ಸಾರ್ವಜನಿಕರಿಂದ ಸನ್ಮಾನ ಸ್ವೀಕರಿಸಿದ ಡಿವೈಎಸ್ಪಿ ಮಲ್ಲಪ್ಪ ನಂದಗಾವಿ ಮಾತನಾಡಿ, ಯಾವುದೇ ಸರ್ಕಾರಿ ಅಧಿಕಾರಿಗೆ ನಾನು ಎನ್ನುವ ಅಹಂ ಇರಬಾರದು. ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದಿಂದ ಬೆರೆತಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ಈಡೀ ದೇಶದಲ್ಲಿ ತೀವ್ರ ಚರ್ಚೆಗೆ ಗ್ರಾಸವಾದ ಮನಗೂಳಿ ಬ್ಯಾಂಕ್ ಕಳ್ಳತನ, ಮುದ್ದೇಬಿಹಾಳದಲ್ಲಿ ನ್ಯಾಯಾಧೀಶರ ಮನೆ ಕಳ್ಳತನದಂತಹ ದೊಡ್ಡ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಲು ಇಲ್ಲಿನ ಜನರ ಸಹಕಾರ ಬೆಂಬಲವೇ ಕಾರಣ ಎಂದರು.