ದೊಡ್ಡಬಳ್ಳಾಪುರ ಜಾಲಗೆರೆ ಡೇರಿಯಲ್ಲಿ ಬಮುಲ್ನಿಂದ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಟಕವನ್ನು ಶಾಸಕ ಧೀರಜ್ ಮುನಿರಾಜು ಉದ್ಘಾಟಿಸಿದರು. ಬಮುಲ್ ನಿರ್ದೇಶಕ ಬಿ.ಸಿ.ಆನಂದ್, ಡೇರಿ ಅಧ್ಯಕ್ಷ ರುರಾಂ, ಉಪಾಧ್ಯಕ್ಷ ಮುನಿವೆಂಕಟನಾಯ್ಡು, ಗ್ರಾಮಸ್ಥರು ಉಪಸ್ಥಿತರಿದ್ದರು.
ದೊಡ್ಡಬಳ್ಳಾಪುರ : ಕುಡಿಯುವ ನೀರು ಶುದ್ಧವಾಗಿರದಿದ್ದರೆ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಕುಡಿಯುವ ನೀರು ಶುದ್ಧವಾಗಿದ್ದರೆ ಎಷ್ಟೋ ಕಾಯಿಲೆಗಳನ್ನು ದೂರ ಮಾಡಬಹುದು ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದರು.
ತಾಲೂಕಿನ ಜಾಲಗೆರೆ ಡೇರಿ ಆವರಣದಲ್ಲಿ ಬಮುಲ್ನಿಂದ ನಿರ್ಮಾಣಗೊಂಡ ಶುದ್ಧ ಕುಡಿಯುವ ನೀರಿನ ಟಕವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಗ್ರಾಮದಲ್ಲಿ ಹಾಲು ಉತ್ಪಾದಕರ ಶ್ರಮದಿಂದ ಹಾಲಿನ ಡೇರಿ ಅಭಿವೃದ್ಧಿಯತ್ತ ಸಾಗುತ್ತಿದ್ದು, ಶುದ್ಧ ಕುಡಿಯುವ ನೀರಿನ ಟಕವಾಗಿದೆ. ರೈತರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹೈನುಗಾರಿಕೆ ಮಾಡಬೇಕು. ಸರ್ಕಾರದ ಜತೆಗೆ ಬಮುಲ್ನಿಂದ ರೈತರಿಗೆ ಉತ್ತೇಜನವಾಗಿ ಒಳ್ಳೆಯ ಬೆಲೆ ಸಿಗುತ್ತಿದೆ ಎಂದರು.
ಬಮುಲ್ ನಿರ್ದೇಶಕ ಬಿಸಿ ಆನಂದ್ ಕುಮಾರ್ ಮಾತನಾಡಿ, ಹೈನುಗಾರಿಕೆಯ ಈ ಭಾಗದ ರೈತರ ಆರ್ಥಿಕ ಶಕ್ತಿಯಾಗಿದೆ. ಕೋವಿಡ್ನಂತ ಸಂದರ್ಭದಲ್ಲಿಯು ಹೈನುಗಾರಿಕೆ ರೈತರ ಕೈ ಹಿಡಿದಿದೆ, ಶ್ರೀದಲ್ಲಿಯೇ ರೈತರಿಗೆ ಸಿಹಿ ಸುದ್ದಿ ಸಿಗುವ ಭರವಸೆ ಎಂದು ತಿಳಿಸಿದರು.