ಬೋರ್​ವೆಲ್​ ಕೊರೆಸು ನೀರು ಪೂರೈಸಿ / NELAMANGAL

ನೆಲಮಂಗಲ ಇಂದಿರಾನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎನ್​.ಶ್ರೀನಿವಾಸ್​ ಭೂಮಿಪೂಜೆ ನೆರವೇರಿಸಿದರು. ನಗರಸಭೆ ಅಧ್ಯಕ್ಷ ಎನ್​.ಗಣೇಶ್​, ಉಪಾಧ್ಯಕ್ಷ ಆನಂದ್​, ಪೌರಾಯುಕ್ತ ಗಂಗಾಧರ್​, ಟೌನ್​ ಕೋ ಆಪರೇಟಿವ್​ ಬ್ಯಾಂಕ್​ ಮಾಜಿ ಅಧ್ಯಕ್ಷ ಜಯದೇವಯ್ಯ, ಇತರರು ಇದ್ದರು.

Published on

ನೆಲಮಂಗಲ :

ಇಂದಿರಾನಗರದಲ್ಲಿ ಬೋರ್​ವೆಲ್​ ಕೊರೆಸಿ ನೀರು ಪೂರೈಸಿ ಎಂದು ಶಾಸಕ ಎನ್​.ಶ್ರೀನಿವಾಸ್​ ಅಧಿಕಾರಿಗಳಿಗೆ ಸೂಚಿಸಿದರು.

ನಗರಸಭೆ ವಿಶೇಷ ಯೋಜನೆಯಡಿ ಇಂದಿರಾನಗರ ಬಡಾವಣೆಯ ಕಾಂಕ್ರೀಟ್​ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವ ವೇಳೆ ಬಡಾವಣೆ ನಿವಾಸಿಗಳ ಮನವಿಗೆ ಸ್ಪಂದಿಸಿ ಶಾಸಕರು, ಕೊಳವೆಬಾವಿ ಕೊರೆಸಿ ನೀರಿನ ಸಮಸ್ಯೆ ಬಗೆಹರಿಸಿ ಎಂದು ಪೌರಾಯುಕ್ತರಿಗೆ ನಿರ್ದೇಶನ ನೀಡಿದರು.

ನಗರಕ್ಕೆ ಕಾವೇರಿ ನೀರು ಬಾರದ ಹೊರತು ನೀರಿನ ಸಮಸ್ಯೆ ತಗ್ಗುವುದಿಲ್ಲ. ಆದ್ದರಿಂದ ಇದೇ ವರ್ಷದಲ್ಲಿ ಕಾಮಗಾರಿಗೆ ಚಾಲನೆ ನೀಡಿ ಪೂರ್ಣಗೊಳಿಸಲಾಗುವುದು ಎಂದರು.

ನಗರಸಭೆ ನಿಟಕಪೂರ್ವ ಅಧ್ಯೆ ಪೂರ್ಣಿಮಾ ಸುಗ್ಗರಾಜು, ಸದಸ್ಯ ಸಿ.ಪ್ರದಿಪ್​, ಪದ್ಮನಾಭ, ಲೋಲಾ ಗಂಗಾಧರ್​, ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ನಾಗರಾಜು, ಮಾಜಿ ಅಧ್ಯಕ್ಷ ಎಂ.ನಾರಾಯಣ್​ಗೌಡ, ಟಿಎಪಿಸಿಎಂಎಸ್​ ಅಧ್ಯಕ್ಷ ಹನುಮಂತರಾಜು, ಮುಖಂಡ ಕೆ.ಕೃಷ್ಣಪ್ಪ, ಶಿವಕುಮಾರ್​, ಮುನಿಯಪ್ಪ, ರಮೇಶ್​, ರವಿಕುಮಾರ್​, ಮನುಕುಮಾರ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net