ಮಹಾದಾಸೋಹಿ ಶರಣಬಸವೇಶ್ವರ 204ನೇ ಜಾತ್ರಾ ಮಹೋತ್ಸವದ ಉದ್ಘಾಟಿಸಿ ಮಾತನಾಡಿದರು, ಶರಣಬಸವೇಶ್ವರ ಸಂಸ್ಥೆಯು ನಿರಂತರವಾಗಿ ಕಾಯಕ ದಾಸೋಹ, ಶಿಕ್ಷಣ ಮಾಡುತ್ತಾ ಬಂದಿದೆ, ಪೂಜ್ಯ ಅಪ್ಪನವ ಜೀವನ ದರ್ಶನ ಕುರಿತು ಮತ್ತು ದಾಸೋಹ ಸೂತ್ರಗಳ ನುಪುರ ಜೇಂಕಾರ ನೃತ್ಯವು ವಿಶೇಷವಾಗಿದೆ, ಜಾತ್ರಾ ಮಹೋತ್ಸವ ಸರಳವಾಗಿ ಜರುಗಲಿ ಎಲ್ಲರೂ ಸಹಕರಿಸಿ ಎಂದು ಹೇಳಿದರು,ಕಾರ್ಯಕ್ರಮದ ಮುಖ್ಯ ಅತಿಥಿಯಾದ ಕಲಬುರಗಿ ರಂಗಾಯಣದ ನಿರ್ದೇಶಕರಾದ ಡಾ.ಸುಜಾತಾ ಜಂಗಮಶೆಟ್ಟಿ ಮಾತನಾಡಿ, ನಾಟಕಗಳು ನಿಜವಾದ ಕಲೆ ತಿಳಿಸುತ್ತವೆ, ಪೂಜ್ಯ ಅಪ್ಪ ಅವರು ಈ ಭಾಗದ ಕಲೆಗೆ ಹೆಚ್ಚು ಪ್ರೋತ್ಸಾಹ ನೀಡಿ ಬೆಳೆಸಿದ್ದಾರೆ, ಶರಣಬಸವೇಶ್ವರ ಜಾತ್ರೆಯಲ್ಲಿ ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದವು, ಪೂಜ್ಯ ಡಾ.ಅವ್ವ ಅವರು ಒಳ್ಳೆಯ ಕಾರ್ಯಕ್ರಮಕ್ಕೆ ಕೈ ಜೋಡಿಸುತಾ ಬರುತ್ತಾರೆ ಎಂದು ಹೇಳಿದರು,