ಬೆಂಗಳೂರಿನಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಒಣಗಿದ ಕೊಂಬೆಗಳು

ಅಪಾಯಕ್ಕೆ ಆಹ್ವಾನಕ್ಕೆ ರಸ್ತೆಬದಿಯಲ್ಲಿ ಒಣಗಿ ನಿಂತಿರುವ ಮರದ ಕೊಂಬೆಗಳು.
ಅಪಾಯಕ್ಕೆ ಆಹ್ವಾನಕ್ಕೆ ರಸ್ತೆಬದಿಯಲ್ಲಿ ಒಣಗಿ ನಿಂತಿರುವ ಮರದ ಕೊಂಬೆಗಳು.
Published on

ಪ್ರಮುಖ ಮುಖ್ಯಾಂಶಗಳು

  • ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಮರದ ಒಣಗಿದ ಕೊಂಬೆಗಳು
  • ತೆರವುಗೊಳಿಸಬೇಕಾದ ಜಿಬಿಎ ಅರಣ್ಯ ಘಟಕದ ನಿರ್ಲಕ್ಷ್ಯ
  • ಶಾಲಾಮಕ್ಕಳು, ಸಾರ್ವಜನಿಕರ ಜೀವದ ಜೊತೆ ಆಟ..?

ಪ್ರಶಾಂತರಿಪ್ಪನ್​ಪೇಟೆ,ಬೆಂಗಳೂರು :ನಗರದ ಬಹುತೇಕರಸ್ತೆಬದಿಗಳಲ್ಲಿರುವ ಬೃಹತ್ಮರಗಳ ಒಣಗಿದ ಕೊಂಬೆಗಳು ಮುರಿದುಬೀಳುವ ಅಪಾಯದಲ್ಲಿದ್ದು,ರಸ್ತೆ ಮೇಲೆಸಂಚರಿಸುವ ವಾಹನ ಸವಾರರು ಹಾಗೂಪಾದಾಚಾರಿಗಳಲ್ಲಿ ಆತಂಕ ಸೃಷ್ಟಿಸಿದೆ.ಈ ಬಗ್ಗೆ ಜಿಬಿಎಅರಣ್ಯ ಘಟಕ ಎಚ್ಚೆತ್ತುಕೊಳ್ಳದಿರುವಬಗ್ಗೆ ಸಾರ್ವಜನಿಕರು ಅಸಮಾಧಾನಹೊರಹಾಕಿದ್ದಾರೆ.

ಗಾಳಿ,ಮಳೆಗೆ ಮರಗಳುರಸ್ತೆಗುರುಳುವುದು ಆಕಸ್ಮಿಕ.ಆದರೆ ಒಣಗಿದರೆಂಬೆ-ಕೊಂಬೆಗಳುಮುರಿದು ಬೀಳುವುದು ನಿರೀಕ್ಷಿತ.ಅಷ್ಟಾಗಿಯೂಅಂತಹ ಒಣಗಿದ ಕೊಂಬೆಗಳನ್ನುಗುರುತಿಸಿ ತೆರವುಗೊಳಿಸಬೇಕಾದಜಿಬಿಎ ಅರಣ್ಯ ಘಟಕದ ಸಿಬ್ಬಂದಿಗಳುಮಾತ್ರ ಸರಿಯಾಗಿ ನಿಭಾಯಿಸಿದಂತೆಕಾಣುತ್ತಿಲ್ಲ.

ರಸ್ತೆಯಇಕ್ಕೆಲಗಳಲ್ಲಿ ತಲೆ ಎತ್ತಿನಿಂತಿರುವ ಬೃಹತ್ ಮರಗಳು ನಗರದಪರಿಸರ ಸಮತೋಲನ ಕಾಪಾಡುವಲ್ಲಿಮಹತ್ವದ ಪಾತ್ರ ವಹಿಸುತ್ತಿವೆ.ಬಿಸಿಲಿನ ಝಳಕ್ಕೆನೆರಳು ನೀಡುವ ಮರಗಳು ವಾಯುಮಾಲಿನ್ಯತಗ್ಗಿಸುತ್ತವೆ.ಪಕ್ಷಿಗಳಿಗೆಆಶ್ರಯ ನೀಡುತ್ತವೆ.ಹೀಗಾಗಿ ಮರಗಳುಭವಿಷ್ಯದ ದೃಷ್ಟಿಯಿಂದ ಅವಶ್ಯಕ.ಆದರೆ ಅಪಾಯದಮುನ್ಸೂಚನೆ ನೀಡುತ್ತಿರುವ ಮರದಒಣಗಿದ ಕೊಂಬೆಗಳ ಬಗ್ಗೆ ಮುನ್ನೆಚ್ಚರಿಕೆತೆಗೆದುಕೊಳ್ಳದಿದ್ದರೆ ಅಪಾಯಖಚಿತ. ಕೆಲವುಕಡೆ ದೊಡ್ಡ ಕೊಂಬೆಗಳು ರಸ್ತೆಮತ್ತು ಪಾದಚಾರಿ ಮಾರ್ಗದ ಮೇಲೆಯೇಚಾಚಿಕೊಂಡಿವೆ.ಸಿಸಿ ರಸ್ತೆಕಾಮಗಾರಿ ನಡೆಯುತ್ತಿರುವರಸ್ತೆಗಳಲ್ಲಿ ನೆಲವನ್ನು ಅಗೆದುಸಮತಟ್ಟಾಗಿಸುವ ಹಿನ್ನೆಲೆಯಲ್ಲಿಕೆಲವು ಮರಗಳ ಬುಡ ಕೂಡಾ ದುರ್ಬಲವಾಗಿವೆ.ಬುಡ ಗಟ್ಟಿಇಲ್ಲದಿದ್ದರೆ ಸಣ್ಣ ಗಾಳಿ ಮಳೆಯಕಾರಣಕ್ಕೂ ಧರೆಗುರುಳುವ ಆತಂಕವಿದೆ.

ವಿದೇಶಿತಳಿಯ ಮರಗಳಿಂದ ಹೆಚ್ಚು ಅಪಾಯ

ನಗರದರಸ್ತೆ ಬದಿಯಲ್ಲಿರುವ 60-70ವರ್ಷ ಹಿಂದಿನಬೃಹತ್ ಮರಗಳಲ್ಲಿ ವಿದೇಶಿ ತಳಿಯಮರಗಳು ಹೆಚ್ಚಾಗಿವೆ.ಇವು ಅಷ್ಟೊಂದುಗಟ್ಟಿಯಾಗಿರುವುದಿಲ್ಲ. ಕಳೆದ ವರ್ಷದಗಾಳಿ-ಮಳೆಯಲ್ಲಿಕೆಲವು ಕೊಂಬೆಗಳು ಮುರಿದಿರುತ್ತವೆ.ಆದರೆ ಅವು ಸಂಪೂರ್ಣಬಿದ್ದು ಹೋಗಿರುವುದಿಲ್ಲ.ಅವುಗಳು ಈ ವರ್ಷಪೂರ್ಣ ಒಣಗಿ ಮಳೆ ಹೆಚ್ಚಾಗುತ್ತಿದ್ದಂತೆಕೊಂಬೆಯೊಳಗೆ ನೀರು ಸೇರಿ ಮುರಿದುಬೀಳುತ್ತವೆ.

ವಿಶೇಷವಾಗಿವಿವಿಧ ಬಣ್ಣದ ಹೂವುಗಳನ್ನು ಬಿಡುವಗುಲ್ಮೋಹರ್,ಟ್ಯುಬುಬಿಯಾ,ಆಪ್ರಿಕನ್ಟುಲಿಪ್, ಜಾಕರಂಡಾ,ರೈನ್‌ಟ್ರೀ(ದೇವದಾರು)ಮರಗಳು ಬಹಳಮೃದುವಾಗಿರುವುದರಿಂದ ಮುರಿದುಬೀಳುವ ಅಪಾಯ ಹೆಚ್ಚಾಗಿದೆ.ಸ್ಥಳೀಯ ಪ್ರಭೇದದಮಹಾಗನಿ, ಹೊಂಗೆ,ಹೆಬ್ಬೇವುಮತ್ತಿತರ ಮರಗಳು ಕೂಡ ಸಾಕಷ್ಟುಕಡೆಗಳಲ್ಲಿದ್ದು,ವಿದೇಶಿ ತಳಿಗೆಹೋಲಿಸಿದರೆ ಇವುಗಳಿಂದ ಅಪಾಯದಪ್ರಮಾಣ ಕಡಿಮೆ.ಸಾರ್ವಜನಿಕರುಒಣಗಿದ ಮರಗಳ ಬಳಿ ಓಡಾಡುವಾಗ ಎಚ್ಚರವಹಿಸಬೇಕು. ಇಂತಹಮರದ ಕೆಳಗೆ ವಾಹನಗಳನ್ನುನಿಲ್ಲಿಸಬಾರದು.

ಆತಂಕದಲ್ಲಿಓಡಾಡುವ ಶಾಲಾ ಮಕ್ಕಳು

ಚಾಮರಾಜಪೇಟೆ,ಶಂಕರಪುರಂ,ಮಾರ್ಗೋಸಾ ರಸ್ತೆ,ನ್ಯೂ ಬಿಇಎಲ್ರಸ್ತೆ, ಮಲ್ಲೇಶ್ವರ,ರಿಚಮಂಡ್ ಟೌನ್ಸೇರಿ ನಗರದ ಹಲವು ಪ್ರದೇಶಗಳಲ್ಲಿಬೃಹತ್ ಮರಗಳ ಒಣಗಿದ ರೆಂಬೆ-ಕೊಂಬೆಗಳುಹೆಚ್ಚಾಗಿ ಕಾಣಿಸುತ್ತಿವೆ.ವಿಶೇಷವಾಗಿಚಾಮರಾಜಪೇಟೆಯ ರಾಯನ್ ಸರ್ಕಲ್ಸಮೀಪ, ಸಿಸಿಬಿಸಿಗ್ನಲ್ನಿಂದ ಬರುವ ರಸ್ತೆಯಇಕ್ಕೆಲಗಳಲ್ಲಿ ಬೃತಹ್ರೈನ್‌ಟ್ರೀಗಳಿದ್ದು,ಇವುಗಳಲ್ಲಿದೊಡ್ಡ ಗಾತ್ರದ ಕೊಂಬೆಗಳು ಒಣಗಿನಿಂತಿವೆ. ಈರಸ್ತೆಯಲ್ಲಿ ಮದರ್ ಥೆರೆಸಾ,ಸಂತ ಜೋಸೆಫ್,ಕ್ರಸೆಂಟ್ ಹೀಗೆನಾಲ್ಕೈದು ಶಾಲಾ-ಕಾಲೇಜುಗಳಿದ್ದು,ನಿತ್ಯ ಸಾವಿರಾರುವಿದ್ಯಾರ್ಥಿಗಳು ಇಲ್ಲಿ ಓಡಾಡುತ್ತಾರೆ.ಜೊತೆಗೆಶಾಲಾಮಕ್ಕಳನ್ನು ಕರೆದೊಯ್ಯುವವಾಹನಗಳು ಕೂಡಾ ಇಲ್ಲಿಯೇನಿಂತಿರುತ್ತವೆ.ಒಣಗಿ ನಿಂತಿರುವಕೊಂಬೆಗಳು ಯಾವ ಸಮಯದಲ್ಲಿಬೀಳುತ್ತವೆಯೋ ಎಂಬ ಆತಂಕ ಮಕ್ಕಳುಮತ್ತು ಪೋಷಕರದ್ದಾಗಿದೆ.ಪಕ್ಕದಲ್ಲೇಸಾಕಷ್ಟು ಅಂಗಡಿ ಮುಂಗಟ್ಟುಗಳುಕೂಡಾ ಇವೆ.

ಜಿಬಿಎಅರಣ್ಯ ಇಲಾಖೆ ಅಧಿಕಾರಿಗಳನ್ನುಈ ಬಗ್ಗೆ ಸಂಪರ್ಕಿಸಿದಾಗ;ದೂರುಗಳು ಬಂದಕಡೆಯಲ್ಲಿ ಒಣಗಿದ ಕೊಂಬೆಗಳನ್ನುತೆರವು ಮಾಡುತ್ತಿದ್ದೇವೆ.ಇಲಾಖೆಯಲ್ಲಿಈ ಕಾರ್ಯವನ್ನು ಮಾಡುವುದಕ್ಕಾಗಿಯೇಪ್ರತ್ಯೇಕ ಪಡೆ ರಚಿಸಲಾಗಿದ್ದು,ಅಪಾಯದಲ್ಲಿರುವಕೊಂಬೆಗಳನ್ನು ಗುರುತಿಸಿ ಹಂತಹಂತವಾಗಿ ತೆರವು ಮಾಡುವ ಕಾರ್ಯಮಾಡಲಿದ್ದಾರೆ ಎಂದು ಹೇಳಿದ್ದಾರೆ.

ಜಿಬಿಎ ವ್ಯಾಪ್ತಿಯ ಎಲ್ಲ ಐದು ಪಾಲಿಕೆಗಳಲ್ಲಿ ಮರಗಳ ನಿರ್ವಹಣೆಗೆ ಪ್ರತ್ಯೇಕ ಪಡೆ ಇದ್ದು, ಸಾರ್ವಜನಿಕ ದೂರನ್ನು ಆಧರಿಸಿ ಒಣಗಿದ ಮರಗಳ ಕೊಂಬೆಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಹಗಲು ವೇಳೆಯಲ್ಲಿ ಕಾಮಗಾರಿ ಸಾಧ್ಯವಿಲ್ಲ. ಆದ್ದರಿಂದ ರಾತ್ರಿ ವೇಳೆಯಲ್ಲಿ ಈ ಕಾಮಗಾರಿ ನಡೆಯುತ್ತದೆ. ನಿಯಮಿತವಾಗಿ ನಮ್ಮ ಸಿಬ್ಬಂದಿಗಳು ಪರಿಶೀಲನೆ ನಡೆಸಿ ಅಪಾಯದಲ್ಲಿರುವ ಮರಗಳ ಕೊಂಬೆಗಳನ್ನು ಹಂತ ಹಂತವಾಗಿ ತೆರವುಗೊಳಿಸಲಿದ್ದಾರೆ.

— ಸುದರ್ಶನ್, ಡಿಸಿಎಫ್, ಜಿಬಿಎ ಅರಣ್ಯ ಘಟಕ

ಮರಗಳನ್ನು ಸಂರಕ್ಷಿಸುವುದು ಎಷ್ಟು ಮುಖ್ಯವೋ, ಅಪಾಯಕಾರಿಯಾಗಿರುವ ಒಣಗಿದ ಕೊಂಬೆಗಳನ್ನು ತೆರವುಗೊಳಿಸಿ, ಆಗಬಹುದಾದ ಅಪಾಯವನ್ನು ತಡೆಗಟ್ಟುವುದು ಕೂಡಾ ಅಷ್ಟೇ ಮುಖ್ಯ. ಬಿಬಿಎಂಪಿ ಫಾರೆಸ್ಟ್ ಮ್ಯಾನುಯಲ್‌ನಲ್ಲಿ ಮರಗಳ ಅಪಾಯವನ್ನು ಪರಿಶೀಲಿಸುವ ಬಗ್ಗೆ ಉಲ್ಲೇಖವಿದೆ. ಅದನ್ನು ಸರಿಯಾಗಿ ಪಾಲಿಸಬೇಕು.

— ಚನ್ನಬಸವಾರಾಧ್ಯ, ಚಾಮರಾಜಪೇಟೆ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net