ಕಲಬುರಗಿ: ಹಿರಿಯ ಸ್ವಾತಂತ್ರ್ಯ ಯೋಧ, ಭಾರತ ಸೇವಾದಳದ ಸಂಸ್ಥಾಪಕ ಪದ್ಮಭೂಷಣ ಡಾ.ನಾ.ಸು.ಹರ್ಡೀಕರ್ ಸೇವೆ ಅನನ್ಯ ಎಂದು ವಿಧಾನ ಪರಿಷತ್ ಸದಸ್ಯ, ಸೇವಾದಳ ಜಿಲ್ಲಾ ಟಕದ ಅಧ್ಯ ಶಶಿಲ್ ನಮೋಶಿ ಹೇಳಿದರು.
ಭಾರತ ಸೇವಾದಳ ಜಿಲ್ಲಾ ಹಾಗೂ ತಾಲೂಕು ಸಮಿತಿ ವತಿಯಿಂದ ಸೇವಾದಳದ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಡಾ. ನಾರಾಯಣರಾವ ಸುಬ್ಬರಾವ ಹರ್ಡೀಕರ್ 137ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯತೆ ವಹಿಸಿ ಮಾತನಾಡಿ, ಯುವಕರು ಇವರ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸೇವಾದಳದ ಜಿಲ್ಲಾ ಕಾರ್ಯದರ್ಶಿ ಸುರೇಶ ಬಡಿಗೇರ್ ಮಾತನಾಡಿ, ಸ್ವಾತಂತ್ರ$್ಯ ಸಂಗ್ರಾಮದಲ್ಲಿ ಯುವಕರನ್ನು ಒಂದೆಡೆ ಸೇರಿಸಿ ರಾಷ್ಟ್ರಪ್ರೇಮ ಮತ್ತು ಹೋರಾಟದ ಹೆಜ್ಜೆಗಳನ್ನು ಡಾ.ಹರ್ಡೀಕರ್ ಸರ್ವರಿಗೂ ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಸದಸ್ಯ ಮಂಜುನಾಥ ನಾಲವಾರಕರ್ ಮಾತನಾಡಿ, ಇಂದಿನ ಯುವಕರಿಗೆ ಶಿಸ್ತು, ಸಂಟನೆ, ಸೇವಾ ಮನೋಭಾವನೆ ಜತೆಗೆ ಯುವಕರಿಗೆ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯಕತೆ ಇದೆ ಎಂದರು.
ಜಿಲ್ಲಾ ಸಂಟಕ ಚಂದ್ರಶೇಖರ ಜಮಾದಾರ ಪ್ರಾಸ್ತಾವಿಕ ಮಾತನಾಡಿ, ಹರ್ಡೀಕರ್ ಜೀವನ ಸಾಧನೆಯ ಹಾಗೂ ಸೇವಾದಳದ ಕುರಿತು ವಿವರಿಸಿದರು.
ಶಿವಶರಣಪ್ಪ ಜಮಾದಾರ್, ತಾಲೂಕು ಸಮಿತಿ ಅಧ್ಯ ಜಯಪ್ರಕಾಶ ಕಟ್ಟಿಮನಿ, ಕಾರ್ಯದರ್ಶಿ ಗುರುಲಿಂಗಯ್ಯ ವಿಶ್ವನಾಥಮಠ, ನಾಗರಾಜ ನಂದೂರ, ಸಂಪನ್ಮೂಲ ಶಿಕ ಲಕ್ಷಿ$್ಮಪುತ್ರ ಪೂಜಾರಿ ಇತರರಿದ್ದರು.