ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ ಡಾ. ಆರ್. ಸುನಂದಮ್ಮ

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ ಡಾ. ಆರ್. ಸುನಂದಮ್ಮ ಅಧಿಕಾರ ಸ್ವೀಕಾರ
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ ಡಾ. ಆರ್. ಸುನಂದಮ್ಮ ಅಧಿಕಾರ ಸ್ವೀಕಾರ
Published on

ಪ್ರಮುಖ ಮುಖ್ಯಾಂಶಗಳು

  • ಡಾ. ಎಚ್.ಎಲ್. ಪುಷ್ಪ ಅವರಿಂದ ಅಧಿಕಾರ ಹಸ್ತಾಂತರ
  • ಮೂರು ವರ್ಷಗಳ ಅವಧಿಕಯ ಅಧ್ಯಕ್ಷೀಯ ಸ್ಥಾನ
  • ಅಧ್ಯಕ್ಷರಿಂದ ಸಂಘದ ಪದಾಧಿಕಾರಿಗಳ ಆಯ್ಕೆ
ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೀಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿರುವ ಡಾ. ಆರ್. ಸುನಂದಮ್ಮ ಅವರು ಸೋಮವಾರ ಅಧಿಕಾರ ವಹಿಸಿಕೊಂಡರು.
ಚಾಮರಾಜಪೇಟೆಯ ಸಂಘದ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಈ ಮೊದಲು ಅಧ್ಯಕ್ಷೆಯಾಗಿದ್ದ ಡಾ. ಎಚ್.ಎಲ್. ಪುಷ್ಪ ಅವರು ನೂತನ ಅಧ್ಯಕ್ಷರಿಗೆ ಅಧಿಕೃತವಾಗಿ ಅಧಿಕಾರ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯ ಲೇಖಕಿಯರಾದ ಡಾ.ವಸುಂಧರಾ ಭೂಪತಿ, ಡಾ.ಸಬೀಹಾ ಭೂಮಿಗೌಡ, ಹೇಮಾ ಪಟ್ಟಣಶೆಟ್ಟಿ, ಎನ್.ಗಾಯತ್ರಿ, ಡಾ.ಎಂ.ಎಸ್ .ಆಶಾ ದೇವಿ, ಸರ್ವಮಂಗಳಾ, ಜಯಲಕ್ಷ್ಮೀಪಾಟೀಲ, ಸುಮಾ ಸತೀಶ್, ಮಂಜುಳಾ ಶಿವಾನಂದ ಇತರರು ಹಾಜರಿದ್ದು, ನೂತನ ಅಧ್ಯಕ್ಷರಿಗೆ ಶುಭ ಕೋರಿದರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೀಯ ಸ್ಥಾನವು ಮುಂದಿನ ಮೂರು ವರ್ಷಗಳ ಅವಧಿಗೆ ಇರಲಿದ್ದು ಆಯ್ಕೆಯಾದ ಅಧ್ಯಕ್ಷರು ಸಂಘದ ಪದಾಧಿಕಾರಿಗಳ ಆಯ್ಕೆ ಮಾಡಲಿದ್ದು ಕಾರ್ಯಚಟುವಟಿಕೆಗಳನ್ನು ರೂಪಿಸಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net