ವಿತರಣಾ ವ್ಯವಸ್ಥೆಯ ಲೋಪ: ಬೆಳಗ್ಗೆ 9 ಗಂಟೆಗೆ ಕಚೇರಿ ತೆರೆದ ನಂತರ ಸಾಲಿನಲ್ಲಿ ನಿಂತು ಹಣ ಪಾವತಿಸಿ ರಸೀದಿ ಪಡೆಯಬೇಕು. ಬಳಿಕ ಲಾರಿಯಿಂದ ಸಿಲಿಂಡರ್ ಪಡೆಯಲು ಮತ್ತೆ ಕಾಯಬೇಕು. ಒಂದು ವೇಳೆ ಸ್ಟಾಕ್ ಮುಗಿದರೆ ಆ ದಿನದ ಕಾಯುವಿಕೆ ವ್ಯರ್ಥವಾಗುತ್ತದೆ. ಇದರಿಂದ ದಿನಗೂಲಿ ಕಾರ್ಮಿಕರು, ಉದ್ಯೋಗಸ್ಥರು, ಮಹಿಳೆಯರು ಹಾಗೂ ವಯೋವೃದ್ಧರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.