ಸಾಮೂಹಿಕ ವಿವಾಹದಿಂದ ಬಡವರಿಗೆ ಆರ್ಥಿಕ ಬಲ

ಜಮಖಂಡಿ ನಗರದ ಬಸವ ಭವನದಲ್ಲಿ ನಡೆದ ಸರಳ ಸಾಮೂಹಿಕ ವಿವಾಹವನ್ನು ನೇರ್ಲಿಯ ಜ್ಞಾನಜ್ಯೋತಿ ಬಂತೇಜಿ, ಬಾಗಲಕೋಟೆಯ ಧಮ್ಮಪಾಲ ಬಂತೇಜಿ ನೆರವೇರಿಸಿದರು. ಶಾಸಕ ನಾಡೋಜ ಜಗದೀಶ ಗುಡಗುಂಟಿ, ಜಿಪಂ ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ, ಸಂಸ್ಥೆ ಅಧ್ಯಕ್ಷ ಪರಶುರಾಮ ಕಾಂಬಳೆ ಇತರರಿದ್ದರು.
ಜಮಖಂಡಿ ನಗರದ ಬಸವ ಭವನದಲ್ಲಿ ನಡೆದ ಸರಳ ಸಾಮೂಹಿಕ ವಿವಾಹವನ್ನು ನೇರ್ಲಿಯ ಜ್ಞಾನಜ್ಯೋತಿ ಬಂತೇಜಿ, ಬಾಗಲಕೋಟೆಯ ಧಮ್ಮಪಾಲ ಬಂತೇಜಿ ನೆರವೇರಿಸಿದರು. ಶಾಸಕ ನಾಡೋಜ ಜಗದೀಶ ಗುಡಗುಂಟಿ, ಜಿಪಂ ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ, ಸಂಸ್ಥೆ ಅಧ್ಯಕ್ಷ ಪರಶುರಾಮ ಕಾಂಬಳೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಜಗದೀಶ ಗುಡಗುಂಟಿ ಹೇಳಿಕೆ
  • ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ
ಜಮಖಂಡಿ: ದುಂದು ವೆಚ್ಚದ ಮದುವೆಗಳ ನಡುವೆ ಸಾಮೂಹಿಕ ವಿವಾಹಗಳು ಬಡ ಕುಟುಂಬಗಳ ಆರ್ಥಿಕ ಪ್ರಗತಿಗೆ ನೆರವಾಗುತ್ತಿವೆ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.
ನಗರದ ಬಸವ ಭವನದಲ್ಲಿ ಮಂಗಳವಾರ ಬೋಧಿಸತ್ವ ಗೌತಮಬುದ್ಧ ನಗರ ಹಾಗೂ ಗ್ರಾಮೀಣಾಭಿವದ್ಧಿ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳು ಸಮಾಜಮುಖಿ ಕಾರ್ಯವಾಗಿದ್ದು ಬಡವರಿಗೆ ದೊಡ್ಡ ನೆರವಾಗುತ್ತಿವೆ ಎಂದರು.
ಜಿ.ಪಂ. ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ಮಾತನಾಡಿ, ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವುದರಿಂದ ಘನತೆಗೆ ಯಾವುದೇ ಧಕ್ಕೆಯಿಲ್ಲ. ಮದುವೆಗೆ ಖರ್ಚಾಗುವ ಹಣವನ್ನು ದಂಪತಿ ತಮ್ಮ ಭವಿಷ್ಯ ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಸ್ಥೆ ಅಧ್ಯಕ್ಷ ಪರಶುರಾಮ ಕಾಂಬಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿ ವರ್ಷ ಇದೇ ದಿನ ಸಾಮೂಹಿಕ ವಿವಾಹ ಆಯೋಜಿಸುವ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು.
ಮುಖಂಡರಾದ ಏಗಪ್ಪ ಸವದಿ, ಎ.ಪಿ. ಕುಲಕರ್ಣಿ, ರವಿ ಯಡಹಳ್ಳಿ, ಡಾ. ಎ.ಆರ್. ಬೆಳಗಲಿ, ಶಶಿಕಾಂತ ದೊಡ್ಡಮನಿ, ಅಶೋಕ ನಾರಾಯಣಿ ಅವರು ಮಾತನಾಡಿದರು.
ನೇರ್ಲಿಯ ಜ್ಞಾನಜ್ಯೋತಿ ಬಂತೇಜಿ ಹಾಗೂ ಬಾಗಲಕೋಟೆಯ ಧಮ್ಮಪಾಲ ಬಂತೇಜಿ 12 ಜೋಡಿಗಳ ವಿವಾಹ ನೆರವೇರಿಸಿದರು. ಮರೇಗುದ್ದಿಯ ವಿಜಯ ಮಹಾಂತೇಶ್ವರ ಸ್ವಾಮೀಜಿ ಹಾಗೂ ಹಿಪ್ಪರಗಿ ಸಂಗಮೇಶ್ವರ ಮಠದ ಪ್ರಭುಜಿ ಬೆನ್ನಾಳೆ ಮಹಾರಾಜರು ಸಾನ್ನಿಧ್ಯ ವಹಿಸಿದರು. ಬಸವರಾಜ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುತ್ತಣ್ಣ ಹಿಪ್ಪರಗಿ, ಅಲ್ತಾ ಸಗರ, ನಾಗಪ್ಪ ಸನದಿ, ರವಿ ಬಬಲೇಶ್ವರ, ಬಸವರಾಜ ಹಳ್ಳದಮನಿ, ಅಬ್ದುಲ ಜಮಾದಾರ, ಯಾಸೀನ ಲೋದಿ, ರವಿ ಕಾಂಬಳೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net