ಚಿಂತಾಮಣಿ: ಪಿ.ಮುರಳೀಧರ್ ಅವರನ್ನು 2023 ಅಕ್ಟೋಬರ್ 4ರಂದು ಸರ್ಕಾರ ಚಿಂತಾಮಣಿ ಉಪವಿಭಾಗದ ಡಿವೈಎಸ್ಪಿಯಾಗಿ ನೇಮಕ ಮಾಡಿತ್ತು.
ಪ್ರಸ್ತುತ ಅವರನ್ನು ವಿಜಯನಗರ ಜಿಲ್ಲೆ ಹೊಸಪೇಟೆ ಉಪ ವಿಭಾಗಕ್ಕೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರದ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರು ಪರವಾಗಿ ಸೌಮೇಂದು ಮುಖರ್ಜಿ ಭಾನುವಾರ ಆದೇಶ ಹೊರಡಿಸಿದ್ದಾರೆ.
2 ವರ್ಷಕ್ಕೊಮ್ಮೆ ಡಿವೈಎಸ್ಪಿಗಳು ವರ್ಗಾವಣೆಗೊಳ್ಳುತ್ತಿದ್ದು ಚಿಂತಾಮಣಿ ಉಪವಿಭಾಗದ ಡಿವೈಎಸ್ಪಿ ಪಿ.ಮುರಳೀಧರ್ ಮಾತ್ರ 2023 ಅಕ್ಟೋಬರ್ 4ರಂದು ಇಲ್ಲಿ ಅಧಿಕಾರ ವಹಿಸಿಕೊಂಡ ನಂತರ ಹೆಚ್ಚುವರಿಯಾಗಿ 6 ತಿಂಗಳು ಸೇವೆ ಸಲ್ಲಿಸಿರುವುದು ವಿಶೇಷ.