ಶೇರಾ ಗುಜ್ಜಾರ್ ಗೆ ಡಾ.ಪ್ರಭಾಕರ ಕೋರೆ ಕೇಸರಿ ಪ್ರಶಸ್ತಿ

ಗಮನ ಸೆಳೆದ ಕುಸ್ತಿ ಪಂದ್ಯಾವಳಿ
ಗಮನ ಸೆಳೆದ ಕುಸ್ತಿ ಪಂದ್ಯಾವಳಿ
Published on

ಪ್ರಮುಖ ಮುಖ್ಯಾಂಶಗಳು

  • ಶೇರಾ ಗುಜ್ಜಾರ್ ಗೆ ಒಲಿದ ಡಾ.ಕೋರೆ ಕೇಸರಿ ಪ್ರಶಸ್ತಿ
  • ಡಾ‌.ಪ್ರಭಾಕರ ಕೋರೆ ಹುಟ್ಟು ಹಬ್ಬದ ನಿಮಿತ್ತ ಆಯೋಜಿಸಿದ್ದ ಸ್ಪರ್ಧೆ
  • ಚಿಕ್ಕೋಡಿ ತಾಲೂಕಿನ ಅಂಕಲಿಯಲ್ಲಿ ಜರುಗಿದ ಸ್ಪರ್ಧೆ
ಶೇರಾ ಗುಜ್ಜರ್‌ಗೆ ‘ಡಾ. ಪ್ರಭಾಕರ ಕೋರೆ ಕೇಸರಿ’ ಪ್ರಶಸ್ತಿ
ವಿಜಯವಾಣಿ ಸುದ್ದಿಜಾಲ ಮಾಂಜರಿ :
ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರ 79ನೇ ಜನ್ಮದಿನದ ಅಂಗವಾಗಿ ಅಂಕಲಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಪುರುಷರ ಜಂಗಿ ನಿಕಾಲಿ ಕುಸ್ತಿ ಸ್ಪರ್ಧೆಯಲ್ಲಿ ಪಂಜಾಬ್‌ನ 180 ಕೆ.ಜಿ. ತೂಕದ ಬಲಿಷ್ಠ ಪೈಲ್ವಾನ್ ಶೇರಾ ಗುಜ್ಜರ್ ಅವರು ಏಷ್ಯನ್ ಪದಕ ವಿಜೇತ 147 ಕೆ.ಜಿ. ತೂಕದ ಪುಷ್ಪೇಂದ್ರ ಮಲಿಕ್ ಅವರನ್ನು ಕ್ಷಣಾರ್ಧದಲ್ಲಿ ‘ಉಲ್ಟಿ ಫುಟಿ’ ದಾಳಿಯಿಂದ ಮಣ್ಣುಮುಕ್ಕಿಸಿ ಪ್ರತಿಷ್ಠಿತ ‘ಡಾ. ಪ್ರಭಾಕರ ಕೋರೆ ಕೇಸರಿ’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಈ ರೋಚಕ ಅಂತಿಮ ಕುಸ್ತಿಯು ಸಾವಿರಾರು ಕುಸ್ತಿ ಅಭಿಮಾನಿಗಳನ್ನು ರಂಜಿಸಿತು.
ಸುಮಾರು ಅರ್ಧ ಗಂಟೆ ನಡೆದ ಅಂತಿಮ ಹಣಾಹಣಿಯಲ್ಲಿ ಇಬ್ಬರೂ ಪೈಲ್ವಾನರು ಆರಂಭದಿಂದಲೇ ಆಕ್ರಮಣಕಾರಿ ಪ್ರದರ್ಶನ ನೀಡಿದರು. ಪ್ರತಿದಾಳಿ–ಪ್ರತಿಪ್ರಹಾರಗಳಿಂದ ಕಣ ರಂಗೇರಿದ ವೇಳೆ ಶೇರಾ ಗುಜ್ಜರ್ ಅವರು ಕ್ಷಣಾರ್ಧದಲ್ಲಿ ‘ಉಲ್ಟಿ ಫುಟಿ’ ದಾಳಿಯನ್ನು ಪ್ರಯೋಗಿಸಿ ಪುಷ್ಪೇಂದ್ರ ಮಲಿಕ್ ಅವರನ್ನು ನೆಲಕ್ಕುರುಳಿಸಿ ಪ್ರಶಸ್ತಿಗೆ ಮುತ್ತಿಕ್ಕಿದರು.
ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ, ಉಪಾಧ್ಯಕ್ಷ ತಾತ್ಯಾಸಾಹೇಬ ಕಾಟೆ, ನಿರ್ದೇಶಕರಾದ ಭರತೇಶ್ ಬನವಣೆ, ಮಹಾವೀರ ಕಾತ್ರಾಳೆ, ಮಹಾವೀರ ಮಿರಜೆ, ಅಜಿತರಾವ್ ದೇಸಾಯಿ, ನಂದಕುಮಾರ್ ನಾಶಿಪುಡಿ, ಡಾ. ಪ್ರಭಾಕರ ಕೋರೆ ಕೋ-ಆಪ್ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ಮಹಾಂತೇಶ ಪಾಟೀಲ್, ಉಪಾಧ್ಯಕ್ಷ ಶಿದಗೌಡ ಮಗದೂಮ್, ನಿರ್ದೇಶಕರಾದ ಪಿಂಟು ಹಿರೇಕುರಬರ, ಅಣ್ಣಾಸಾಹೇಬ ಸಂಕೇಶ್ವರಿ, ಅನಿಲ್ ಪಾಟೀಲ್, ಅಶೋಕ್ ಚೌಗುಲೆ, ಪ್ರಫುಲ್ ಶೆಟ್ಟಿ, ಅಮಿತ್ ಜಾಧವ್ ಸೇರಿದಂತೆ ಜನ್ಮದಿನೋತ್ಸವ ಸಮಿತಿಯ ಪದಾಧಿಕಾರಿಗಳು ಇದ್ದರು.
ಹಿರಿಯ ಪೈಲ್ವಾನ್ ಹಾಗೂ ಕರ್ನಾಟಕ ಕೇಸರಿ ವಿಜೇತ ರತ್ನಕುಮಾರ ಮಠಪತಿ ನಿರೂಪಿಸಿದರು. ಸಂಜಯ್ ಕುಡಚೆ, ತಾತ್ಯಾಸಾಹೇಬ ಅಂಬಿ, ಸಚಿನ್ ಪೂಜಾರಿ, ಸಂತೋಷ್ ಚಿಂಚಲೆ, ಸುದರ್ಶನ ಪೂಜಾರಿ, ಸಿದ್ರಾಮ್ ಅಪರಾಜ್, ಬಾಬಾಸಾಹೇಬ ನಿಗನೂರೆ, ಸಂಗಪ್ಪ ಮಟಗಾರ್, ಹನುಮಂತ ಮಿರಜೆ, ರಾಜು ಕೋರವೆ, ಶೌಕತ್ ಕಲಾವಂತ, ಬಸವರಾಜ್ ಘೋಡಗೇರಿ, ಗಿರೀಶ್ ಪಾಟೀಲ್, ರಾಜು ಪಾಟೀಲ್, ಸದಾಶಿವ್ ಸಾತಣವಾರ್, ಅಪ್ಪಾಸಾಹೇಬ ಅಂಗಿ, ನರಸಿಂಗ್ ಮಿಂಚೆ, ಮಲ್ಲಪ್ಪ ಬೆಳಂಕಿ ಹಾಗೂ ಹೂವಣ್ಣ ಪಾಟೀಲ ನಿರ್ಣಾಯಕರಾಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net