ಸಮಚಿತ್ತದಿಂದ ವಿಶ್ವವಿದ್ಯಾಲಯವನ್ನು ಮುನ್ನಡೆಸಿದ ಡಾ. ಜಯಕರ್: ಡಾ. ಅಶ್ವತ್ಥ ನಾರಾಯಣ ಶ್ಲಾಘನೆ
ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಡಾ. ಎಸ್.ಎಂ. ಜಯಕರ್ ಅಭಿನಂದನಾ ಸಮಾರಂಭ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಡಾ. ಜಯಕರ್ ನಾಯಕತ್ವದಲ್ಲಿ ಬೆಂ.ವಿವಿ ನ್ಯಾಕ್ ಎ++ ಮಾನ್ಯತೆ ಹಾಗೂ ಪಿಎಂ ಉಷಾ ಯೋಜನೆ ಸೇರಿ ಮಹತ್ತರ ಸಾಧನೆಗಳ ಮೂಲಕ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯವಾಗಿದೆ.
ಎಂದಿಗೂ ಅಧಿಕಾರದ ಹಿಂದೆ ಹೋಗದೆ ಪ್ರತಿ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮತ್ತು ಯಶಸ್ವಿಯಾಗಿ ನಿಭಾಯಿಸಿದ್ದಾರೆ
ಅಭಿನಂದನಾ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್. ರವಿ,
ಬೆಂಗಳೂರು: ಒಂದು ಸಂಸ್ಥೆಯ ಬೆಳವಣಿಗೆಗೆ ವಿಶ್ವಾಸ, ಪ್ರಾಮಾಣಿಕತೆ ಹಾಗೂ ಸಮನ್ವಯ ಅತ್ಯಗತ್ಯ. ಕುಲಪತಿಯಾಗಿ ಡಾ. ಎಸ್.ಎಂ. ಜಯಕರ್ ಈ ಮೂರೂ ಗುಣಗಳನ್ನು ಅಳವಡಿಸಿಕೊಂಡು ವಿಶ್ವವಿದ್ಯಾಲಯವನ್ನು ಮುನ್ನಡೆಸಿದ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ ಎಂದು ಮಾಜಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಕರ ಪರಿಷತ್ ವತಿಯಿಂದ ಜ್ಞಾನಭಾರತಿ ಆವರಣದ ಎಚ್. ನರಸಿಂಹಯ್ಯ ಸಭಾಂಗಣದಲ್ಲಿ ಬೆಂ.ವಿವಿ ಕುಲಪತಿ ಡಾ. ಎಸ್.ಎಂ. ಜಯಕರ್ ಅವರ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಜಯಕರ್ ನಾಯಕತ್ವದಲ್ಲಿ ಬೆಂ.ವಿವಿ ನ್ಯಾಕ್ ಎ++ ಮಾನ್ಯತೆ ಹಾಗೂ ಪಿಎಂ ಉಷಾ ಯೋಜನೆ ಸೇರಿ ಮಹತ್ತರ ಸಾಧನೆಗಳ ಮೂಲಕ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯವಾಗಿದೆ. ಅವರು ಎಂದಿಗೂ ಅಧಿಕಾರದ ಹಿಂದೆ ಹೋಗದೆ ಪ್ರತಿ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮತ್ತು ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದರು.
ಅಭಿನಂದನಾ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್. ರವಿ, ಡಾ. ಜಯಕರ್ ಸರಳ, ಸಜ್ಜನರಾಗಿದ್ದು ಸಮಚಿತ್ತವಾಗಿ ವಿಶ್ವವಿದ್ಯಾಲಯವನ್ನು ನಿರ್ವಹಣೆ ಮಾಡಿದ್ದಾರೆ. ಮಾತ್ರವಲ್ಲ, ವಿಶ್ವವಿದ್ಯಾಲಯವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿರುವುದು ಅಭಿನಂದನೀಯ ಎಂದರು.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ. ಎಸ್.ಆರ್. ನಿರಂಜನ, ವಿಶ್ರಾಂತ ಕುಲಪತಿ ಪ್ರೊ. ರಾಮಚಂದ್ರ ಗೌಡ, ಬೆಂ.ವಿವಿ ಕುಲಸಚಿವೆ ಕೆ.ಟಿ. ಶಾಂತಲಾ, ಕುಲಸಚಿವ (ಮೌಲ್ಯಮಾಪನ) ಪ್ರೊ. ಸಿ.ಎಸ್. ಕರಿಗಾರ್ ಸೇರಿ ವಿಶ್ವವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಎಲ್ಲರ ಸಹಕಾರದಿಂದ ಬೆಂಗಳೂರು ವಿಶ್ವವಿದ್ಯಾಲಯದ ಸಮಗ್ರ ಅಭಿವೃದ್ಧಿಯ ಸಾಧನೆ ಸಾಧ್ಯವಾಗಿದೆ. ಈ ಅಭಿನಂದನೆ ನನಗಲ್ಲ ನಿಮಗೆ ಸಲ್ಲಬೇಕು.ಈ ಹಾದಿಯಲ್ಲಿ ಕೈ ಜೋಡಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.