ಆನ್‌ಲೈನ್ ಬೆಟ್ಟಿಂಗ್ ಜಾಲದ ವಿರುದ್ಧ ಇ.ಡಿ ಸಮರ

ED
ED
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರು, ಪುಣೆ ಸೇರಿ 800 ಕೋಟಿ ರೂ. ಅಕ್ರಮ ಬೆಳಕಿಗೆ
  • ಬಂಧಿತರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ
ಬೆಂಗಳೂರು: ರಾಜ್ಯ ಸೇರಿ ದೇಶದ ವಿವಿಧ ಕಡೆ ಆನ್‌ಲೈನ್ ಗೇಮ್ ಹೆಸರಿನಲ್ಲಿ ನಡೆದಿರುವ ಬಹುಕೋಟಿ ಹಗರಣದ ಬೆನ್ನು ಬಿದ್ದಿರುವ ಜಾರಿ ನಿದೇರ್ಶನಾಲಯ (ಇ.ಡಿ)ಅಧಿಕಾರಿಗಳು, ಮನಿ ಲಾಂಡರಿಂಗ್ ಸೇರಿ ವಿದೇಶದಲ್ಲಿ ಅಕ್ರಮ ಹೂಡಿಕೆ ಮಾಡಿರುವ ಖಾಸಗಿ ಕಂಪನಿ ವಿರುದ್ಧದ ತನಿಖೆ ಚುರುಕುಗೊಳಿಸಿದ್ದಾರೆ.
ಮುಂಬೈನ ಜಲಗಾಂವ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಆಧರಿಸಿ ಬೆಂಗಳೂರು, ಪುಣೆ ಸೇರಿ ಇತರೆ ಕಡೆಗಳಲ್ಲಿ ತನಿಖೆ ಆರಂಭಿಸಿದ್ದಾರೆ. ‘ಆಲ್ ೆನಲ್ ಎಕ್ಸ್‌ಚೈಂಜ್’ ಎಂಬ ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ವೇದಿಕೆಯ ಮೂಲಕ ವಾಟ್ಸ್‌ಪ್ ಸಂದೇಶ ಕಳುಹಿಸಿ ವ್ಯಕ್ತಿಯೊಬ್ಬರನ್ನು ಹೂಡಿಕೆ ಮಾಡಲು ಪ್ರೇರೇಪಿಸಲಾಗಿತ್ತು. ಆರಂಭದಲ್ಲಿ ಸಣ್ಣ ಮೊತ್ತ ಹಿಂಪಡೆಯಲು ಅವಕಾಶ ನೀಡಿದ್ದ ಕಂಪನಿ, ಗ್ರಾಹಕನ ನಂಬಿಕೆ ಗಳಿಸಿದ ಬಳಿಕ ಹೆಚ್ಚಿನ ಹಣ ಹೂಡಿಕೆ ಮಾಡಲು ಒತ್ತಾಯಿಸಲಾಗಿತ್ತು. ನಂತರ ಹಣ ಹಿಂಪಡೆಯಲು ಯತ್ನಿಸಿದಾಗ ಅವಕಾಶ ನಿರಾಕರಿಸಲಾಗಿದ್ದು, ಆರೋಪಿಗಳು ಸಂಪರ್ಕ ಕಡಿತಗೊಳಿಸಿಕೊಂಡಿದ್ದರು. ಇದರ ಜಾಡು ಹಿಡಿದು ತನಿಖೆ ಆರಂಭಿಸಿದ ಇ.ಡಿ ಅಕ್ರಮವಾಗಿ ಸಂಗ್ರಹಿಸಿದ್ದ ಹಣ ಪುಣೆ ಮೂಲದ ಖಾಸಗಿ ಸಂಸ್ಥೆ ಖಾತೆ ಹಾಗೂ ಕೆಲ ನಕಲಿ ಖಾತೆಗಳಿಗೆ ಹಣ ವರ್ಗಾವಣೆ ಮಾಡಿತ್ತು.
ಈ ಸಂಸ್ಥೆಯ ಖಾತೆಗಳು ದೇಶದ ವಿವಿಧ ಭಾಗಗಳಲ್ಲಿ ದಾಖಲಾಗಿರುವ ಆನ್‌ಲೈನ್ ಗೇಮಿಂಗ್, ಹೂಡಿಕೆ, ಷೇರು ವ್ಯಾಪಾರ, ಕ್ರಿಪ್ಟೋ ಹಾಗೂ ಆನ್‌ಲೈನ್ ಟಾಸ್ಕ್ ಆಧಾರಿತ ವಂಚನೆ ಪ್ರಕರಣಗಳೊಂದಿಗೆ ಸಂಬಂಧ ಹೊಂದಿರುವುದು ಪತ್ತೆಯಾಗಿಸಿದೆ. ಅದರಲ್ಲಿ ಬೆಂಗಳೂರಿನಲ್ಲಿ ವಂಚನೆಯಾಗಿರುವ ಕುರಿತು ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು 5.30 ಕೋಟಿ ರೂ. ವಂಚನೆಯಾಗಿರುವುದನ್ನು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಇ.ಡಿ ತಿಳಿಸಿದೆ.
ತನಿಖೆಯ ಮತ್ತೊಂದು ಭಾಗವಾಗಿ ಕ್ರೆಡಿಟ್ ಸಹಕಾರ ಸಂಘದ ಕೆವೈಸಿ ದಾಖಲೆಗಳು ಹಾಗೂ ನಕಲಿ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು ಕ್ರಿಪ್ಟೋ ವಿನಿಮಯ ವ್ಯವಾರ ನಡೆಸಲು ಖಾತೆ ತೆರೆಯಲಾಗಿತ್ತು. ಆ ಖಾತೆಗಳ ಮೂಲಕ ಅಂದಾಜು 800 ಕೋಟಿ ಹಣ ವರ್ಗಾವಣೆಯಾಗಿದ್ದು, ಅದರಲ್ಲಿನ ಗಣನೀಯ ಮೊತ್ತ ಅಕ್ರಮ ಗೇಮಿಂಗ್ ಮತ್ತು ಬೆಟ್ಟಿಂಗ್ ಮೂಲಕ ಗ್ರಾಹಕರಿಂದ ಸಂದಾಯವಾಗಿದೆ ಎಂದು ಇ.ಡಿ ಅಧಿಕಾರಿಗಳು ಹೇಳಿದ್ದಾರೆ.

ರಮ್ಮಿಕಲ್ಚರ್ ಪ್ರಕರಣ 19,984 ಕೋಟಿ ರೂ.
ಅಕ್ರಮದ ದೋಷಾರೋಪಪಟ್ಟಿ ಸಲ್ಲಿಕೆ

ಆನ್‌ಲೈನ್ ಗೇಮಿಂಗ್‌ನಲ್ಲಿ ರಮ್ಮಿಕಲ್ಚರ್, ಗೇಮ್ಸ್ ಕ್ರಾಪ್ಟ್ ಕಂಪನಿಗಳು 19,984 ಕೋಟಿ ರೂ.ಅಕ್ರಮ ವ್ಯವಹಾರದ ಬಗ್ಗೆ ಸಂಸ್ಥೆಯ ಎಂಟುಕ್ಕೂ ಹೆಚ್ಚು ಜನರ ವಿರುದ್ಧ ದೋಷಾರೂಪ ಪಟ್ಟಿ ಸಲ್ಲಿಸಿವೆ. ಬಂಧಿತ ಕಂಪನಿ ಸಂಸ್ಥಾಪಕರು ಹಾಗೂ ನಿರ್ದೇಶಕರಾದ ವಿಕಾಸ್ ತನೇಜಾ, ಪೃಥ್ವಿರಾಜ್ ಸಿಂಗ್, ದೀಪಕ್ ಸಿಂಗ್ ಪ್ರಮುಖ ಆರೋಪಿತರನ್ನಾಗಿ ಉಲ್ಲೇಖಿಸಲಾಗಿದೆ. ಹೊಸ ಗ್ರಾಹಕರರಿಗೆ ಉಚಿತ ಬೋನಸ್, ಠೇವಣಿ ಬೋನಸ್, ರೆಫರಲ್ ಬಹುಮಾನ ಆಮಿಷವೂಡ್ಡಿ ಅಕ್ರಮ ವ್ಯವಹಾರ ನಡೆಸಲಾಗಿದೆ. 2017-18ರಿಂದ 2025-26ರ ಅವಧಿಯಲ್ಲಿ ಸಾವಿರಾರು ಕೋಟಿ ಅಕ್ರಮ ಎಸಗಿವೆ. ಅಕ್ರಮ ಹಣವನ್ನು ಷೇರು, ಚರ ಹಾಗೂ ಸ್ಥಿರ ಆಸ್ತಿಗಳು, ಕುಟುಂಬಸ್ಥರ ಟ್ರಸ್ಟ್‌ಗಳು ಮತ್ತು ಸಂಬಂಧಿತ ಸಂಸ್ಥೆಗಳ ಮೂಲಕ ಹೂಡಿಕೆ ಮಾಡಿ ಕಾನೂನುಬದ್ಧ ಆದಾಯದಂತೆ ತೋರಿಸಲು ಯತ್ನಿಸಲಾಗಿದೆ ಎಂದು ತನಿಖೆಯಲ್ಲಿ ಪತ್ತೆಯಾಗಿದೆ ಇ.ಡಿ ಅಧಿಕಾರಿಗಳು ಹೇಳಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net