ಶ್ರೀನಿವಾಸಪುರ: ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಜಿಲ್ಲಾ ಯುಪಿಎಸ್ ಸಾಧಕರಿಗೆ ಸನ್ಮಾನ, ನಿವೃತ್ತ ನೌಕರರಿಗೆ ಬೀಳ್ಕೊಡುಗೆ ಸಮಾರಂಭ ಮಾಡುವುದರ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಿರುವುದು ಜನ ಮೆಚ್ಚುವ ಕೆಲಸವಾಗಿದೆ ಎಂದು ಜಿಲ್ಲಾ ನೌಕರ ಸಂಘದ ಅಧ್ಯಕ್ಷ ಎ.ಅಜಯ್ ಕುಮಾರ್ ಹೇಳಿದರು.life
ಪಟ್ಟಣದ ನೌಕರರ ಭವನದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಶಾಲಾ&ಕಾಲೇಜುಗಳಲ್ಲಿ ಉತ್ತಮ ಅಂಕ ಗಳಿಸುವುದುಕ್ಕಿಂತಲೂ ಬದುಕಿನಲ್ಲಿ ಉತ್ತಮ ಅಂಕ ಗಳಿಸುವುದು ಮುಖ್ಯ. ನಿತ್ಯ ಜೀವನದಲ್ಲಿ ಕಲಿಯುವುದಕ್ಕೆ ರ್ನಿದಿಷ್ಟ ಪಠ್ಯಕ್ರಮವಿಲ್ಲ. ಪಾಠ ಹೇಳಿ ಕೊಡುವವರೂ ಇಲ್ಲ. ಶಾಲೆಯಲ್ಲಿ ಇಡೀ ವರ್ಷ ಓದಿದ್ದನ್ನು ಒಬ್ಬರೇ ಮೌಲ್ಯಮಾಪನ ಮಾಡಿ ಅಂಕ ಕೊಡುತ್ತಾರೆ. ಆದರೆ ಬದುಕಿನಲ್ಲಿ ನೂರಾರು ಜನ ಮೌಲ್ಯಮಾಪಕರನ್ನು ಎದುರಿಸಬೇಕಾಗುತ್ತದೆ. ಅವರ ಹತ್ತಿರ ಅಂಕ ಗಳಿಸುವುದು ಸುಲಭವಲ್ಲ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇಒ ಡಾ.ಕೆ.ಸರ್ವೇಶ್ ಮಾತನಾಡಿ, ಶ್ರೀನಿವಾಸಪುರ ತಾಲೂಕು ನೌಕರರ ಸಂಘ ಜಿಲ್ಲೆಯಲ್ಲಿ ಕ್ರಿಯಾಶೀಲವಾಗಿ ನೌಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಅಧ್ಯಕ್ಷರು ನೌಕರರ ಹಿತ ಕಾಪಾಡಲು ಶ್ರಮಿಸುತ್ತಿದ್ದಾರೆ.
ಮಕ್ಕಳ ಕಲಿಕೆಗೆ ಅನುಕೂಲವಾಗಲು ಈಗಾಗಲೇ ಶಾಲೆಗಳಲ್ಲಿ ಸ್ಮಾರ್ಟ್ಕ್ಲಾಸ್ ವ್ಯವಸ್ಥೆ ಮಾಡಲಾಗಿದೆ. ಉಳಿದ ಶಾಲೆಗಳಿಗೂ ಅನುಕೂಲ ಮಾಡಿಕೊಳ್ಳಲಾಗುವುದು ಎಂದರು
ನೌಕರ ಸಂಘದ ತಾಲೂಕು ಅಧ್ಯಕ್ಷ ಬೈರೇಗೌಡ ಮಾತನಾಡಿ, ಯುಪಿಎಸ್ಸಿ ಪರೀಕ್ಷೆಯಲ್ಲಿ ಅನುಪಮಾ ರೆಡ್ಡಿ, ಕೀರ್ತಿ ಸಾಧನೆ ಮಾಡಿ ಜಿಲ್ಲೆಗೆ ಹೆಸರುಗಳಿಸಿದ್ದಾರೆ. ಇಂದಿನ ವಿದ್ಯಾರ್ಥಿಗಳಿಗೆ ಅವರು ಸ್ಫೂರ್ತಿಯಾಗಿದ್ದಾರೆ ಎಂದರು