ರಾಜ್ಯದ ವಿವಿಧೆಡೆ ಮಾರಾಟ : ದೇಶದಲ್ಲಿ ಇ&ಸಿಗರೇಟ್ ಮಾರಾಟ ಮತ್ತು ಸಾಗಣೆ ನಿಷೇಧಿಸಲಾಗಿದೆ. ಹೀಗಾಗಿ ದುಬೈನಿಂದ ರಹಸ್ಯವಾಗಿ ತರಿಸಲಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇರುವುದರಿಂದ ಅಕ್ರಮ ಸಾಗಣೆ ಜೋರಾಗಿದೆ ಎನ್ನಲಾಗಿದ್ದು, ಈ ಗ್ಯಾಂಗ್ ದುಬೈನಿಂದ ಆಮದು ಮಾಡಿಕೊಂಡು, ಮಂಗಳೂರು, ಮೈಸೂರು, ಬೆಂಗಳೂರು ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಮಾರಾಟ ಮಾಡುವ ಯೋಜನೆ ಹೊಂದಿತ್ತು ಎಂದು ತಿಳಿದುಬಂದಿದೆ.