ರಾಷ್ಟ್ರೀಯ ಏಕತೆ ಬಯಸಿದ ದೇಶ ಭಕ್ತ ಡಾ ಶ್ಯಾಮ ಪ್ರಸಾದ್ ಮುಖರ್ಜಿ: ಚಂದು ಪಾಟೀಲ್

,
,
Published on
ಕಲಬುರಗಿ: ಡಾ ಶ್ಯಾಮ ಪ್ರಸಾದ್ ಮುಖರ್ಜಿ ಅವರು ರಾಷ್ಟ್ರೀಯ ಏಕತೆ ಹಾಗೂ ಅಖಂಡತೆಯನ್ನು ಬಯಸಿದ್ದ ಒಬ್ಬ ಅಪ್ರತಿಮ ದೇಶಭಕ್ತರಾಗಿದ್ದರು ಎಂದು ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಅಭಿಪ್ರಾಯಪಟ್ಟರು.
ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಡಾ ಶ್ಯಾಮ ಪ್ರಸಾದ್ ಮುಖರ್ಜಿ ಅವರ 125 ನೇ ಜನ್ಮದಿನದ ಅಂಗವಾಗಿ ನಡೆದ ಸ್ಮರಣ ಪಾಕ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದ ಪ್ರಗತಿ ಹಾಗೂ ಸಂಘಟನೆಯ ಬಲವರ್ಧನೆ ನಿಟ್ಟಿನಲ್ಲಿ ಸಮರ್ಪಿತರಾಗಿ ಕೆಲಸ ಮಾಡಲು ಡಾ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಚಿಂತನೆಗಳು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಸದಾ ಸ್ಫೂರ್ತಿ ನೀಡುತ್ತವೆ ಎಂದು ಸ್ಮರಣ ಪಾಕ್ಷಿಕ ಕಾರ್ಯಕ್ರಮಗಳ ಜಿಲ್ಲಾ ಸಂಚಾಲಕ ಡಾ ಅಂಬಾರಾಯ ಅಷ್ಠಗಿ ಬಣ್ಣಿಸಿದರು.
ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ
ಅಂಗವಾಗಿ ಉಳಿಯಬೇಕು ಹಾಗೂ ಭಾರತದ ಅಖಂಡತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಬೇಕು ಎಂಬ ಉದ್ದೇಶಕ್ಕಾಗಿ ಡಾ. ಶ್ಯಾಮಪ್ರಸಾದ್ ಮುಖರ್ಜಿ ರವರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ್ ಹಾಗೂ ಕಲಬುರಗಿ ವಿಭಾಗೀಯ ಸಹ ಪ್ರಭಾರಿ ಶರಣಪ್ಪ ತಳವಾರ ಹೇಳಿದರು
ಇದೇ ವೇಳೆ ಮಾಜಿ ಪ್ರಧಾನಿ ಡಾ ಬಾಬು ಜಗಜೀವನ ರಾಮ ಅವರ ಪುಣ್ಯತಿಥಿ ಅಂಗವಾಗಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ದೇಶಕ್ಕೆ ನೀಡಿದ ಕೊಡುಗೆ ಕುರಿತು ಪಕ್ಷದ ಪ್ರಮುಖರು ಮಾತನಾಡಿದರು.
ಈ ಸಂದರ್ಭದಲ್ಲಿ , ಮಹಾನಗರ ಜಿಲ್ಲಾಧ್ಯಕ್ಷ, ಚಂದು ಪಾಟೀಲ್, ಮಾಜಿ ಸದಸ್ಯ ಅಮರನಾಥ ಪಾಟೀಲ್, ಬಿಜೆಪಿ ಕಲಬುರಗಿ ವಿಭಾಗೀಯ ಸಹ ಪ್ರಭಾರಿ ಶರಣಪ್ಪ ತಳವಾರ, ಬಿಜೆಪಿ ಕಲಬುರಗಿ ಜಿಲ್ಲಾ (ಗ್ರಾಮಾಂತರ) ಪ್ರಧಾನ ಕಾರ್ಯದರ್ಶಿ ಲಿಂಗರಾಜ ಬಿರಾದಾರ, ಸ್ಮರಣ ಪಾಕ್ಷಿಕ ಕಾರ್ಯಕ್ರಮಗಳ ಬಿಜೆಪಿ ಜಿಲ್ಲಾ (ಗ್ರಾಮಾಂತರ) ಸಂಚಾಲಕ ಡಾ ಅಂಬಾರಾಯ ಅಷ್ಠಗಿ, ಮಹಾನಗರ ಜಿಲ್ಲಾ ಸಂಚಾಲಕ ಸುಂದರ್ ಕುಲಕರ್ಣಿ, ಸಹ ಸಂಚಾಲಕರಾದ ಭಾಗಿರಥಿ ಗುನ್ನಾಪೂರ, ಸುಂದರ್ ಸಾಗರ, ಮಲ್ಲಣ್ಣ ಕುಲಕರ್ಣಿ, ಪ್ರಮುಖರಾದ ಅಪ್ಪು ಕಣಕಿ, ಧರ್ಮಣ್ಣ ಇಟಗಾ, ನಂದಾ ಬಾಬಾ, ಉಮೇಶ್ ಪಾಟೀಲ್, ಶಿವಯೋಗಿ ನಾಗನಳ್ಳಿ, ಎಸ್ ಜಿ ಭಾರತಿ, ಮಲ್ಲಿಕಾರ್ಜುನ ಜಿನಕೇರಿ, ಸಚೀನ ಕಡಗಂಚಿ, ಗಿರೀಶ್ ಭಜಂತ್ರಿ, ಬಸವರಾಜ ಮಾಲಿ ಬಿರಾದಾರ, ಸೇರಿದಂತೆ ಪಕ್ಷದ ಪದಾಧಿಕಾರಿಗಳು,ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಹ ಸಂಚಾಲಕಿ ಭಾಗಿರಥಿ ಗುನ್ನಾಪುರ ಸ್ವಾಗತಿಸಿದರು, ಸುಂದರ್ ಸಾಗರ ನಿರುಪಿಸಿದರು. ಮಲ್ಲಿಕಾರ್ಜುನ ಜಿನಕೇರಿ ವಂದನಾರ್ಪಣೆ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net