ಕವಿತಾಳ: ಮೀನು ಕೃಷಿಯಿಂದ ನಿರುದ್ಯೋಗ ಸಮಸ್ಯೆ ನಿವಾರಿಸಿಕೊಳ್ಳಬೇಕು ಎಂದು ಮಸ್ಕಿ ತಾಪಂ ಇಒ ಅಮರೇಶ ಯಾದವ ಹೇಳಿದರು.
ಅಮೀನಗಡದಲ್ಲಿ ಮತ್ಸೃ ಸಂಜಿವಿನಿ ಯೋಜನೆಯಡಿ ಡಾ.ಬಿ.ಆರ್. ಅಂಬೇಡ್ಕರ್ ಮಹಿಳಾ ಸಂಘ ನಿರ್ಮಿಸಿಕೊಂಡ ಮತ್ಸ್ಯ ಕೃಷಿ ಕೆರೆಗೆ ಭೇಟಿ ನೀಡಿ ಮಾತನಾಡಿದರು.
ಸಂತೆಕೆಲ್ಲೂರು, ಗುಡದೂರು, ಬಳಗಾನೂರು ಸೇರಿದಂತೆ ಇತರೆಡೆ ಮತ್ಸೃ ಕೃಷಿ ಯೋಜನೆಯಲ್ಲಿ ಮಹಿಳೆಯರು ತೊಡಗಿಸಿಕೊಂಡಿದ್ದಾರೆ.
ಬಹಳಷ್ಟು ಜನ ಕೆಲಸವಿಲ್ಲ ಎಂದು ವಲಸೆ ಹೋಗುತ್ತಾರೆ. ಮಹಿಳೆಯರು, ಯುವಕರು ಮತ್ಸ್ಯ ಕೃಷಿಯಲ್ಲಿ ತೊಡಗಿಸಿಕೊಂಡು ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ಪಡೆದುಕೊಳ್ಳಬೇಕು ಎಂದರು.
ಇದೇ ವೇಳೆ, ಮೀನು ಸಾಕಣೆ ಮತ್ತು ಆರೈಕೆ ಬಗ್ಗೆ ಮಾಹಿತಿ ಪಡೆದುಕೊಂಡರು. ಮೀನು ಸಾಕಣೆದಾರೆ ಲಕ್ಷ್ಮೀ ಮಾತನಾಡಿ, ವರ್ಷದ ಹಿಂದೆ ಮೀನು ಸಾಕಣೆ ಆರಂಭಿಸಿದ್ದೇವೆ. ಏಳು ಸಾವಿರ ಮೀನುಗಳಿವೆ. ಪ್ರತಿ ಮೀನು ಕೆ.ಜಿ.ಗೂ ಹೆಚ್ಚು ತೂಕವಿದೆ. ವ್ಯಾಪಾರಿಗಳು ಒಂದು ಕೆ.ಜಿ.ಗೆ 200 ರೂ. ಕೇಳುತ್ತಿದ್ದಾರೆ ಎಂದರು.