ಟ್ಯಾಂಕರ್​ ಮೂಲಕ ಕುಡಿಯುವ ನೀರು ಪೂರೈಕೆ

ಔರಾದ್​ ತಾಲೂಕಿನ ಮಹಾರಾಜವಾಡಿಗೆ ತಾಪಂ ಇಒ ಭೇಟಿ ನೀಡಿ ನೀರಿನ ಸಮಸ್ಯೆ ಪರಿಶೀಲಿಸಿದರು.ಎಇಇ ಮಾರುತಿ ರಾಠೋಡ, ತಾಪಂ ಎಡಿ ಶಿವಕುಮಾರ ಘಾಟೆ, ಟಿಸಿ ಆನಂದ ಕಾಳಗಾಪುರೆ, ಅಂಬಾದಾಸ ಪಾಟೀಲ್​ ಇತರರಿದ್ದರು.
ಔರಾದ್​ ತಾಲೂಕಿನ ಮಹಾರಾಜವಾಡಿಗೆ ತಾಪಂ ಇಒ ಭೇಟಿ ನೀಡಿ ನೀರಿನ ಸಮಸ್ಯೆ ಪರಿಶೀಲಿಸಿದರು.ಎಇಇ ಮಾರುತಿ ರಾಠೋಡ, ತಾಪಂ ಎಡಿ ಶಿವಕುಮಾರ ಘಾಟೆ, ಟಿಸಿ ಆನಂದ ಕಾಳಗಾಪುರೆ, ಅಂಬಾದಾಸ ಪಾಟೀಲ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಪಂ ಇಒ ಕಿರಣಕುಮಾರ ಪಾಟೀಲ್​ ಭರವಸೆ
  • ಮಹಾರಾಜ ವಾಡಿಯಲ್ಲಿ ಸಮಸ್ಯೆ ಪರಿಶೀಲನೆ
ಔರಾದ್​: ತಾಲೂಕಿನ ಜಂಬಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಾರಾಜ ವಾಡಿಯಲ್ಲಿ 15ದಿನಗಳಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ತಾತ್ಕಾಲಿಕ ನೆರವಾಗುವ ಉದ್ದೇಶದಿಂದ ಟ್ಯಾಂಕರ್​ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಕಿರಣಕುಮಾರ ಪಾಟೀಲ್​ ಹೇಳಿದರು.
ಶನಿವಾರ ಗ್ರಾಮಕ್ಕೆ ನೀಡಿ ನೀರಿನ ಸಮಸ್ಯೆ ಪರಿಶೀಲಿಸಿ ಮಾತನಾಡಿದ ಅವರು, ಗ್ರಾಮದಲ್ಲಿನ ನೀರಿನ ಮೂಲಗಳು ಬತ್ತಿ ಹೋಗಿ ಸಮಸ್ಯೆ ಎದುರಾಗಿದೆ. ತಣ ಹೊಸ ಬೋರ್​ವೆಲ್​ ಕೊರೆಸಿ ಕೊಡಲಾಗುವುದು ಎಂದು ಭರವಸೆ ನೀಡಿದರು.
ನೀರಿನ ಸಮಸ್ಯೆಮಾಹಿತಿ ಅರಿತು ಮಹಾರಾಜ ವಾಡಿ ಗ್ರಾಮಕ್ಕೆ ಪಿಡಿಒ ಭೇಟಿ ನೀಡಿದಾಗ, ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು, ನೀರಿನ ಸಮಸ್ಯೆ ಹೋಗಲಾಡಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಎಇಇ ಮಾರುತಿ ರಾಠೋಡ್​, ತಾಪಂ ಟಿಸಿ ಆನಂದ ಕಾಳಗಾಪುರೆ ಹಾಗೂ ಐಇಸಿ ಸಂಯೋಜಕ ಅಂಬಾದಾಸ ಪಾಟೀಲ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net