ಶಿಕ್ಷಣದಿಂದ ಉತ್ತಮ ಸಮಾಜ ನಿಮಾರ್ಣ ಸಾಧ್ಯ / DEVANAHALLI

ದೇವನಹಳ್ಳಿ ಆಕಾಶ್​ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಸ್ಥಾಪಕ ಕೆ.ಮುನಿರಾಜು ಅವರನ್ನು ಸನ್ಮಾನಿಸಲಾಯಿತು. ಆಕಾಶ್​ ಸಮೂಹ ಸಂಸ್ಥೆ ಮುಖ್ಯಸ್ಥೆ ಪುಷ್ಪ ಮುನಿರಾಜು, ಉಪಾಧ್ಯಕ್ಷ ಅಮರ್​ಗೌಡ, ನಿರ್ದೇಶಕ ಆಕಾಶ್​, ಕೃತಿಕಾ, ಕೀರ್ತನಾ ಇತರರು ಇದ್ದರು.
ದೇವನಹಳ್ಳಿ ಆಕಾಶ್​ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಸ್ಥಾಪಕ ಕೆ.ಮುನಿರಾಜು ಅವರನ್ನು ಸನ್ಮಾನಿಸಲಾಯಿತು. ಆಕಾಶ್​ ಸಮೂಹ ಸಂಸ್ಥೆ ಮುಖ್ಯಸ್ಥೆ ಪುಷ್ಪ ಮುನಿರಾಜು, ಉಪಾಧ್ಯಕ್ಷ ಅಮರ್​ಗೌಡ, ನಿರ್ದೇಶಕ ಆಕಾಶ್​, ಕೃತಿಕಾ, ಕೀರ್ತನಾ ಇತರರು ಇದ್ದರು.
Published on
ದೇವನಹಳ್ಳಿ : ಶಿಕ್ಷಣ ಎಂಬುದು ವ್ಯಾಪಾರವಾಗದೇ, ಜ್ಞಾನಹಂಚುವ ಕೇಂದ್ರವಾಗಬೇಕು. ಜ್ಞಾನ ಹಾಗೂ ಸಂಸ್ಕಾರದ ನೆಲೆಗಟ್ಟಿನಲ್ಲಿ ಉತ್ತಮ ಶಿಕ್ಷಣ ರೂಪಿಸಿಕೊಂಡು ಜೀವನ ಕಟ್ಟಿಕೊಂಡಾಗ ಮಾತ್ರ ಒಳ್ಳೆಯ ಸಮಾಜ ನಿಮಾರ್ಣವಾಗಲು ಸಾಧ್ಯ ಎಂದು ಆಕಾಶ್​ ಸಮೂಹ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಕೆ.ಮುನಿರಾಜು ಹೇಳಿದರು.
ಪಟ್ಟಣದ ಆಕಾಶ್​ ಸಮೂಹ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಆಕಾಶೋತ್ಸವ-&2026 ಮತ್ತು ಸಂಸ್ಥಾಪಕ ಅಧ್ಯಕ್ಷ ಕೆ.ಮುನಿರಾಜು ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕವಾಗಿ ತಮ್ಮನ್ನು ತಾವು ಸಾಂಸತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಾಗ ಒಬ್ಬರಿಗೊಬ್ಬರು ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು. ಇಂದಿನ ಶಿಕ್ಷಣದ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆ ತರಲು ಉತ್ತಮ ಯೋಜನೆ ರೂಪಿಸಬೇಕಾಗಿದೆ. ಮಕ್ಕಳಿಗೆ ಪ್ರಥಮ ಹಂತದಲ್ಲಿ ಪರಿಣಾಮಕಾರಿ ವಿಷಯಗಳ ಬಗ್ಗೆ ಮಾಹಿತಿ ನೀಡಬೇಕು. ಜ್ಞಾನಕ್ಕೆ ಉತ್ತಮ ತಳಪಾಯ ನೀಡಲು ಶಿಕ್ಷಣ ಕೇವಲ ಉದ್ಯೋಗಕ್ಕೆ ಮಾತ್ರ ಕೇಂದ್ರೀಕೃತವಾಗದೆ, ಬದುಕು ಮತ್ತು ಸಮಾಜದ ಏಳಿಗೆಗೆ ನೆರವಾಗಬೇಕು. ಮಕ್ಕಳು ಹಿರಿಯರನ್ನು ಗೌರವಿಸುವುದು ಸಮಾಜದ ಜತೆಗೆ ತಾವೂ ಸ್ವಾವಲಂಬಿಯಾಗಿ ಬದುಕುವುದನ್ನು ಕಲಿಯಬೇಕು ಎಂದು ಹೇಳಿದರು.
ಆಕಾಶ್​ ಮೆಡಿಕಲ್​ ಕಾಲೇಜು ಪ್ರಾಂಶುಪಾಲ ಡಾ.ಶಿವುಪ್ರಸಾದ್​, ಡಾ.ಬ್ರಿಜೇಶ್​, ಸಿಬ್ಬಂದಿ, ಶಾಲಾ ಮತ್ತು ಕಾಲೇಜು ವಿಭಾಗದ ಉಪನ್ಯಾಸಕರು, ಶಿಕ್ಷಕರು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net