ಷ ಆರಂಭವಾಗಲಿದ್ದುಪ್ರಾಥಮಿಕ ಮತ್ತು ಪ್ರೌಢ ಶಾಲೆಗೆಅತಿಥಿ ಶಿಕ್ಷಕರನ್ನು ನೇಮಕ ಮಾಡಲುಅವಕಾಶ ಕಲ್ಪಿಸಿ ಶಾಲಾ ಶಿಕ್ಷಣಮತ್ತು ಸಾಕ್ಷರತಾ ಇಲಾಖೆ ಆದೇಶಹೊರಡಿಸಿದೆ.

ಇತ್ತೀಚೆಗಷ್ಟೆಸರ್ಕಾರವು ಪ್ರಾಥಮಿಕ ಶಾಲೆಗೆಒಟ್ಟು 40 ಸಾವಿರಮತ್ತು ಪ್ರೌಢ ಶಾಲೆಗೆ 11ಸಾವಿರ ಅತಿಥಿಶಿಕ್ಷಕರನ್ನ ನೇಮಕ ಮಾಡಲು ಅವಕಾಶಕಲ್ಪಿಸಿ ಆದೇಶಿಸಿತ್ತು.ಇದೀಗ ಶಿಕ್ಷಣಇಲಾಖೆಯು ಮೊದಲ ಹಂತದಲ್ಲಿ ಪ್ರಾಥಮಿಕಶಾಲೆಗಳಲ್ಲಿ ಖಾಲಿ ಇರುವ 33,708ಹುದ್ದೆಗಳ ಪೈಕಿ30,337 ಹುದ್ದೆಗಳನ್ನುಹಾಗೆಯೇ ಪ್ರೌಢ ಶಾಲೆಯಲ್ಲಿ 9,730ಅತಿಥಿ ಶಿಕ್ಷಕರನ್ನುನೇಮಿಸಲು ಅವಕಾಶ ಕಲ್ಪಿಸಲಾಗಿದೆ.ನೇಮಕಗೊಳ್ಳುವಅತಿಥಿ ಶಿಕ್ಷಕರಿಗೆ ಮಾಸಿಕ 12,000ರೂ ಗೌರವ ಸಂಭಾವನೆನಿಗದಿ ಪಡಿಸಲಾಗಿದೆ.

ನೇಮಕಾತಿಯಲ್ಲಿಗ್ರಾಮೀಣ ಪ್ರದೇಶದ ಶಾಲೆಗಳು,ಶಿಕ್ಷಕರಿಲ್ಲದಶಾಲೆಗಳು, ಹೆಚ್ಚುವಿದ್ಯಾರ್ಥಿಗಳಿರುವ ಶಾಲೆಗಳು,ಕರ್ನಾಟಕ ಪಬ್ಲಿಕ್ಶಾಲೆಗಳು, ದ್ವಿಭಾಷಾಮಾಧ್ಯಮ ಶಾಲೆಗಳು ಮತ್ತು ಆದರ್ಶವಿದ್ಯಾಲಯಗಳಿಗೆ ಮೊದಲ ಆದ್ಯತೆನೀಡಬೇಕು ಎಂದು ಸೂಚಿಸಲಾಗಿದೆ.ಪ್ರೌಢ ಶಾಲೆಗಳಲ್ಲಿಕಠಿಣ ವಿಷಯಗಳಾದ ಆಂಗ್ಲ ಭಾಷೆ,ಗಣಿತ,ವಿಜ್ಞಾನ ವಿಷಯಗಳಶಿಕ್ಷಕರನ್ನು ಆದ್ಯತೆಯ ಮೇಲೆನೇಮಿಸಬೇಕು.ಯಾವುದೇ ಶಾಲೆಯಲ್ಲಿಹೆಚ್ಚುವರಿ ಶಿಕ್ಷಕರಿದ್ದರೆಅಲ್ಲಿಗೆ ನೇಮಕ ಮಾಡುವಂತಿಲ್ಲಎಂದು ಸೂಚಿಸಲಾಗಿದೆ.ಸರ್ಕಾರಿ ಶಾಲಾಮುಖ್ಯ ಶಿಕ್ಷಕರು ಅತಿಥಿ ಶಿಕ್ಷಕರಆಯ್ಕೆ ಜವಾಬ್ದಾರಿಯನ್ನುನಿರ್ವಹಿಸಬೇಕು. ಕನಿಷ್ಠ ವಿದ್ಯಾರ್ಹತೆಮತ್ತು ಮೆರಿಟ್ ಆಧಾರದ ಮೇಲೆ,ಅನುಭವಕ್ಕೆಆದ್ಯತೆ ನೀಡಿ ಅಭ್ಯರ್ಥಿಗಳನ್ನುಆಯ್ಕೆ ಮಾಡಬೇಕು.ಉತ್ತಮ ಗುಣ ಮತ್ತುನಡತೆ ಹೊಂದಿರುವ ಅಭ್ಯರ್ಥಿಗಳನ್ನುಮಾತ್ರ ಆಯ್ಕೆ ಮಾಡಬೇಕು.ಈ ನೇಮಕಾತಿಪ್ರಕ್ರಿಯೆಯಲ್ಲಿ ಯಾವುದೇಲೋಪದೋಷಗಳಾದಲ್ಲಿ ಸಂಬಂಧಪಟ್ಟತಾಲ್ಲೂಕು ಅಥವಾ ವಲಯದ ಕ್ಷೇತ್ರಶಿಕ್ಷಣಾಧಿಕಾರಿಗಳನ್ನೇ ನೇರಹೊಣೆಗಾರರನ್ನಾಗಿ ಮಾಡಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದುಇಲಾಖೆ ಎಚ್ಚರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net