ಡಾ.ಫ.ಗು.ಹಳಕಟ್ಟಿ ವಚನ ಗುಮ್ಮಟ

ಯಾದಗಿರಿ ನಗರದ ಲಿಂಗೇರಿ ಕೋನಪ್ಪ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಏರ್ಪಡಿಸಿದ್ದ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಜಯಂತಿ ಮತ್ತು ವಚನ ಸಂರಣಾ ದಿನ ಕಾರ್ಯಕ್ರಮದಲ್ಲಿ ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ, ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ, ಪ್ರಾಚಾರ್ಯ ಗುರಪ್ಪಾಚಾರ್ಯ ವಿಶ್ವಕರ್ಮ, ಉತ್ತರಾದೇವಿ ಇತರರಿದ್ದರು.
ಯಾದಗಿರಿ ನಗರದ ಲಿಂಗೇರಿ ಕೋನಪ್ಪ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಏರ್ಪಡಿಸಿದ್ದ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಜಯಂತಿ ಮತ್ತು ವಚನ ಸಂರಣಾ ದಿನ ಕಾರ್ಯಕ್ರಮದಲ್ಲಿ ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ, ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ, ಪ್ರಾಚಾರ್ಯ ಗುರಪ್ಪಾಚಾರ್ಯ ವಿಶ್ವಕರ್ಮ, ಉತ್ತರಾದೇವಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಬಣ್ಣನೆ
  • ಲಿಂಗೇರಿ ಕೋನಪ್ಪ ಶಿಕ್ಷಣ ಸಂಸ್ಥೆಯಲ್ಲಿ ಜಯಂತಿ ಕಾರ್ಯಕ್ರಮ
ಯಾದಗಿರಿ: ವಚನ ಸಾಹಿತ್ಯದ ಉಳಿವಿಗೆ ಅವಿರತ ಶ್ರಮವಹಿಸಿದ್ದ ಡಾ.ಫ.ಗು. ಹಳಕಟ್ಟಿ ಸಮಾಜದ ವಚನಗುಮ್ಮಟ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಬಣ್ಣಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದಡಿ ನಗರದ ಲಿಂಗೇರಿ ಕೋನಪ್ಪ ಶಿಣ ಸಂಸ್ಥೆಯಲ್ಲಿ ಗುರುವಾರ ಏರ್ಪಡಿಸಿದ್ದ ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಜಯಂತಿ ಮತ್ತು ವಚನ ಸಂರಣಾ ದಿನ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಮನೆ&ಮಠ, ಜಗುಲಿಗಳಲ್ಲಿ ಪೂಜಿಸುತ್ತಿದ್ದ ತಾಡೋಲೆಗಳನ್ನು ಹುಡುಕಿ ತಂದು ಅದರಲ್ಲಿನ ಅರ್ಥ ಬಿಡಿಸಿದ ಅವರು ಸಂಗ್ರಹಿಸಿದ್ದ ರಾಶಿ&ರಾಶಿ ವಚನಗಳನ್ನು ಮುದ್ರಿಸಿ ಜನರಿಗೆ ತಲುಪಿಸಲು 1925ರಲ್ಲಿ ಹಿತಚಿಂತಕ ಮುದ್ರಣಾಲಯ ಆರಂಭಿಸಿದರು. ಮುದ್ರಣ ಯಂತ್ರ ಖರೀದಿಸಲು ಆರ್ಥಿಕ ತೊಂದರೆ ಉಂಟಾದಾಗ ವಕೀಲಿ ವೃತ್ತಿಯಿಂದ ಸಂಪಾದಿಸಿ ಕಟ್ಟಿಸಿದ್ದ ತಮ್ಮ ಮನೆ ಮಾರಿ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸಿದ ಮಹಾನ್​ ವ್ಯಕ್ತಿ ಎಂದರು.
ಸ್ವತ@ ಮೊಳೆಗಳನ್ನು ಜೋಡಿಸಿ ಅಚ್ಚು ಹಾಕಿ ಕಾಲುಗಳಿಂದ ಪೆಡಲ್​ ತುಳಿದು ಮುದ್ರಿಸಿ ಪ್ರಕಟಿಸಿ 250 ವಚನಕಾರರ ವಚನ ಮತ್ತು ಸಾಹಿತ್ಯವನ್ನು ಹೊರತಂದ ಹಳಕಟ್ಟಿಯವರು, ಈ ಕಾರ್ಯ ಕೈಗೊಳ್ಳುವ ಮುನ್ನ ಕೇವಲ 50 ವಚನಕಾರರ ವಚನಗಳು ಮಾತ್ರ ಬೆಳಕು ಕಂಡಿದ್ದವು. ಇದು ವಚನ ಸಾಹಿತ್ಯಕ್ಕೆ ಅವರು ನೀಡಿದ ಅವಿಸ್ಮರಣೀಯ ಕೊಡುಗೆ ಎಂದು ಹೇಳಿದರು.
ಉಪನ್ಯಾಸಕ ಸತೀಶಕುಮಾರ ಹವಾಲ್ದಾರ ಮಾತನಾಡಿದರು. ಯುಡಾ ಅಧ್ಯ ಬಾಬುರಾವ ಕಾಡ್ಲೂರ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ, ಉಪನ್ಯಾಸಕ ಬಸವರಾಜ ಜುಗೇರಿ, ಕಾಲೇಜು ಪ್ರಾಂಶುಪಾಲ ಗುರುಪ್ಪಾಚಾರ್ಯ ಎಂ.ವಿಶ್ವಕರ್ಮ ಇತರರಿದ್ದರು. ಅಶೋಕ ರಾಜನಕೋಳ್ಳೂರ ಮತ್ತು ಸಂಗಡಿಗರಿಂದ ನಾಡಗೀತೆ ನಡೆಯಿತು.
ವಿಜಯಪುರದಲ್ಲಿ ಭೂತನಾಳ ಕೆರೆ ನಿರ್ಮಿಸಿದ್ದ ಭಗೀರಥ
ನಾಡಿನ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಫ.ಗು.ಹಳಕಟ್ಟಿ ಅವರು ವಿಜಯಪುರ ನಗರಸಭೆ ಅಧ್ಯರಾಗಿದ್ದಾಗ ಬೆಳೆಯುತ್ತಿರುವ ನಗರಕ್ಕೆ ಕುಡಿಯುವ ನೀರು ಒದಗಿಸಲು ಸರ್​ ಎಂ.ವಿಶ್ವೇಶ್ವರಯ್ಯ ಅವರನ್ನು ಕರೆಸಿ ತಾಂತ್ರಿಕ ಸಹಾಯ ಪಡೆದು ಭೂತನಾಳ ಕೆರೆ ನಿರ್ಮಿಸಿದ್ದು ಅವರ ದೂರದೃಷ್ಟಿಗೆ ಸಾ ಎಂದು ಉಪನ್ಯಾಸಕ ಸತೀಶಕುಮಾರ ಹವಾಲ್ದಾರ ಸ್ಮರಿಸಿದರು. ಮುಂಬೈ ವಿಧಾನ ಪರಿಷತ್​ ಸದಸ್ಯರಾಗಿ ಬಿಜಾಪುರದಲ್ಲಿ ಬರಗಾಲ ನಿವಾರಣಾ ಸಂಸ್ಥೆ ಆರಂಭಿಸಿ ಕೃಷಿ ಪರ್ಯಾಯ ಚಟುವಟಿಕೆ ಕೇಂದ್ರವಾಗಿಸಿದ ಹಳಕಟ್ಟಿ ಅವರ ಸ್ಮಾರಕವನ್ನು ಬಿಎಲ್​ಡಿಇ ಸಂಸ್ಥೆ ಅಧ್ಯ ಎಂ.ಬಿ. ಪಾಟೀಲ್​ ನಿರ್ಮಿಸಿದ್ದಲ್ಲದೆ ವಚನ ಸಾಹಿತ್ಯ ಸಂಶೋಧನಾ ಕೇಂದ್ರ ಆರಂಭಿಸಿ ಹಳಕಟ್ಟಿಯವರು ಜೀವಿತಾವಧಿಯಲ್ಲಿ ಪ್ರಕಟಿಸಿದ ಎಲ್ಲ ಸಾಹಿತ್ಯವನ್ನು 15 ಸಮಗ್ರ ಸಂಪುಟಗಳಲ್ಲಿ ಹೊರತಂದಿದ್ದಾರೆ. ಹಳಕಟ್ಟಿಯವರ ಜನ್ಮದಿನವನ್ನು ಸರ್ಕಾರ ವಚನ ಸಾಹಿತ್ಯ ಸಂರಣಾ ದಿನವಾಗಿ ೂಷಿಸಿದ್ದು ಸ್ತುತ್ಯರ್ಹ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net